ಶಾಸಕ ಎನ್.ಎ ಹ್ಯಾರಿಸ್ ಮನೆ ಮೇಲೆ ED ದಾಳಿ – ಪರಿಶೀಲನೆ

ಬೆಳ್ಳಂಬೆಳಕ್ಕೆ ಕಾಂಗ್ರೆಸ್ ಶಾಸಕ ಎನ್.ಎ.ಹ್ಯಾರಿಸ್ಗೆ ಇ.ಡಿ ಶಾಕ್ ಕೊಟ್ಟಿದೆ. ಶಾಸಕರ ಮನೆ ಸೇರಿದಂತೆ 17 ಸ್ಥಳಗಳಲ್ಲಿ ಇ.ಡಿ ದಾಳಿ ನಡೆಸಿದೆ.

17 ಸ್ಥಳಗಳಲ್ಲಿ ED ಪರಿಶೀಲನೆ
ಹ್ಯಾರಿಸ್ ಅವರು ಬಿಡಿಎ (Bangalore Development Authority ) ಅಧ್ಯಕ್ಷರೂ ಆಗಿದ್ದಾರೆ. ಅವರ ಪುತ್ರ ಮೊಹಮ್ಮದ್ ನಲಪಾಡ್ ಕಾಂಗ್ರೆಸ್ ಯುವ ಮುಖಂಡರಾಗಿದ್ದಾರೆ. ED ಅಧಿಕಾರಿಗಳು ಇವರ ಮನೆ ದಾಳಿ ಮಾಡಿ ದಾಖಲೆಗಳನ್ನು ಪರಿಶೀಲನೆಗೆ ಒಳಪಡಿಸಲಾಗಿದೆ.
READ THIS : ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಗೆ ಚಟ್ಟ ಕಟ್ಟಿದ ಪತ್ನಿ..!!

ಬಿಟ್ಕಾಯಿನ್ ಕೇಸ್, ಶ್ರೀಕಿ ಜೊತೆ ಆರ್ಥಿಕ ವ್ಯವಹಾರ ಆರೋಪ
ಬಿಟ್ ಕಾಯಿನ್ ಪ್ರಕರಣ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ. ಶ್ರೀಕಿ ಮತ್ತು ನಲಪಾಡ್ ನಡುವೆ ನಾಲ್ಕುವರೆ ಕೋಟಿ ವ್ಯವಹಾರ ನಡೆದಿರುವ ಬಗ್ಗೆ ಮಾಹಿತಿ ಹಿನ್ನೆಲೆಯಲ್ಲಿ ನಿವಾಸ ಕಚೇರಿಗಳಲ್ಲಿ ಇಡಿ ದಾಳಿ ನಡೆಸಿ ಪರಿಶೀಲಿಸುತ್ತಿದೆ ಎನ್ನಲಾಗಿದೆ.

MUST WATCH : ತುಮಕೂರಿನ 3 ತಾಲೂಕಿಗೆ ನೀರಿನ ಕಂಟಕ – ಟ್ಯಾಂಕರ್ ಮೂಲಕ ಜನರಿಗೆ ನೀರು ಸಫ್ಲೈ




