Bengaluru : ಇಟಾಲಿಯನ್ ರಾಯಭಾರಿ ಕಚೇರಿಗೆ ಹುಸಿ Bomb Threat – ಹಲಸೂರು ಪೊಲೀಸರ ತನಿಖೆ.

ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಮತ್ತೆ ಹುಸಿ Bomb Threat ಸದ್ದು ಮಾಡುತ್ತಿದೆ. ಹಲಸೂರು ಬಳಿಯಿರುರುವ ಇಟಾಲಿಯನ್ ರಾಯಭಾರಿ ಕಚೇರಿಗೆ ಇ-ಮೇಲ್ ಮೂಲಕ ಕಿಡಿಗೇಡಿಗಳು ಬಾಂಬ್ ಬೆದರಿಕೆ ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ಸ್ಫೋಟ ನಡೆಸುವುದಾಗಿ ಬೆದರಿಕೆ
ಜನವರಿ 30ರಂದು ಇಟಾಲಿಯನ್ ರಾಯಭಾರಿ ಕಚೇರಿಗೆ ಬಂದಿದ್ದ ಈ ಬೆದರಿಕೆ ಇ-ಮೇಲ್ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಇ-ಮೇಲ್ನಲ್ಲಿ 5 ಆರ್ಡಿಎಕ್ಸ್ ಬಾಂಬ್ಗಳನ್ನು ಬಳಸಿ ಸ್ಫೋಟ ನಡೆಸುವುದಾಗಿ ಬೆದರಿಕೆ ಒಡ್ಡಲಾಗಿದೆ ಎಂದು ತಿಳಿದು ಬಂದಿದೆ.
ಇದನ್ನು ಓದಿ : ರಾಯ್ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್ – SIT ತನಿಖೆಯಲ್ಲಿ ಸ್ಪೋಟಕ ಅಂಶ ಬಯಲು!

ಪ್ರಕರಣ ದಾಖಲು – Bomb Threat
ಇನ್ನು ಈ ಸಂಬಂಧ ಇಟಾಲಿಯನ್ ಕಾನ್ಸುಲೇಟ್ನ ಸೆಕ್ಯೂರಿಟಿ ಮ್ಯಾನೇಜರ್ ಜಿಯೋಡೊಮೆನಿಕ್ ಒ ಮಿಲಾನೋ ಅವರು ಹಲಸೂರು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ದೂರು ಆಧರಿಸಿ ಹಲಸೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಆತಂಕದ ವಾತಾವರಣ ನಿರ್ಮಾಣ
ಘಟನೆಯ ನಂತರ ರಾಯಭಾರಿ ಕಚೇರಿ ಸುತ್ತಮುತ್ತ ಭದ್ರತೆ ಹೆಚ್ಚಿಸಲಾಗಿದ್ದು,ಇ-ಮೇಲ್ ಕಳುಹಿಸಿದವರ ಪತ್ತೆಗೆ ಸೈಬರ್ ಕ್ರೈಂ ವಿಭಾಗದ ಸಹಾಯದೊಂದಿಗೆ ತನಿಖೆ ಮುಂದುವರಿದಿದೆ. ಈ ಹುಸಿ ಬಾಂಬ್ ಬೆದರಿಕೆ ಪ್ರಕರಣದಿಂದ ನಗರದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಇದನ್ನು ನೋಡಿ : ಕುತಂತ್ರದಿಂದ ತುಮುಲ್ ಅಧ್ಯಕ್ಷ ಸ್ಥಾನ ತಪ್ಪಿದೆ ಭಾರತಿ ಪರ ಮಸಾಲಾ ಜಯರಾಂ ಬ್ಯಾಟಿಂಗ್




