Chikkamagalauru : ಮದುವೆಗಾಗಿ ಜಾತಕ ತೋರಿಸಲು ಹೋದ ಯುವತಿ ಮೇಲೆ ಅರ್ಚಕನಿಂದ Rape?

Chikkamagalauru : ಮದುವೆಯಾಗುತ್ತಿರುವ ಯುವತಿಯೊಬ್ಬಳು ಜಾತಕ ತೋರಿಸಲು ದೇವಸ್ಥಾನಕ್ಕೆ ಹೋಗಿದ್ದ ವೇಳೆ, ದೇವಸ್ಥಾನದ ಅರ್ಚಕನೇ ಆಕೆಯ ಮೇಲೆ ಅತ್ಯಾಚಾರ (Rape) ಎಸಗಿದ ಆರೋಪದ ಪ್ರಕರಣ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ನಡೆದಿದೆ.
ಯುವತಿ ಮೇಲೆ ಅರ್ಚಕನಿಂದ ಅತ್ಯಾಚಾರ
ಹೊರಟ್ಟಿ ಗ್ರಾಮದ ಪುರಾತನ ಈಶ್ವರ–ಪಾರ್ವತಿ ದೇವಸ್ಥಾನದ ಅರ್ಚಕ ಕೃಷ್ಣರಾವ್ ವಿರುದ್ಧ ಈ ಆರೋಪ ಕೇಳಿಬಂದಿದೆ. ನೊಂದ ಯುವತಿ ಬಣಕಲ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿ ಕೃಷ್ಣರಾವ್ನನ್ನು ಬಂಧಿಸಿದ್ದಾರೆ.
ಇದನ್ನು ಓದಿ : RCB ತಂಡ ಮಾರಾಟಕ್ಕಿದೆ – ಇಷ್ಟು ಕೋಟಿ ಇದ್ದರೆ ನೀವು ಸಹ ಖರೀದಿಸಬಹುದು!

ಅರ್ಚಕನ ವಿರುದ್ಧ ದೂರು
ಯುವತಿ ಜಾತಕ ತೋರಿಸಲು ಹೋದಾಗ 2025 ನವೆಂಬರ್ 23 ರಿಂದ 2026 ಫೆಬ್ರವರಿ 2 ರ ಅವಧಿಯಲ್ಲಿ ಅರ್ಚಕ (Priest) ಹಲವು ಬಾರಿ ಅತ್ಯಾಚಾರ ನಡೆಸಿದ್ದಾನೆ. ಜಾತಕದಲ್ಲಿ ದೋಷ ಇದೆ. ಅದಕ್ಕೆ ತಡೆಯೊಡೆಯಬೇಕು ಎಂದು ಹೆದರಿಸಿ ಯುವತಿಗೆ ಹೆದರಿಸಿದ್ದನಂತೆ. ಇದೀಗ ನೊಂದ ಯುವತಿ ಅರ್ಚಕನ ವಿರುದ್ಧ ದೂರು ನೀಡಿದ್ದಾಳೆ.
ಆರೋಪಿಯ ಬಂಧನ
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಬಣಕಲ್ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 64(2)(m) ಹಾಗೂ ಅತ್ಯಾಚಾರ ತಡೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.
ಇದನ್ನು ನೋಡಿ : TUMAKURU DC VISIT | ಜಿಲ್ಲಾಸ್ಪತ್ರೆಗೆ DC ದಿಢೀರ್ ಭೇಟಿ ಡಿಸ್ಟ್ರಿಕ್ಟ್ ಸರ್ಜನ್ ಗೆ ಫುಲ್ ಕ್ಲಾಸ್





