Vijayalakshmi ಅವರು ನನಗೆ ನೆಗೆಟಿವ್ ಕಾಮೆಂಟ್ಸ್ ಬರುತ್ತಿದೆ ಎಂದು ದೂರು ನೀಡಿದ್ದರು.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪದಡಿ ನಟ ದರ್ಶನ್ ತೂಗುದೀಪ ಸದ್ಯ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈ ನಡುವೆ ದರ್ಶನ್ಗೆ ಸಂಬಂಧಿಸಿದ ಸಿನಿಮಾ, ಮನೆ ಮತ್ತು ನ್ಯಾಯಾಂಗ ಸಂಬಂಧಿತ ಜವಾಬ್ದಾರಿಗಳು ಅವರ ಪತ್ನಿ ವಿಜಯಲಕ್ಷ್ಮೀ ಮೇಲಿವೆ. ದರ್ಶನ್ ಅಭಿನಯದ ‘ದಿ ಡೆವಿಲ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದ ವೇಳೆ ವಿಜಯಲಕ್ಷ್ಮೀ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ನೆಗೆಟಿವ್ ಹಾಗೂ ಅಶ್ಲೀಲ ಕಾಮೆಂಟ್ಗಳು ಬಂದಿದ್ದವು.
Vijayalakshmi ವಿರುದ್ಧಪೊಲೀಸರಿಗೇಅಸಮಾಧಾನ!
ಅಶ್ಲೀಲ ಕಾಮೆಂಟ್ಗಳ ಹಿನ್ನೆಲೆಯಲ್ಲಿ ವಿಜಯಲಕ್ಷ್ಮೀ ಅವರು ದೂರು ದಾಖಲಿಸಿದ್ದರು. ಆದರೆ ಪ್ರಕರಣದ ತನಿಖೆ ಸರಿಯಾಗಿ ನಡೆಯುತ್ತಿಲ್ಲ ಎಂದು ಅವರು ಆರೋಪಿಸಿದ್ದರು.
ಇದೀಗ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದ್ದು, ವಿಜಯಲಕ್ಷ್ಮೀ ಅವರು ಪೊಲೀಸರ ತನಿಖೆಗೆ ಸಮರ್ಪಕವಾಗಿ ಸಹಕರಿಸುತ್ತಿಲ್ಲ, ಫೋನ್ ಕರೆಗಳಿಗೆ ಸ್ಪಂದಿಸುತ್ತಿಲ್ಲ ಹಾಗೂ ನೋಟೀಸ್ಗಳಿಗೂ ಉತ್ತರ ನೀಡಿಲ್ಲ ಎನ್ನಲಾಗಿದೆ.

8 ಜನ ಅರೆಸ್ಟ್
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣದ ತನಿಖೆಯ ಭಾಗವಾಗಿ, ವಿಜಯಲಕ್ಷ್ಮಿ ಅವರ 164ನೇ ಕಲಂನಡಿ ಹೇಳಿಕೆ ದಾಖಲಿಸುವಂತೆ ಪೊಲೀಸರು ಸೂಚನೆ ನೀಡಿದ್ದಾರೆ.
ವಿಜಯಲಕ್ಷ್ಮಿ ದರ್ಶನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಅಶ್ಲೀಲವಾಗಿ ಕಾಮೆಂಟ್ ಮಾಡಿದವರ ವಿರುದ್ಧ ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ (CCB) ಕಳೆದ ಡಿಸೆಂಬರ್ನಲ್ಲಿ ದೂರು ಕೊಟ್ಟಿದ್ದರು. ಹೀಗಾಗಿ ಸಿಸಿಬಿ ಪೊಲೀಸರು 3 ತಂಡಗಳಾಗಿ ತನಿಖೆ ಆರಂಭಿಸಿದ್ದರು.
ಇದನ್ನು ಓದಿ : ಮ್ಯೂಲ್ ಅಕೌಂಟ್ ಸೈಬರ್ ದಂಧೆಗೆ CID ಶಾಕ್ – ನೂರಾರು ಕಡೆ ದಾಳಿ

ಅಷ್ಟೇ ಅಲ್ಲದೆ ಮೆಟಾ ಸಂಸ್ಥೆಯಿಂದ ಕೆಟ್ಟ ಕಮೆಂಟ್ ಮಾಡಿದ್ದ ಖಾತೆಗಳ ಬಗ್ಗೆ ಮಾಹಿತಿ ಕೇಳಿದ್ದರು. ಒಟ್ಟಾರೆಯಾಗಿ ವಿಜಯಲಕ್ಷ್ಮಿ 18 ಅಕೌಂಟ್ಗಳ ವಿರುದ್ಧ ದೂರು ದಾಖಲಾಗಿತ್ತು. ಈಗಾಗಲೇ 8 ಜನರ ಅರೆಸ್ಟ್ ಆಗಿದೆ.
ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ದಾಖಲಾತಿಗಳನ್ನು ಸಮಗ್ರವಾಗಿ ದಾಖಲಿಸಲು 164 ಹೇಳಿಕೆ ಅಗತ್ಯವಿತ್ತು. ನ್ಯಾಯಾಲಯದಲ್ಲಿ ಈ ಹೇಳಿಕೆ ದಾಖಲಾಗುವುದು. ಮುಂದಿನ ನ್ಯಾಯಾಂಗ ಕ್ರಮಗಳಿಗೆ ಕೂಡ ಪ್ರಮುಖ ದಾಖಲೆ ಆಗಲಿದೆ.

ದರ್ಶನ್ ಜೈಲಿನಿಂದ ಹೊರಬರುವುದು ಯಾವಾಗ?
ನಟ ದರ್ಶನ್ ಅವರನ್ನು ಜೈಲಿನಲ್ಲಿ ವಿಜಯಲಕ್ಷ್ಮೀ ನಿಯಮಿತವಾಗಿ ಭೇಟಿ ಮಾಡುತ್ತಿದ್ದಾರೆ. ಅಭಿಮಾನಿಗಳಿಗೆ ದರ್ಶನ್ ನೀಡುವ ಸಂದೇಶಗಳನ್ನು ವಿಜಯಲಕ್ಷ್ಮೀ ಅವರ ಮೂಲಕವೇ ತಲುಪಿಸಲಾಗುತ್ತಿದೆ.
ಆದರೆ ದರ್ಶನ್ ಜೈಲಿನಿಂದ ಯಾವಾಗ ಬಿಡುಗಡೆಯಾಗುತ್ತಾರೆ ಎಂಬುದು ಸದ್ಯ ಸ್ಪಷ್ಟವಾಗಿಲ್ಲ. ಪ್ರಕರಣ ಸಂಬಂಧ ನ್ಯಾಯಾಲಯದ ತನಿಖೆ ಹಾಗೂ ವಿಚಾರಣೆ ಮುಂದುವರಿದಿದೆ.

ಇದನ್ನು ನೋಡಿ : ಪಾಳುಬಿದ್ದ ಕೊಂಪೆಯಾದ ರೈತ ಭವನ – ಲಕ್ಷಾಂತರ ಖರ್ಚು ಮಾಡಿದ್ರು ವೇಸ್ಟ್?




