
SIRA:
ಶಿರಾ ನಗರದ ದೇವರಾಜು ಅರಸು ಮೆಟ್ರಿಕ್ ನಂತರದ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯೋರ್ವ ನಿಗೂಢವಾಗಿ ಸಾವನ್ನಪ್ಪಿದ್ದಾನೆ. ಶಿರಾ ತಾಲೂಕಿನ ಹೊಸಹಳ್ಳಿ ಗ್ರಾಮದ 18 ವರ್ಷದ ಮಹಮದ್ ರಫೀ ಎಂಬ ವಿದ್ಯಾರ್ಥಿ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಮೊದಲ ವರ್ಷದ ಡಿಪ್ಲೊಮೊ ವ್ಯಾಸಾಂಗ ಮಾಡ್ತಾ ಇದ್ದು, ನಿನ್ನೆ ರಾತ್ರಿ ಶೌಚಾಲಯಕ್ಕೆ ಹೋದ ವೇಳೆ ಏಕಾಏಕಿ ಕುಸಿದು ಬಿದ್ದು ಸಾವನ್ನಪ್ಪಿದ್ದು, ಬೆಳಗ್ಗೆ ವಿದ್ಯಾರ್ಥಿ ಸಾವನ್ನಪ್ಪಿರೋ ಘಟನೆ ಬೆಳಕಿಗೆ ಬಂದಿದೆ.
ಇನ್ನು ವಿದ್ಯಾರ್ಥಿ ಮಹಮ್ಮದ್ ರಫೀ ಕಳೆದ ಒಂದು ವಾರದಿಂದ ಅನಾರೋಗ್ಯದಿಂದ ಬಳಲುತ್ತಿದ್ದು, ಹಾಸ್ಟೆಲ್ನಿಂದ ಸ್ವಗ್ರಾಮಕ್ಕೆ ತೆರಳಿ, ಶಿರಾದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಮನೆಯಿಂದ ಹಾಸ್ಟೆಲ್ಗೆ ವಿದ್ಯಾರ್ಥಿ ವಾಪಸ್ ಆಗಿದ್ದಾನೆ. ನಿನ್ನೆ ರಾತ್ರಿ ಮೊಹಮ್ಮದ್ ರಫಿ ಹಾಸ್ಟೆಲ್ನಲ್ಲಿ ಊಟ ಮಾಡಿ, ತನ್ನ ರೂಂಗೆ ಹೋಗಿ ಮಲಗಿದ್ದು, ರಾತ್ರಿ ಶೌಚಾಲಯಕ್ಕೆ ಎಂದು ಹೋದವ, ಸಾವನ್ನಪ್ಪಿದ್ದಾನೆ. ಇಂದು ಬೆಳಗ್ಗೆ ಶೌಚಾಲಯದ ಬಾಗಿಲನ್ನು ಬಡಿದ್ದಿದ್ದಾರೆ. ಆದ್ರೆ ಎಷ್ಟು ಹೊತ್ತಾದ್ರು ಶೌಚಾಲಯದಿಂದ ಹೊರಗೆ ಬಾರದನ್ನ ಕಂಡ ವಿದ್ಯಾರ್ಥಿಗಳು, ಬಾಗಿಲನ್ನು ಹತ್ತಿ ನೋಡಿದಾಗ ಮಹಮ್ಮದ್ ರಫೀ ಕುಸಿದು ಬಿದ್ದಿರೋದು ಕಂಡು ಬಂದಿದೆ. ಕೂಡಲೇ ವಿದ್ಯಾರ್ಥಿಗಳು ವಾರ್ಡನ್ಗೆ ಮಾಹಿತಿ ನೀಡಿದ್ದಾರೆ. ಶೌಚಾಲಯದ ಬಾಗಿಲನ್ನು ಮುರಿದು ಒಳಗೆ ಹೋಗಿ ವಿದ್ಯಾರ್ಥಿಯನ್ನು ಹೊರತಂದಿದ್ದು, ವಿದ್ಯಾರ್ಥಿ ಸಾವನ್ನಪ್ಪಿರೋದು ಖಚಿತವಾಗಿದೆ.
ಇನ್ನು ವಿದ್ಯಾರ್ಥಿ ಮಹಮ್ಮದ್ ರಫೀ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಅನಾರೋಗ್ಯದಿಂದ ಸಾವನ್ನಪ್ಪಿದ್ದಾನಾ..? ಅಥವಾ ಬೇರೆ ಏನಾದ್ರು ಸಮಸ್ಯೆಯಿಂದ ಸಾವನ್ನಪ್ಪಿದ್ದಾನಾ ಎಂದು ತಿಳಿದು ಬಂದಿಲ್ಲ. ವಿದ್ಯಾರ್ಥಿ ಸಾವಿಗೆ ಕಾರಣ ತಿಳಿಯಲು ವಿದ್ಯಾರ್ಥಿ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಶಿರಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದ್ರೆ ಶಿರಾದಲ್ಲಿ ಬೇಗ ಮರಣೋತ್ತರ ಪರೀಕ್ಷೆ ಫಲಿತಾಂಶ ಬರೋದಿಲ್ಲ ಎಂದುಷ ತುಮಕೂರು ಜಿಲ್ಲಾಸ್ಪತ್ರೆಗೆ ವಿದ್ಯಾರ್ಥಿ ಶವವನ್ನು ರವಾನೆ ಮಾಡಲಾಗಿದೆ. ಇತ್ತ ಮನೆಗೆ ಆಧಾರ ಆಗಬೇಕಾಗಿದ್ದ ಒಬ್ಬನೇ ಒಬ್ಬ ಮಗನನ್ನು ಕಳೆದುಕೊಂಡು ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು. ಹೆತ್ತವರ ಗೋಳಾಟ ಅಲ್ಲಿದ್ದವರ ಕಣ್ಣಲ್ಲಿ ನೀರು ತರಿಸುವಂತಾಗಿತ್ತು. ಅಲ್ದೇ ಹಾಸ್ಟೆಲ್ನಲ್ಲಿ ವಿದ್ಯಾರ್ಥಿಯನ್ನು ಸರಿಯಾಗಿ ನೋಡಿಕೊಂಡಿಲ್ಲ ಎಂದು ಪೋಷಕರು ಆರೋಪ ಮಾಡಿದ್ರು.
ಇತ್ತ ಶಿರಾದ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ಶಾಸಕ ಟಿ.ಬಿ ಜಯಚಂದ್ರ ಭೇಟಿ ನೀಡಿ, ಮೃತ ವಿದ್ಯಾರ್ಥಿ ಅಂತಿಮ ದರ್ಶನ ಪಡೆದು. ಪೋಷಕರಿಗೆ ಧೈರ್ಯ ಹೇಳಿದ್ರು.
ಇನ್ನು ವಿದ್ಯಾರ್ಥಿ ಮಹಮ್ಮದ್ ರಫೀ ಸಾವನ್ನಪ್ಪಿದ್ದಕ್ಕೆ ಶಿರಾದ ಜಾಮೀಯ ಮಸೀದಿಯ ಅದ್ಯಕ್ಷ ಮಹಮದ್ ಜಾಪರ್ ಶವಗಾರಕ್ಕೆ ಭೇಟಿ ನೀಡಿ, ವಿದ್ಯಾರ್ಥಿ ಪೋಷಕರಿಗೆ ಸಾಂತ್ವನ ಹೇಳಿದ್ರು. ಅಲ್ದೇ ಮೃತರ ಕುಟುಂಬಕ್ಕೆ 20 ಸಾವಿರ ರೂಪಾಯಿ ಪರಿಹಾರ ನೀಡಿದ್ರು.
ಅದೇನೆ ಆಗಲಿ ಅನಾರೋಗ್ಯದಿಂದ ಚೇತರಿಸಿಕೊಂಡಿದ್ದ ವಿದ್ಯಾರ್ಥಿ ಹಾಸ್ಟೆಲ್ಗೆ ಮರಳಿದ ದಿನವೇ ಸಾವನ್ನಪ್ಪಿದ್ದು, ಯಾವ ಕಾರಣಕ್ಕೆ ಸಾವನ್ನಪ್ಪಿದ್ದಾನೆ ಎಂದು ತನಿಖೆ ಬಳಿಕವಷ್ಟೇ ವಿದ್ಯಾರ್ಥಿ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.




