Bengaluru : ಪೋಷಕರು ಬೈದಿದ್ದಕ್ಕೆ ಬಸ್ ಫ್ರೀ ಎಂದು ತಮ್ಮನ ಜೊತೆ ಮನೆಬಿಟ್ಟು ಹೋಗಿ ಊರೂರು ಸುತ್ತಿದ ಬಾಲಕಿ.

ಆಧಾರ್ ಕಾರ್ಡ್ ಇದ್ದರೆ ಎಲ್ಲಿಗೆ ಬೇಕಾದರೂ ಉಚಿತವಾಗಿ ಹೋಗಬಹುದು ಎಂಬ ಭಾವನೆಯಿಂದ 13 ವರ್ಷದ ಬಾಲಕಿ ತನ್ನ 9 ವರ್ಷದ ತಮ್ಮನೊಂದಿಗೆ ಮನೆ ಬಿಟ್ಟು ತೆರಳಿದ ಘಟನೆ Bengaluru ನಗರದ ಮಾರತ್ತಹಳ್ಳಿ ಅಶ್ವತ್ಥನಗರದಲ್ಲಿ ನಡೆದಿದೆ.
ಮನೆಬಿಟ್ಟು ಹೋಗಿ ಊರೂರು ಸುತ್ತಿದ ಬಾಲಕಿ
ಟ್ಯೂಷನ್ ಗೆ ಹೋಗಲ್ಲ ಎಂದು ಮಕ್ಕಳಿಗೆ ಪೋಷಕರು ಬೈದ ಕಾರಣ 13 ವರ್ಷದ ಬಾಲಕಿಯೋರ್ವಳು ತನ್ನ 9 ವರ್ಷದ ತಮ್ಮನ ಜೊತೆ Free Busನಲ್ಲಿ ಊರೂರು ಸುತ್ತಿದ್ದಾಳೆ. ಮಾರತ್ತಹಳ್ಳಿಯ ಅಶ್ವತ್ಥನಗರದಿಂದ ತೆರಳಿದ್ದ ಅಕ್ಕ-ತಮ್ಮ ಶಿವಮೊಗ್ಗ ಮತ್ತು ಚಿತ್ರದುರ್ಗದಲ್ಲಿ ಸೇರಿದಂತೆ ರಾಜ್ಯದ ಹಲವು ಭಾಗಗಳಿಗೆ ಸುತ್ತಾಟ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನು ಓದಿ : ಶಾಲೆಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ.!

HAL ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು
ಇನ್ನು ಮಕ್ಕಳು ಕಾಣೆಯಾಗಿರುವುದರಿಂದ ಆತಂಕಗೊಂಡ ಪೋಷಕರು ತಕ್ಷಣ HAL ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಪೊಲೀಸರು CCTV ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಮಕ್ಕಳು ಬ್ಯಾಗ್ ಹಿಡಿದು ಅಶ್ವತ್ಥನಗರದಿಂದ ಹೊರಟು ಮಾರತ್ತಹಳ್ಳಿ ಬ್ರಿಡ್ಜ್ ಸ್ಕೈವಾಕ್ ಮೂಲಕ ಮೆಜೆಸ್ಟಿಕ್ಗೆ ತೆರಳಿರುವುದು ಗೊತ್ತಾಗಿದೆ.
ಪೋಷಕರಿಗೆ ಮಕ್ಕಳನ್ನು ಒಪ್ಪಿಸಿದ ಪೊಲೀಸರು
ಇದರ ಬೆನ್ನಲ್ಲೇ ಪೊಲೀಸರು ರಾಜ್ಯಾದ್ಯಂತ Alert ನೀಡಿದ್ದು, ಮಕ್ಕಳ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಈ ವೇಳೆ ಭದ್ರಾವತಿಯಲ್ಲಿ ಸಾರ್ವಜನಿಕರ ಗಮನಕ್ಕೆ ಬಂದ ಮಕ್ಕಳು, ಸಾಮಾಜಿಕ ಜಾಲತಾಣದ ಮಾಹಿತಿ ಆಧರಿಸಿ ಪೊಲೀಸರಿಗೆ ಮಾಹಿತಿ ನೀಡಿದರು. ತಕ್ಷಣ ಸ್ಥಳೀಯ ಪೊಲೀಸರು ಮಕ್ಕಳನ್ನು ರಕ್ಷಿಸಿ, ವಿಷಯವನ್ನು HAL ಠಾಣೆಗೆ ತಿಳಿಸಿದರು. ಹೆಚ್ಎಎಲ್ ಪೊಲೀಸರು ಮಕ್ಕಳನ್ನು ಠಾಣೆಗೆ ಕರೆತಂದು ಸುರಕ್ಷಿತವಾಗಿ ಪೋಷಕರಿಗೆ ಒಪ್ಪಿಸಿದ್ದಾರೆ.

ಇದನ್ನು ನೋಡಿ : TUMAKURU | ರಿಜಿಸ್ಟ್ರಾರ್ ಆಗದ ನಕಲಿ ಕ್ಲಿನಿಕ್ಗಳು- ಇವರಿಗೆ ಅಧಿಕಾರಿಗಳೇ ಸಾಥ್




