Kamalakar Bhat Case : ಜ್ಯೋತಿಷಿ ಕಮಲಾಕರ್ ಭಟ್ ಮತ್ತು ಸುಚಿತ್ರಾ ಪ್ರಕರಣ ದಿನಕ್ಕೊಂದು ಆಯಾಮ ಪಡೆಯುತ್ತಿದೆ. ಪೊಲೀಸ್ ತನಿಖೆ ವೇಳೆ ಒಂದೊಂದೆ ವಿಚಾರ ಬೆಳಕಿಗೆ ಬರುತ್ತಿವೆ.

Kamalakar Bhat Case : ರೀಲ್ಸ್ ರಾಣಿ ಸುಚಿತ್ರಾ ಹಾಗೂ ಜ್ಯೋತಿಷಿ ಕಮಲಾಕರ್ ಭಟ್ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ಮೊಬೈಲ್ ಪರಿಶೀಲನೆಯಲ್ಲಿ ಹಲವು ಯುವಕರ ಸಂಪರ್ಕ ಬಹಿರಂಗ
ಪೊಲೀಸರು ಸುಚಿತ್ರಾಳ ಮೊಬೈಲ್ ಫೋನ್ ಪರಿಶೀಲಸಿದಾಗ, ಕಲಬುರಗಿ, ಶಿವಮೊಗ್ಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೆಲ ಯುವಕರೊಂದಿಗೆ ಮಹಿಳೆ ಸುಚಿತ್ರಾ ನಿರಂತರ ಸಂಪರ್ಕದಲ್ಲಿದ್ದ ವಿಚಾರ ಬೆಳಕಿಗೆ ಬಂದಿದೆ.
ಇದರ ಬೆನ್ನಲ್ಲೇ ಆತಂಕಕ್ಕೊಳಗಾದ ಕೆಲ ಯುವಕರು ತಮ್ಮ ಇನ್ಸ್ಟಾಗ್ರಾಂ ಖಾತೆಗಳನ್ನು ಡಿಲೀಟ್ ಮಾಡಿಕೊಂಡಿದ್ದು, ಇನ್ನೂ ಕೆಲವರು ತಮ್ಮ ಮೊಬೈಲ್ ಫೋನ್ಗಳನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಆತಂಕದಲ್ಲಿ ಇನ್ಸ್ಟಾಗ್ರಾಂ ಖಾತೆ ಡಿಲೀಟ್ ಮಾಡಿದ ಯುವಕರು
ಯುವಕರು ತನಿಖೆಯಲ್ಲಿ ತಮ್ಮ ಹೆಸರುಗಳು ಹೊರಬೀಳಬಹುದೆಂಬ ಭಯದಿಂದ ಈ ರೀತಿ ಮಾಡಿದ್ದಾರೆ ಎನ್ನಲಾಗ್ತಿದೆ. ಇತ್ತ ಶಿವಮೊಗ್ಗದಲ್ಲಿ ಮಾಧ್ಯಮಗಳ ಮುಂದೆ ಸುಚಿತ್ರಾಳ ಪತಿ ಹಾಗೂ ಮಗಳು ನೀಡಿದ ಹೇಳಿಕೆ ಮತ್ತಷ್ಟು ತೀವ್ರತೆ ಮೂಡಿಸಿದೆ.
ಸುಚಿತ್ರಾಳ ಮೊಬೈಲ್ ಪರಿಶೀಲಿಸಿದರೆ ಅಸಹ್ಯವಾಗುತ್ತೆ. ಬೇರೆ ಬೇರೆ ಹುಡುಗರೊಂದಿಗೆ ಅವಳು ನಿತ್ಯ ಸಂಪರ್ಕದಲ್ಲಿದ್ದಳು ಎಂದು ಪತಿ ನೀಡಿದ ಹೇಳಿಕೆ ಬೆನ್ನಲ್ಲೇ ಕೆಲವರು ಸೋಶಿಯಲ್ ಮೀಡಿಯಾದಿಂದ ದೂರ ಸರಿದಿದ್ದಾರೆ ಎನ್ನಲಾಗಿದೆ.
ಸುಚಿತ್ರಾ ಹಲವು ಯುವಕರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ತನ್ನ ಮೇಲೆ ಹಲ್ಲೆ ನಡೆಸಲು ಯುವಕರ ಸಹಾಯ ಕೇಳಿದ್ದಳು ಎಂದು ಆಕೆಯ ಪತಿ ಗಂಭೀರ ಆರೋಪ ಹೊರಿಸಿದ್ದಾರೆ.
ಇದನ್ನೂ ಓದಿ : ಅಕ್ರಮ ಸಂಬಂಧಕ್ಕೆ ಕೊಲೆ.. ನಡುರಸ್ತೆಯಲ್ಲೇ ಜ್ಯೋತಿಷಿ ಕಮಲಾಕರ್, ಮಹಿಳೆಗೆ ಧರ್ಮದೇಟು.!

ಪೊಲೀಸರು ಹಂತ ಹಂತವಾಗಿ ತನಿಖೆ ಮುಂದುವರಿಸುತ್ತಿದ್ದು, ಸುಚಿತ್ರಾ ಪ್ರಕರಣ ಹಲವು ಪ್ರಶ್ನೆಗಳ ಸುಳಿಯಲ್ಲಿ ಸಿಲುಕಿದೆ. ಇದರ ಬೆನ್ನಲ್ಲೇ ವಸಂತ್ ನಾಯ್ಕ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯ ಕಾರ್ಯವೈಖರಿ ಬಗ್ಗೆ ಸ್ಥಳೀಯರು ಆರೋಪ ಹೊರಿಸಿದ್ದರು.
ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ವರ್ಗಾವಣೆ ಮಾಡಿದ್ದು, ASI ಗಣಪತಿ ಭಟ್ ಹಾಗೂ ಹೆಡ್ ಕಾನ್ಸ್ಟೇಬಲ್ ಚಂದ್ರಶೇಖರ್ ಅವರನ್ನು ಹಳಿಯಾಳ ಉಪವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್, ಸಿದ್ದಾಪುರ ಪೊಲೀಸ್ ಠಾಣೆಯ ಕಾರ್ಯಾಚರಣೆ ಕುರಿತು ತನಿಖೆಗೆ ಆದೇಶ ನೀಡಿದ್ದಾರೆ.

ಶಿರಸಿ ಉಪವಿಭಾಗದ ಡಿವೈಎಸ್ಪಿ ಗೀತಾ ಪಾಟೀಲ್ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದ್ದು, ಯಾವುದೇ ಲೋಪ ಕಂಡುಬಂದಲ್ಲಿ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ದೀಪನ್ ತಿಳಿಸಿದ್ದಾರೆ.
MUST WATCH : ನಿಗೂಢವಾಗಿ ಹಸುಗಳ ಸರಣಿ ಸಾ* – 2 ದಿನದಲ್ಲಿ 11 ಗೋವುಗಳ ದುರ್ಮರಣ




