RCB ಮಾರಾಟ ಪ್ರಕ್ರಿಯೆ ಆರಂಭ – 18 ಸಾವಿರ ಕೋಟಿ ರೂ. ಮೌಲ್ಯ ನಿಗದಿ.

IPLನ ಜನಪ್ರಿಯ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಅಧಿಕೃತವಾಗಿ ಮುಂದಾಗಿದೆ. ಈ ಮಾರಾಟ ಪ್ರಕ್ರಿಯೆಗೆ ಚಾಲನೆ ನೀಡಲಾಗಿದ್ದು, ಆರ್ಸಿಬಿ ಫ್ರಾಂಚೈಸಿಯ ಮೌಲ್ಯವನ್ನು ಸುಮಾರು 2 ಬಿಲಿಯನ್ ಡಾಲರ್ ಎಂದು ಅಂದಾಜಿಸಲಾಗಿದೆ. ಭಾರತೀಯ ರೂಪಾಯಿ ಮೌಲ್ಯದಲ್ಲಿ ಇದು ಸುಮಾರು 18,000 ಕೋಟಿ ರೂ. ಆಗಿದೆ.
RCB ಖರೀದಿಗೆ ಆಸಕ್ತಿ ತೋರಿದ ಉದ್ಯಮಿಗಳು
ಮೂಲಗಳ ಪ್ರಕಾರ, RCB ಫ್ರಾಂಚೈಸಿಯ ಬಿಡ್ಡಿಂಗ್ ಪ್ರಕ್ರಿಯೆ ಸುಮಾರು 18 ಸಾವಿರ ಕೋಟಿ ರೂ.ನಿಂದ ಆರಂಭವಾಗುವ ಸಾಧ್ಯತೆ ಇದೆ.
ಈಗಾಗಲೇ ಹಲವು ದೊಡ್ಡ ಉದ್ಯಮ ಗುಂಪುಗಳು ಮತ್ತು ಉದ್ಯಮಿಗಳು ಆರ್ಸಿಬಿ ಖರೀದಿಗೆ ಆಸಕ್ತಿ ತೋರಿರುವುದರಿಂದ, ಈ ಮೊತ್ತ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಈ ಹಿಂದೆ ಝೆರೋಧಾ ಕಂಪೆನಿಯ ಸಹ-ಸಂಸ್ಥಾಪಕ ನಿಖಿಲ್ ಕಾಮತ್, ಮಣಿಪಾಲ್ ಶಿಕ್ಷಣ ಮತ್ತು ವೈದ್ಯಕೀಯ ಸಂಸ್ಥೆಯ ಅಧ್ಯಕ್ಷ ರಂಜನ್ ಪೈ ಜೊತೆಗೆ ಸೇರಿ ಆರ್ಸಿಬಿ ಖರೀದಿಗೆ ಆಸಕ್ತಿ ತೋರಿದ್ದಾರೆ ಎಂಬ ವರದಿಗಳು ಹೊರಬಿದ್ದಿದ್ದವು.

JSW ಗ್ರೂಪ್ ಆರ್ಸಿಬಿ ಖರೀದಿಗಾಗಿ ಬಿಡ್ ಮಾಡುವ ಸಾಧ್ಯತೆ
ಇದರ ಜೊತೆಗೆ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿಇಒ ಆದಾರ್ ಪೂನಾವಾಲ ಕೂಡ ಆರ್ಸಿಬಿ ಫ್ರಾಂಚೈಸಿ ಖರೀದಿಗೆ ಮುಂದಾಗಿದ್ದಾರೆ ಎನ್ನಲಾಗಿದೆ.
ಮತ್ತೊಂದೆಡೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯ ಸಹ ಮಾಲೀಕರಾದ ಪಾರ್ಥ್ ಜಿಂದಾಲ್ ಅವರ JSW ಗ್ರೂಪ್ ಕೂಡ ಆರ್ಸಿಬಿ ಖರೀದಿಗಾಗಿ ಬಿಡ್ ಮಾಡುವ ಸಾಧ್ಯತೆ ಇದೆ.
IPLಗೆ ಎಂಟ್ರಿ ನೀಡುವ ಯೋಜನೆ
ಇನ್ನೂ, ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಕೂಡ ಆರ್ಸಿಬಿ ಫ್ರಾಂಚೈಸಿಯನ್ನು ಖರೀದಿಸುವ ಮೂಲಕ ಐಪಿಎಲ್ಗೆ ಎಂಟ್ರಿ ನೀಡುವ ಯೋಜನೆ ರೂಪಿಸುತ್ತಿದ್ದು, ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ತೀವ್ರ ಪೈಪೋಟಿ ನಿರೀಕ್ಷಿಸಲಾಗಿದೆ.
ಈ ಉದ್ಯಮಿಗಳ ಹೊರತಾಗಿ ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ ಕೂಡ ಆರ್ಸಿಬಿ ಖರೀದಿಗೆ ಆಸಕ್ತಿ ತೋರಿಸಿದ್ದು, ಅಲ್ಲದೇ ಅಮೆರಿಕದ ಖಾಸಗಿ ಹೂಡಿಕೆ ಕಂಪೆನಿಯೊಂದು ಡಿಯಾಜಿಯೋ ಕಂಪೆನಿಯೊಂದಿಗೆ ಈಗಾಗಲೇ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.
ಇದನ್ನು ಓದಿ : ಶಕ್ತಿ ಯೋಜನೆ ಎಫೆಕ್ಟ್| Ticket Free ಅಂತ ತಮ್ಮನ ಜೊತೆ ಮನೆ ಬಿಟ್ಟು ಹೊರಟ ಬಾಲಕಿ!
ಭಾರಿ ಬಿಡ್ಡಿಂಗ್ ಪೈಪೋಟಿ ನಡೆಯುವ ಸಾಧ್ಯತೆ
Sportico ವರದಿ ಪ್ರಕಾರ, ಸುಮಾರು ₹18,000 ಕೋಟಿ ಬ್ರ್ಯಾಂಡ್ ಮೌಲ್ಯದೊಂದಿಗೆ ಡಿಯಾಜಿಯೋ ಕಂಪೆನಿ ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟಕ್ಕೆ ಇಟ್ಟಿದೆ.
ಅಧಿಕೃತವಾಗಿ ಮಾರಾಟ ಪ್ರಕ್ರಿಯೆ ಆರಂಭವಾಗಿರುವುದರಿಂದ, ಮುಂದಿನ ದಿನಗಳಲ್ಲಿ ದೊಡ್ಡ ಕಂಪೆನಿಗಳ ನಡುವೆ ಭಾರಿ ಬಿಡ್ಡಿಂಗ್ ಪೈಪೋಟಿ ನಡೆಯುವ ಸಾಧ್ಯತೆ ಇದೆ. ಆರ್ಸಿಬಿ ಫ್ರಾಂಚೈಸಿ ಅಂತಿಮವಾಗಿ ಎಷ್ಟು ಕೋಟಿಗೆ ಮಾರಾಟವಾಗಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.

RCB ಫ್ರಾಂಚೈಸಿ ಖರೀದಿಗೆ ಆಸಕ್ತಿ ಹೊಂದಿರುವವರು
ಜೆಎಸ್ಡಬ್ಲ್ಯೂ ಗ್ರೂಪ್ (ಪಾರ್ಥ್ ಜಿಂದಾಲ್)
ಅದಾನಿ ಗ್ರೂಪ್ (ಗೌತಮ್ ಅದಾನಿ)
ಪೂನಾವಾಲ ಗ್ರೂಪ್ (ಆದಾರ್ ಪೂನಾವಾಲ)
ನಿಖಿಲ್ ಕಾಮತ್ (ಝೆರೋಧಾ ಕಂಪೆನಿ)
ರಂಜನ್ ಪೈ (ಮಣಿಪಾಲ್ ಗ್ರೂಪ್)
ದೇವಯಾನಿ ಇಂಟರ್ನ್ಯಾಷನಲ್ ಗ್ರೂಪ್ (ರವಿಕಾಂತ್ ಜೈಪುರಿಯಾ)
ಅಮೆರಿಕದ ಪ್ರೈವೆಟ್ ಇನ್ವೆಸ್ಟ್ಮೆಂಟ್ ಕಂಪೆನಿ

ಇದನ್ನು ನೋಡಿ : C T RAVI ಕ್ಷಮೆಯಾಚಿಸುವಂತೆ ವಿ. ಪರಿಷತ್ ನಲ್ಲಿ ಪಟ್ಟು – ನಾನು ಕೇಳೋದಿಲ್ಲ ಎಂದ MLC




