
CRICKETER RAVI CHANDRAN ASHWIN : ಟೀಮ್ ಇಂಡಿಯಾದ ಮಾಜಿ ಸ್ಪಿನ್ನರ್ ಮತ್ತು ಹಿರಿಯ ಆಟಗಾರ ರವಿಚಂದ್ರನ್ ಅಶ್ವಿನ್ಇದೇ ಮೊದಲು ವಿದೇಶಿ ಲೀಗ್ನಲ್ಲಿಭಾಗವಹಿಸಲು ಸಜ್ಜಾಗಿದ್ದಾರೆ. ಈಗಾಗಲೇ ಇಂಟರ್ನ್ಯಾಷನಲ್ ಲೀಗ್ ಟಿ20 (ILT20)ಟೂರ್ನಿಗೆ ಹೆಸರು ನೋಂದಾಯಿಸಿಕೊಂಡಿರುವ ಅಶ್ವಿನ್, ಇದೀಗ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (BBL) 2025–26ಗೆ ಸಹ ಪಾಲ್ಗೊಳ್ಳಲಿದ್ದಾರೆ.
ಅಶ್ವಿನ್ ಅವರು ಸಿಡ್ನಿ ಥಂಡರ್ ತಂಡದ ಜೊತೆ ಒಪ್ಪಂದಮಾಡಿಕೊಂಡಿದ್ದು, ಬಿಬಿಎಲ್ 2025–26 ಸೀಸನ್ನಲ್ಲಿ ತಂಡದ ಪರವಾಗಿ ಕಣಕ್ಕಿಳಿಯಲಿದ್ದಾರೆ. ಈ ಟೂರ್ನಿ ಡಿಸೆಂಬರ್ 14, 2025ರಿಂದ ಆರಂಭವಾಗಲಿದೆ.
ಹೆಚ್ಚು ಗಮನ ಸೆಳೆಯುತ್ತಿರುವ ವಿಷಯವೆಂದರೆ, ಈ ತಂಡದಲ್ಲಿ ಈಗಾಗಲೇ ಪಾಕಿಸ್ತಾನದ ಆಲ್ರೌಂಡರ್ ಶಾದಾಬ್ ಖಾನ್ಕೂಡ ಸ್ಥಾನ ಪಡೆದಿದ್ದಾರೆ. ಈ ಮೂಲಕ ಬಿಬಿಎಲ್ನ ಇತಿಹಾಸದಲ್ಲಿ ಮೊದಲ ಬಾರಿಗೆ ಭಾರತ ಮತ್ತು ಪಾಕಿಸ್ತಾನ ಆಟಗಾರರು ಒಂದೇ ತಂಡದಲ್ಲಿಕಾಣಿಸಿಕೊಳ್ಳುವ ಸಾಧ್ಯತೆ ಇದೆ.




