ಬೆಳಗಾವಿಯಲ್ಲಿ ಸಿಗರೇಟ್ ಹಣ ಕೇಳಿದ್ದಕ್ಕೆ, ಪಾನ್ ಶಾಪ್ ಮಾಲೀಕನ ಬರ್ಬರ Murder : ನಾಲ್ವರು ಅರೆಸ್ಟ್.

ಸಿಗರೇಟ್ ಹಣ ಕೇಳಿದ್ದಕ್ಕೆ ಪಾನ್ ಶಾಪ್ ಮಾಲೀಕನ ಭೀಕರ ಕೊಲೆಯಾಗಿದೆ. ಬೆಳಗಾವಿ ತಾಲೂಕಿನ ಘೋಡಕೆನಟ್ಟಿ ಗ್ರಾಮದಲ್ಲಿ Murder ನಡೆದಿದ್ದು, ಪಾನ್ ಶಾಪ್ ಮಾಲೀಕ ಯಲ್ಲಪ್ಪ ನಾಯಕ್ (48) ಭೀಕರವಾಗಿ ಕೊಲೆಯಾಗಿದ್ದಾರೆ.
ಬರ್ಬರ Murder
ಎರಡು ಸಿಗರೇಟ್ ಹಾಗೂ ನೀರಿನ ಬಾಟಲಿ ತೆಗೆದುಕೊಂಡ ನಾಲ್ವರು ಯುವಕರು ಹಣ ನೀಡದೆ ಅಂಗಡಿಯಿಂದ ಹೋಗುತ್ತಿದ್ದರು. ಈ ವೇಳೆ ಯಲ್ಲಪ್ಪ ನಾಯಕ್ “ದುಡ್ಡು ಯಾಕೆ ಕೊಡಲ್ಲ, ದುಡ್ಡು ಕೊಡಿ” ಎಂದು ಪ್ರಶ್ನೆ ಮಾಡಿದ್ದಾರೆ.
ಇದರಿಂದ ಕೋಪಗೊಂಡ ಆರೋಪಿಗಳು ಅವಾಚ್ಯ ಶಬ್ದಗಳಿಂದ ನಿಂದಿಸಿ ಯಲ್ಲಪ್ಪ ನಾಯಕ್ ಅವರ ಮೇಲೆ ಮಾರಣಾಂತಿ ಕವಾಗಿ ಹಲ್ಲೆ ಮಾಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಯಲ್ಲಪ್ಪ ನಾಯಕ್ ಅವರನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಮಾರ್ಗಮಧ್ಯೆ ಅವರು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಇದನ್ನು ಓದಿ : ಅಕ್ರಮ ಸಂಬಂಧಕ್ಕೆ ಕೊಲೆ.. ನಡುರಸ್ತೆಯಲ್ಲೇ ಜ್ಯೋತಿಷಿ ಕಮಲಾಕರ್, ಮಹಿಳೆಗೆ ಧರ್ಮದೇಟು.!

ಆರೋಪಿಗಳು ಅಂದರ್
ಘಟನೆ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿದ್ದು, ಗ್ರಾಮದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಪ್ರಕರಣ ಸಂಬಂಧ ಪ್ರಜ್ವಲ್ ಪಾಟೀಲ್, ನಿಖಿಲ್ ಚೌಗಲೆ, ವಿವೇಕ ಚೌಗಲೆ ಹಾಗೂ ಶ್ರೀಧರ್ ಪಾಟೀಲ್ ಅವರನ್ನು ಕಾಕತಿ ಪೊಲೀಸ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ತನಿಖೆ ಮುಂದುವರಿದಿದೆ.

ಇದನ್ನು ನೋಡಿ : ಕುತಂತ್ರದಿಂದ ತುಮುಲ್ ಅಧ್ಯಕ್ಷ ಸ್ಥಾನ ತಪ್ಪಿದೆ ಭಾರತಿ ಪರ ಮಸಾಲಾ ಜಯರಾಂ ಬ್ಯಾಟಿಂಗ್




