
ನವರಾತ್ರಿ ಸ್ಪೆಷಲ್: ರುಚಿಕರ ಗಸಗಸೆ ಹೋಳಿಗೆ ರೆಸಿಪಿ
ಬೇಕಾಗುವ ಪದಾರ್ಥಗಳು:
- ಗಸಗಸೆ – 1 ಬಟ್ಟಲು
- ಒಣ ಕೊಬ್ಬರಿ ತುರಿ – 1 ಬಟ್ಟಲು
- ಬೆಲ್ಲ – 3/4 ಬಟ್ಟಲು
- ಎಲಕ್ಕಿ ಪುಡಿ – ಸ್ವಲ್ಪ
- ಪೇಣಿ ರವೆ – 1/2 ಬಟ್ಟಲು
- ಗೋಧಿಹಿಟ್ಟು – 1/2 ಬಟ್ಟಲು
- ಉಪ್ಪು – ಚಿಟಿಕೆ
- ಅರಿಶಿನ – ಸ್ವಲ್ಪ
- ಎಣ್ಣೆ – ಅಗತ್ಯಕ್ಕೆ
ಮಾಡುವ ವಿಧಾನ:
- ಹೂರಣ ತಯಾರಿಸಿ:
- ಗಸಗಸೆ ಮತ್ತು ಒಣ ಕೊಬ್ಬರಿಯನ್ನು ನುಣ್ಣಗೆ ಪುಡಿ ಮಾಡಿ.
- ದಪ್ಪ ತಳದ ಪಾತ್ರೆಗೆ ಹಾಕಿ, ಬೆಲ್ಲ ಮತ್ತು ಎಲಕ್ಕಿ ಪುಡಿ ಸೇರಿಸಿ.
- ಸ್ವಲ್ಪ ನೀರು (2 ಚಮಚ) ಹಾಕಿ ಒಲೆಯ ಮೇಲೆ ಇಟ್ಟು ಮಗುಚಿ ಗಟ್ಟಿಯಾದರೆ ಹೂರಣ ಸಿದ್ಧ.
- ಹೋಳಿಗೆ ಹಿಟ್ಟು ತಯಾರಿಸಿ:
- ಪೇಣಿ ರವೆ, ಗೋಧಿಹಿಟ್ಟು, ಸ್ವಲ್ಪ ಉಪ್ಪು, ಅರಿಶಿನ ಸೇರಿಸಿ ಸ್ವಲ್ಪ ನೀರಿನಿಂದ ಚಪಾತಿ ಹಿಟ್ಟಿನಂತೆ ಮಿಶ್ರಣ ಮಾಡಿ.
- ಮೂರು ಚಮಚ ಎಣ್ಣೆ ಸೇರಿಸಿ ಮಿಶ್ರಣವನ್ನು ಚೆನ್ನಾಗಿ ಕಲಸಿ, ಎರಡು ಗಂಟೆ ನೆನೆಸಿಡಿ.
- ಹೋಳಿಗೆ ರಚನೆ:
- ಹಿಟ್ಟಿನ ಮಿಶ್ರಣದಿಂದ ತಿಕ್ಕಿಕೊಂಡು, ಕೈಯಲ್ಲಿ ಅಗಲಿಸಿ ಹೂರಣದ ಉಂಡೆ ಇಟ್ಟು ಮುಚ್ಚಿ.
- ಹೋಳಿಗೆ ಶೀಟಿಗೆ ಎಣ್ಣೆ ಹಚ್ಚಿ, ತುಂಬಿದ ಉಂಡೆ ಲಟ್ಟಿಸಿ.
- ಕಾದ ತವಾದ ಮೇಲೆ ಸಣ್ಣ ಉರಿಯಲ್ಲಿ ಎರಡೂ ಬದಿಯಲ್ಲಿ ಬೇಯಿಸಿ.
ಸಿದ್ಧ!
ಮೃದುವಾದ, ಸುವಾಸನೆಯ ರುಚಿಕರ ಗಸಗಸೆ ಹೋಳಿಗೆ ಸವಿಯಲು ರೆಡಿಯಾಗಿದೆ.




