Kunigal : ತಾಳಿ ಕಟ್ಟೋ ವೇಳೆ ಮಂಟಪಕ್ಕೆ ನುಗ್ಗಿದ ಮೊದಲ ಪತ್ನಿ.. ಯುವತಿಗೆ ‘ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ’ ಅಂತಿದ್ದವ್ನಿಗೆ ಶಾಕ್..!

ಇತ್ತೀಚಿನ ದಿನಗಳಲ್ಲಿ ಸಂಬಂಧಕ್ಕೆ ಬೆಲೆಯೇ ಇಲ್ಲದಂತಾಗಿದೆ. Social Media ಜಮಾನ ಬಂದು ಜನರು ಹಾಳಾಗಿ ಹೋಗಿಬಿಟ್ಟಿದ್ದಾರೆ. ಮದುವೆ ಆಗಿ, ಮುದ್ದಾದ ಸಂಗಾತಿ ಇದ್ರು ಅಕ್ರಮ ಸಂಬಂಧ ಇಟ್ಟುಕೊಳ್ಳೋದು, ಅಥವಾ ಮತ್ತೊಂದು ಮದುವೆ ಆಗೋದು ಕಾಮನ್ ಅಗಿಬಿಟ್ಟಿದೆ.
2ನೇ ಮದುವೆ ಕನಸಿನಲ್ಲಿದ್ದವನಿಗೆ ಶಾಕ್
ಮದುವೆ ಆಗಿ ಜೀವನ ಮೂರ್ತಿ ನಿನ್ನ ಕಷ್ಟ- ಸುಖದಲ್ಲಿ ಜೊತೆಯಲ್ಲಿ ಇರ್ತೀನಿ ಅಂತಾ ಮಾತು ಕೊಟ್ಟಿ ಸಪ್ತಪದಿ ತುಳಿದಿದ್ದ ಕಿರಾತಕ ಗಂಡ, ತನ್ನನ್ನ ನಂಬಿ ಬಂದವಳಿಗೆ ಮೋಸ ಮಾಡಿ ಮತ್ತೊಂದು ಮದುವೆ ಆಗಲು ಮುಂದಾಗಿದ್ದು, ಮಧುಮಗನ ಗೆಟಪ್ನಲ್ಲಿ ಇದ್ದ ಕಿರಾತಕ ಗಂಡನಿಗೆ ಮೊದಲ ಪತ್ನಿ ಶಾಕ್ ಕೊಟ್ಟಿದ್ದು, ತಾಳಿ ಕಟ್ಟೋ ಕೆಲವೇ ಕ್ಷಣಗಳಲ್ಲಿ ಸಿನಿಮೀಯಾ ಸ್ಟೈಲ್ನಲ್ಲಿ ಮದುವೆ ಮುರಿದು ಹೋಗಿರೋ ಘಟನೆ ತುಮಕೂರು ಜಿಲ್ಲೆ Kunigal ಪಟ್ಟಣದಲ್ಲಿ ನಡೆದಿದೆ.

ಸಿನಿಮೀಯ ಸ್ಟೈಲ್ನಲ್ಲಿ ನಿಂತೆ ಹೋಯ್ತು ಮದುವೆ..!
ಮಿರಿ ಮಿರಿ ಅಂತಾ ಹೊಳೆಯುತ್ತಿದ್ದ ಬಿಳಿ ಪಂಚೆ, ಶರ್ಟ್, ಮೈಸೂರು ಪೇಟ ತೊಟ್ಟಿ ಹಸೆಮಣೆ ಏರಿದ್ದ ಮದುಮಗ ಇನ್ನೇನು ತಾಳಿ ಕಟ್ಟಬೇಕು ಅನ್ನೋ ಅಷ್ಟರಲ್ಲಿ ಮದುವೆ ಮನೆಗೆ ಬಿರುಗಾಳಿಯಂತೆ ಮೊದಲ ಪತ್ನಿ ಎಂಟ್ರಿ ಕೊಟ್ಟಿದ್ಳು. ಇತ್ತ ತಾಳಿ ಹಿಡಿದು ಕೂತಿದ್ದ ಗಂಡಿಗೆ ಮೊದಲ ಪತ್ನಿ ಎಂಟ್ರಿ ಆಗ್ತಾ ಇದ್ದಂತೆ ಅಲ್ಲೇ ಪತರುಗುಟ್ಟಿ ಹೋಗಿದ್ದ. ಕೊನೆಗೆ ಸಿನಿಮಾ ಸ್ಟೈಲ್ನಲ್ಲಿ ಮುಹೂರ್ತದ ಕೆಲವೇ ಕ್ಷಣಗಳಲ್ಲಿ ಮದುವೆಯೇ ಕ್ಯಾನ್ಸಲ್ ಆಗಿರೋ ಘಟನೆ ಕುಣಿಗಲ್ ತಾಲೂಕಿನ ಯಡಿಯೂರು ಬಳಿಯ SLN ಕನ್ವೇಷನ್ ಹಾಲ್ನಲ್ಲಿ ನಡೆದಿದೆ.

ತಾಳಿ ಕಟ್ಟೋ ಟೈಂಗೆ ಎಂಟ್ರಿ ಕೊಟ್ಟ ಮೊದಲ ಹೆಂಡ್ತಿ!
ಹೀಗೆ ಮದುಮುಗನ ಗೆಟಪ್ನಲ್ಲಿ ಇರೋ ಕಿರಾತಕನ ಹೆಸರು ಹರೀಶ್ ಪ್ರಸಾದ್ ಅಂತಾ ಬೆಂಗಳೂರು ಮೂಲದವ.. ಈಗಾಗಲೇ ಮದುವೆ ಆಗಿದ್ದು, ಮತ್ತೊಂದು ಮದುವೆ ಮಾಡಿಕೊಳ್ಳಲು ಮುಂದಾಗಿದ್ದ. ಹರೀಶ್ ಪ್ರಸಾದ್ ಮಂಡ್ಯ ಜಿಲ್ಲೆಯ ಅಲಗೂರು ಗ್ರಾಮದ ಯುವತಿಯನ್ನು ಮದುವೆ ಆಗಲು ಮುಂದಾಗಿದ್ದ.
ಈ ಜೋಡಿ ನಿನ್ನೆ ರಾತ್ರಿ ಖುಷಿ ಖುಷಿಯಾಗಿ ಮದುವೆ ಶಾಸ್ತ್ರವನ್ನು ಕೂಡ ಮಾಡಿಕೊಂಡಿದ್ರು. ಇನ್ನೇನು ಇವತ್ತು ಬೆಳಗ್ಗೆ ಮುಹೂರ್ತದ ಸಮಯಕ್ಕೆ ಯುವತಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಹರೀಶ್ ಪ್ರಸಾದ್ ಮೊದಲ ಹೆಂಡ್ತಿಯಾದ ಲೇಪಾಕ್ಷಿ, ಪೊಲೀಸರು, ವಕೀಲರು ಜೊತೆ ಬಿರುಗಾಳಿಯಂತೆ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ಕೊನೆ ಕ್ಷಣದಲ್ಲಿ ಮುದವೆ ನಿಲ್ಲಿಸಿ ಮದುಮಗನಿಗೆ ಬೆವರು ಇಳಿಸಿದ್ದಾಳೆ.
ಇದನ್ನು ಓದಿ : ನಿರ್ಮಾಪಕ ಕನಕಪುರ ಶ್ರೀನಿವಾಸ್ ವಿರುದ್ಧ ನಿರ್ದೇಶಕ ಪ್ರೇಮ್ ದೂರು – FIR ದಾಖಲು

ಕಲ್ಯಾಣ ಮಂಟಪದಲ್ಲೇ ಜಟಾಪಟಿ – ಫುಲ್ ಹೈಡ್ರಾಮಾ..!
ಇನ್ನು ಮದುಮಗ ಹರೀಶ್ ಪ್ರಸಾದ್ ಬೆಂಗಳೂರು ಮೂಲದ ಲೇಪಾಕ್ಷಿಯನ್ನು 2014 ರಲ್ಲಿ ಮದುವೆ ಆಗಿದ್ರು. ಹರಿಶ್ ಪ್ರಸಾದ್ ಹಾಗೂ ಲೇಪಾಕ್ಷಿ ಇಬ್ಬರು ಪರಸ್ಪರ ಪ್ರೀತಿಸಿ ಮದುವೆ ಆಗಿದ್ದು, 10 ವರ್ಷ ಸಂಸಾರವನ್ನು ಕೂಡ ಮಾಡಿದ್ರು. ಕೌಟುಂಬಿಕ ಕಲಹದಿಂದಾಗಿ ಗಂಡ- ಹೆಂಡ್ತಿ ಬೇರೆಯಾಗಿದ್ರು. ಈ ನಡುವೆ ಮೊದಲ ಹೆಂಡ್ತಿ ಲೇಪಾಕ್ಷಿಗೆ ಗೊತ್ತಾಗದಂತೆ ಗಂಡ ಹರೀಶ್ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ನಿಟ್ಟೂರು ಗ್ರಾಮದ ಯುವತಿಯೊಂದಿಗೆ ಮದುವೆ ಆಗಲು ಮುಂದಾಗಿದ್ದ.. ಅದ್ರಂತೆ ಇಂದು ಯಡಿಯೂರಿನ ಕಲ್ಯಾಣ ಮಂಟಪದಲ್ಲಿ ಮದುವೆ ನಡೆಯುತ್ತಿತ್ತು.
ಗಂಡನ ಮತ್ತೊಂದು ಮದುವೆ ವಿಚಾರ ಗೊತ್ತಾಗಿ ಲೇಪಾಕ್ಷಿ ಫುಲ್ ಶಾಕ್ಗೆ ಒಳಗಾಗಿದ್ದು, ಹೇಗಾದ್ರು ಮಾಡಿ ಮದುವೆ ನಿಲ್ಲಿಸಬೇಕೆಂದು ಪೊಲೀಸರು, ವಕೀಲರು ಹಾಗೂ ಸಂಬಂಧಿಕರ ಜೊತೆ ಕುಣಿಗಲ್ನ ಕಲ್ಯಾಣ ಮಂಟಪಕ್ಕೆ ಎಂಟ್ರಿ ಕೊಟ್ಟಿದ್ದು, ಪತ್ನಿ ಕಂಡು ಹರಿಶ್ ಪ್ರಸಾದ್ ಕಕ್ಕಾಬಿಕ್ಕಿಯಾಗಿದ್ದ. ನನಗೆ ಡಿವೋರ್ಸ್ ಕೊಡದೆ ಮೋಸ ಮಾಡಿದ್ದೀಯಾ ಅಂತ ಗಲಾಟೆ ಮಾಡಿ ಹೈಡ್ರಾಮಾವನ್ನೇ ಸೃಷ್ಟಿಸಿದ್ದು, ಕೊನೆ ಕ್ಷಣದಲ್ಲಿ ಮದುವೆ ಕ್ಯಾನ್ಸಲ್ ಆಗಿದೆ.

ಇತ್ತ ಮದುವೆ ಆಗಿ ಹೊಸ ಜೀವನಕ್ಕೆ ಕಾಲಿಡಲು ಕಾತುರವಾಗಿದ್ದ ಯುವತಿಗೆ ಆಘಾತವಾಗಿದ್ದು, ಮದುವೆ ಮುರಿದು ಬಿದ್ದ ಬಳಿಕ ಯುವತಿ ಕುಟುಂಬಸ್ಥರು ಕೂಡ ಬೇಸರ ಹೊರಹಾಕಿದ್ದಾರೆ. ಮದುಮಗ ಹರೀಶ್ ಪ್ರಸಾದ್ ನನ್ನು ಪೊಲೀಸರು ಠಾಣೆಗೆ ಕರೆತಂದು ವಿಚಾರಣೆ ಮುಂದುವರೆಸಿದ್ದಾರೆ.
ಇದನ್ನು ನೋಡಿ : PRAJASHAKTHI TVಯ ಒಂದೇ ವರದಿ ಬಳಿಕ ಓಡೋಡಿ ಬಂದ ಅಧಿಕಾರಿಗಳು – ಅನಧಿಕೃತ CLINIC SEIZE ಮಾಡಿದ್ರು




