Bengaluru : ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾ ವಲಸಿಗರ ಶೆಡ್ಗೆ ಬೆಂಕಿ ಬಿದ್ದು 100ಕ್ಕೂ ಅಧಿಕ ಶೆಡ್ಗಳು ಹೊತ್ತಿ ಉರಿದ ಘಟನೆ ಕೂಡ್ಲು ಕೆರೆ ಸಮೀಪ ನಡೆದಿದೆ.

Bengaluru : ಬೆಂಗಳೂರು ನಗರ ಹೊರವಲಯದ ಕೂಡ್ಲು ಕೆರೆ ಸಮೀಪ ಅಕ್ರಮವಾಗಿ ನೆಲೆಸಿದ್ದ ಬಾಂಗ್ಲಾದೇಶ ಮೂಲದ ವಲಸಿಗರ ಶೆಡ್ಗಳಿಗೆ ಭಾರೀ ಬೆಂಕಿ ಬಿದ್ದ ಘಟನೆ ಇಂದು ಬೆಳಗಿನ ಜಾವ ನಡೆದಿದೆ.
ಅಕ್ರಮ ಶೆಡ್ಗಳಿಗೆ ಭಾರೀ ಬೆಂಕಿ: 100ಕ್ಕೂ ಅಧಿಕ ಶೆಡ್ಗಳು ಭಸ್ಮ
ಬೆಳಗ್ಗೆ ಸುಮಾರು 5.30ರ ವೇಳೆಗೆ ಶೆಡ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ 100ಕ್ಕೂ ಅಧಿಕ ಶೆಡ್ಗಳು ಸಂಪೂರ್ಣವಾಗಿ ಬೆಂಕಿಯ ಕೆನ್ನಾಲಗೆಗೆ ಆಹುತಿಯಾಗಿವೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಎಲೆಕ್ಟ್ರಾನಿಕ್ ಸಿಟಿ, ಹುಳಿಮಾವು, ಸರ್ಜಾಪುರ ಹಾಗೂ ಡೈರಿ ಸರ್ಕಲ್ನಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ತೀವ್ರ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಇದನ್ನೂ ಓದಿ: Nelamangala ದಲ್ಲಿ ಹೊತ್ತಿ ಉರಿದ ಖಾಸಗಿ ಬಸ್..!!!

ಹೈಟೆನ್ಷನ್ ತಂತಿ ತುಂಡಾಗಿ ಬಿದ್ದಿರುವ ಶಂಕೆ
ಬೆಂಕಿ ಅವಘಡದಲ್ಲಿ ಶೆಡ್ಗಳು ಹಾಗೂ ಅಲ್ಲಿದ್ದ ಸ್ಕ್ರಾಪ್ ವಸ್ತುಗಳು ಸಂಪೂರ್ಣವಾಗಿ ಸುಟ್ಟುಹೋಗಿವೆ. ಅದೃಷ್ಟವಶಾತ್ ಈ ಘಟನೆಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಪ್ರಾಥಮಿಕ ತನಿಖೆಯಲ್ಲಿ ಹೈಟೆನ್ಷನ್ ವಿದ್ಯುತ್ ತಂತಿ ತುಂಡಾಗಿ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಘಟನೆಯ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
MUST WATCH : FOREST FIRE | ಕಾಡ್ಗಿಚ್ಚು ಭೀತಿ ಹೆಚ್ಚಳ! – ಅರಣ್ಯ ರಕ್ಷಣೆಗೆ ಅಧಿಕಾರಿಗಳ MASTER PLAN




