ವರದಕ್ಷಿಣೆ ಕಿರುಕುಳ – ಗೃಹಿಣಿ Suicide, ಪತಿ ಅರೆಸ್ಟ್

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಗೃಹಿಣಿಯೊಬ್ಬರು Suicide ಮಾಡಿಕೊಂಡ ದಾರುಣ ಘಟನೆ ಬೆಳಗಾವಿಯ ಜ್ಯೋತಿ ನಗರದಲ್ಲಿ ನಡೆದಿದೆ.
ಎರಡು ಮಕ್ಕಳ ತಾಯಿ ಬಲಿ
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ಶ್ರೀನಿಧಿ ಸಂತೋಷ್ ನಾವಿ (28) ಎಂದು ಗುರುತಿಸಲಾಗಿದೆ. ಶ್ರೀನಿಧಿ 2021ರಲ್ಲಿ ಸಂತೋಷ್ ಅವರೊಂದಿಗೆ ವಿವಾಹವಾಗಿದ್ದು, ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.
ಕಿಟಕಿ ಗ್ರಿಲ್ಗೆ ವೇಲ್ ಬಿಗಿದುಕೊಂಡು Suicide
ಶ್ರೀನಿಧಿ ಮತ್ತು ಸಂತೋಷ್ದಂಪತಿಗಳ ನಡುವೆ ಆಗಾಗ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಕೌಟುಂಬಿಕ ಗಲಾಟೆ ಹಾಗೂ ವರದಕ್ಷಿಣೆ ಕಿರುಕುಳದಿಂದ ಮನನೊಂದು ಶ್ರೀನಿಧಿ ಮನೆಯ ಮೊದಲ ಮಹಡಿಯ ಕಿಟಕಿ ಗ್ರಿಲ್ಗೆ ವೇಲ್ ಬಿಗಿದುಕೊಂಡು ನೇಣಿಗೆ ಶರಣಾಗಿದ್ದಾರೆ.
READ THIS : ಹೆಂಡತಿಯ ತಂಗಿಯ ಜೊತೆ ನಾಳೆ ಮದುವೆಯಾಗಬೇಕಿದ್ದ ವ್ಯಕ್ತಿಯ ಹತ್ಯೆ!

ವರದಕ್ಷಿಣೆ ಕಿರುಕುಳದ ಆರೋಪದಡಿ ದೂರು
ತವರು ಮನೆಯವರೊಂದಿಗೆ ಮಾತನಾಡಬಾರದೆಂದು ಮೊಬೈಲ್ ಫೋನ್ ಕಿತ್ತುಕೊಂಡಿದ್ದ ಎಂದು ಶ್ರೀನಿಧಿ ಕುಟುಂಬಸ್ಥರು ಆರೋಪಿಸಿದ್ದಾರೆ. ಗಂಡ, ಅತ್ತೆ ಸೇರಿದಂತೆ ಇನ್ನಿಬ್ಬರು ಸಂಬಂಧಿಕರ ವಿರುದ್ಧ ವರದಕ್ಷಿಣೆ ಕಿರುಕುಳದ ಆರೋಪದಡಿ ಶ್ರೀಧಿ ಕುಟುಂಬಸ್ಥರು ದೂರು ನೀಡಿದ್ದಾರೆ.
ಪ್ರಕರಣ ದಾಖಲು
ಘಟನೆ ಸಂಬಂಧ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
MUST WATCH : ತುಮಕೂರಿನಲ್ಲಿ ಕ್ರೈಂ ರೇಟ್ ಹೆಚ್ಚಳ ಆಗ್ತಾ ಇದ್ರು- ಗೃಹ ಸಚಿವರು ಏನ್ ಮಾಡ್ತಾ ಇದ್ದಾರೆ?




