
RISHAB SHETTY : ಕಾಂತಾರ ಚಾಪ್ಟರ್ 1 ಟ್ರೈಲರ್ ಬಿಡುಗಡೆಯಾದ ಬೆನ್ನಲ್ಲೇ, ಸಿನಿಮಾ ನಿರ್ಮಾಪಕ ಮತ್ತು ನಟ ರಿಷಬ್ ಶೆಟ್ಟಿಕೊಲ್ಲೂರು ಮೂಕಾಂಬಿಕೆಯ ದರ್ಶನ ಪಡೆದಿದ್ದಾರೆ.
ರಿಷಬ್ ಶೆಟ್ಟಿ ತಮ್ಮ ಪತ್ನಿಯೊಂದಿಗೆ ದೇವಸ್ಥಾನಕ್ಕೆ ಆಗಮಿಸಿ, ವಿಶೇಷ ಪೂಜೆ ಸಲ್ಲಿಸಿ ಸಿನಿಮಾದ ಯಶಸ್ಸಿ ಗಾಗಿ ಪ್ರಾರ್ಥಿಸಿದರು. ದೇವಿಯ ದರ್ಶನದ ನಂತರ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ರಿಷಬ್ಶೆಟ್ಟಿ ಅವರನ್ನು ಗೌರವಿಸಿ ಸನ್ಮಾನಿಸಿತು.
ಇನ್ನು ಪ್ರತಿ ಸಿನಿಮಾದ ಬಿಡುಗಡೆಗೂ ಮುನ್ನರಿಷಬ್ ಶೆಟ್ಟಿ ತಾಯಿ ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆಯುತ್ತಾರೆ. ಅದರಂತೆಯೇ ‘ಕಾಂತಾರ’ ಮೊದಲ ಭಾಗದ ವೇಳೆ ಕೂಡ ಅವರು ಈ ಪರಿಪಾಟಿಯನ್ನು ಅನುಸರಿಸಿದ್ದಾರೆ.
‘ಕಾಂತಾರ ಚಾಪ್ಟರ್ 1′ ಟ್ರೈಲರ್ ಬಿಡುಗಡೆಯಾಗಿದ್ದು, ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ.




