Murder : ಎರಡನೇ ಮದುವೆಗಾಗಿ ಹಸೆಮಣೆ ಏರಬೇಕಿದ್ದ ವರ ನಿನ್ನೆ ಕೊಲೆಯಾಗಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಭೀಕರ Murder ಪ್ರಕರಣವೊಂದು ಬೆಳಕಿಗೆ ಬಂದಿದೆ. ಹೆಂಡತಿಯ ತಂಗಿಯ ಜೊತೆಗೆ ಎರಡನೇ ಮದುವೆಗಾಗಿ ಹಸೆಮಣೆ ಏರಬೇಕಿದ್ದ ವರ ನಿನ್ನೆ ಕೊಲೆಯಾಗಿದ್ದಾರೆ.
ವಾಸವಿದ್ದ ಮನೆಯಲ್ಲೇ ವೈದ್ಯನ ಹತ್ಯೆ!
ಶಿರಸಿಯ ಕೆಎಚ್ಬಿ ಕಾಲೋನಿಯಲ್ಲಿ ಈ ಭೀಕರ ಘಟನೆ ನಡೆದಿದೆ. ಡಾ.ರಮೇಶ ಎಫ್.ಕಲ್ಗುಟರ್ ಕೊಲೆಯಾದ ದುರ್ದೈವಿ. ವಾಸವಿದ್ದ ಮನೆಯಲ್ಲೇ ವೈದ್ಯರ ಹತ್ಯೆಯಾಗಿರುವುದು ತಿಳಿದುಬಂದಿದೆ.
ಹೆಂಡತಿಯ ತಂಗಿಯೊಂದಿಗೆ ಎರಡನೇ ಮದುವೆ
ಡಾ.ರಮೇಶ ಶಿರಸಿಯಲ್ಲಿ ಆಯುರ್ವೇದ ಕ್ಲಿನಿಕ್ ನಡೆಸುತ್ತಿದ್ದು, ಆರು ತಿಂಗಳ ಹಿಂದೆ ಅವರ ಪತ್ನಿ ನಿಧನರಾಗಿದ್ದರು. ಈ ಹಿನ್ನೆಲೆ ಅವರು ತಮ್ಮ ಹೆಂಡತಿಯ ತಂಗಿಯೊಂದಿಗೆ ಎರಡನೇ ಮದುವೆಗೆ ಸಿದ್ಧರಾಗಿದ್ದರು. ನಾಳೆ ದೇವಸ್ಥಾನದಲ್ಲಿ ಮದುವೆ ನಡೆಯಬೇಕಾಗಿದ್ದಾಗಲೇ ಈ ದುರಂತ ಸಂಭವಿಸಿದೆ.
READ THIS : ಕಾಂಗ್ರೆಸ್ ಶಾಸಕ ಹ್ಯಾರಿಸ್ ಮನೆ ಮೇಲೆ ED ದಾಳಿ!

Murder – ಪೊಲೀಸರಿಗೆ ಮಾಹಿತಿ
ಡಾ.ರಮೇಶ ಶವ ಕಂಡಿದ್ದು ಮೊದಲು ಅವರ ಸಂಬಂಧಿಕರಿಗೇ ಎನ್ನಲಾಗಿದೆ. ಎಂದಿನಂತೆ ಡಾ.ರಮೇಶ ಅವರನ್ನು ನೋಡಲು ಬಂದ ಸಂಬಂಧಿಕರೇ ವೈದ್ಯರ ಶವ ಕಂಡು ಬೆಚ್ಚಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವೈದ್ಯನ Murder ಹಲವು ಅನುಮಾನಗಳಿಗೂ ಕಾರಣ
ಘಟನೆ ಬಗ್ಗೆ ಮಾಹಿತಿ ಪಡೆದ ಪೊಲೀಸರಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡು, ಸ್ಥಳ ಮಹಜರು ಮಾಡಿ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಮದುವೆಗೆ ಒಂದು ದಿನ ಬಾಕಿ ಇರುವಾಗ ನಡೆದ ಈ ಹತ್ಯೆ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

MUST WATCH : ಬೈಕ್, ಕಾರು, ಬಸ್ಗೆ ಡಿಕ್ಕಿ ಹೊಡೆದ ಲಾರಿ – ನಾಲ್ವರು ಸಾವು ಶಂಕೆ, ಹಲವರಿಗೆ ಗಾಯ




