Gold Price : ಈ ವಾರಾಂತ್ಯದಲ್ಲಿ ಚಿನ್ನ, ಬೆಳ್ಳಿ ಬೆಲೆಗಳು ಏರಿಕೆಯಾಗಿದೆ. ಚಿನ್ನದ ಬೆಲೆ 390 ರೂ ಹೆಚ್ಚಿದರೆ, ಬೆಳ್ಳಿ ಬೆಲೆ 10 ರೂಗೆ ಏರಿದೆ.

Gold Price : ಜಾಗತಿಕವಾಗಿ ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿರುವ ಚಿನ್ನ-ಬೆಳ್ಳಿ ದರದಲ್ಲಿ ಹಾವು ಏಣಿ ಆಟ ಮುಂದುವರಿದಿದೆ. ಈ ವಾರದ ಹೆಚ್ಚಿನ ದಿನ ಕುಸಿತ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ವಾರಾಂತ್ಯದಲ್ಲಿ ಮತ್ತೆ ಏರಿಕೆ ಕಂಡಿವೆ.
ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ 300 ರೂಪಾಯಿಗೂ ಹೆಚ್ಚಳವಾಗಿದ್ದು, ಆಭರಣ ಚಿನ್ನದ ದರ ಮತ್ತೆ 14,000 ರೂಪಾಯಿ ಗಡಿ ದಾಟಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಕೂಡ ಚಿನ್ನದ ಬೆಲೆಯಲ್ಲಿ ಏರಿಕೆ ದಾಖಲಾಗಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್ 22 ಕ್ಯಾರಟ್ ಚಿನ್ನದ ಬೆಲೆ 1,43,550 ರೂಪಾಯಿಗೆ ತಲುಪಿದ್ದು, 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ 1,56,600 ರೂಪಾಯಿ ಆಗಿದೆ. ಬೆಳ್ಳಿ ಬೆಲೆಯಲ್ಲೂ ಏರಿಕೆ ಕಂಡುಬಂದಿದ್ದು, ಪ್ರತಿ ಗ್ರಾಮ್ಗೆ 10 ರೂಪಾಯಿ ಹೆಚ್ಚಳವಾಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 28,500 ರೂಪಾಯಿಯಲ್ಲಿ ಇದೆ.
ಇದನ್ನೂ ಓದಿ : ತಾಳಿ ಕಟ್ಟೋ ಟೈಂಗೆ ಎಂಟ್ರಿ ಕೊಟ್ಟ ಮೊದಲ ಹೆಂಡ್ತಿ! 2ನೇ ಮದುವೆ ಕನಸಿನಲ್ಲಿದ್ದವನಿಗೆ ಶಾಕ್
ಫೆಬ್ರವರಿ 8ರಂದು ಭಾರತದ ಚಿನ್ನ–ಬೆಳ್ಳಿ ದರಗಳು:
- 24 ಕ್ಯಾರಟ್ ಚಿನ್ನ (1 ಗ್ರಾಂ): ₹15,660
- 22 ಕ್ಯಾರಟ್ ಚಿನ್ನ (1 ಗ್ರಾಂ): ₹14,355
- 18 ಕ್ಯಾರಟ್ ಚಿನ್ನ (1 ಗ್ರಾಂ): ₹11,745
- ಬೆಳ್ಳಿ (1 ಗ್ರಾಂ): ₹285

ಬೆಂಗಳೂರು ಮಾರುಕಟ್ಟೆ ದರ:
- 24 ಕ್ಯಾರಟ್ ಚಿನ್ನ (1 ಗ್ರಾಂ): ₹15,660
- 22 ಕ್ಯಾರಟ್ ಚಿನ್ನ (1 ಗ್ರಾಂ): ₹14,355
- ಬೆಳ್ಳಿ (1 ಗ್ರಾಂ): ₹285
ಬೆಂಗಳೂರು ಸೇರಿದಂತೆ ತಮಿಳುನಾಡು, ಕೇರಳ ಮೊದಲಾದ ರಾಜ್ಯಗಳಲ್ಲೂ 100 ಗ್ರಾಮ್ ಬೆಳ್ಳಿ ಬೆಲೆ 28,500 ರೂಪಾಯಿಯ ಮಟ್ಟದಲ್ಲಿ ಸ್ಥಿರವಾಗಿದೆ.
MUST WATCH : ತಾಳಿ ಕಟ್ಟೋ ಟೈಂಗೆ ಎಂಟ್ರಿ ಕೊಟ್ಟ ಮೊದಲ ಹೆಂಡ್ತಿ- ಮದುವೆನೇ ಕ್ಯಾನ್ಸಲ್ ಮಾಡಿಸಿದ್ಳು




