Bengaluru : ಸರ್ಕಾರಿ ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ದಿನನಿತ್ಯ ಕಡುಬಡವರು ಹೋಗ್ತಾರೆ. ಆದರೆ ಸರ್ಕಾರಿ ಆಸ್ಪತ್ರೆಗೆ (Government Hospital) ಹೋದ್ರೆ ಬರೀ ಸಮಸ್ಯೆಗಳ ಅದ್ವಾನಗಳನ್ನೇ ಕಾಣುತ್ತಿದ್ದಾರೆ.

Bengaluru : ಇತ್ತೀಚಿನ ದಿನಗಳಲ್ಲಿ ಜನರು ಸರ್ಕಾರಿ ಆಸ್ಪತ್ರೆಗಳಿಗೆ ಹೋದರೆ ಚಿಕಿತ್ಸೆಗಿಂತ ಸಮಸ್ಯೆಗಳೇ ಹೆಚ್ಚು ಎದುರಾಗುತ್ತಿವೆ ಎಂಬ ಆತಂಕಕಾರಿ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ತೀವ್ರ ಔಷಧಿ ಕೊರತೆ ಎದುರಾಗಿದ್ದು, ಈ ಕುರಿತು ಆರೋಗ್ಯ ಸಚಿವರ ಗಮನಕ್ಕೆ ಹಲವಾರು ಬಾರಿ ತಂದರೂ ಯಾವುದೇ ಗಂಭೀರ ಕ್ರಮ ಕೈಗೊಳ್ಳದಿರುವುದಾಗಿ ಆರೋಪಗಳು ಕೇಳಿಬಂದಿವೆ.
ಇದೀಗ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವೇ ಬಹಿರಂಗವಾಗಿ ಔಷಧಿ ಕೊರತೆ ಬಗ್ಗೆ ಪ್ರಕಟಣೆ ಹೊರಡಿಸಿ ಅಸಮಾಧಾನ ವ್ಯಕ್ತಪಡಿಸಿದೆ. ಸಮರ್ಪಕವಾಗಿ ಔಷಧಿಗಳ ಸರಬರಾಜು ಆಗದೆ ಇರುವುದರಿಂದ ರೋಗಿಗಳಿಗೆ ಅಗತ್ಯ ಚಿಕಿತ್ಸೆ ನೀಡುವುದು ಕಷ್ಟವಾಗುತ್ತಿದೆ ಎಂದು ವೈದ್ಯಾಧಿಕಾರಿಗಳ ಸಂಘ ಹೇಳಿದೆ.
ವಿಶೇಷವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಐವಿ ದ್ರಾವಣಗಳು, ಆಂಟಿ ಬಯೋಟಿಕ್ಗಳು ಹಾಗೂ ಇತರೆ ತುರ್ತು ಚಿಕಿತ್ಸಾ ಔಷಧಿಗಳು ಲಭ್ಯವಿಲ್ಲ ಎಂಬುದು ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ.
ಇದನ್ನೂ ಓದಿ: ಶಾಲೆಯಲ್ಲಿ ಶಿಕ್ಷಕನಿಂದ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ.!

ಮನವಿಗೂ ಸ್ಪಂದನೆ ಇಲ್ಲ
ಔಷಧಿ ಸರಬರಾಜಿನ ಕುರಿತು ಸಭೆಗಳನ್ನು ನಡೆಸಿ, ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿಗಳನ್ನ ಸಲ್ಲಿಸಿದ್ರೂ, ಕೂಡ ಸಮಸ್ಯೆಗೆ ಯಾವುದೇ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂದು ವೈದ್ಯಾಧಿಕಾರಿಗಳ ಸಂಘ ಬೇಸರ ವ್ಯಕ್ತಪಡಿಸಿದೆ.
ರೋಗಿಗಳಿಗೆ ಔಷಧೋಪಚಾರ ನೀಡಲು ಸಾಧ್ಯವಾಗ್ತಿಲ್ಲ. ಸರ್ಕಾರದಿಂದ ಲಭ್ಯವಿರುವ ಔಷಧಿಗಳನ್ನು ಖರೀದಿಸುವಂತೆ ಸೂಚನೆ ನೀಡಿದ್ರೂ, ಅನೇಕ ಆರೋಗ್ಯ ಸಂಸ್ಥೆಗಳಿಗೆ ಇದುವರೆಗೂ ಯಾವುದೇ ಅನುದಾನವೇ ಬಿಡುಗಡೆಯಾಗಿಲ್ಲ ಎಂದು ಸಂಘ ಆರೋಪಿಸಿದೆ.
ಇದು ಆರೋಗ್ಯ ಇಲಾಖೆಯ ಉದಾಸೀನತೆ ಹಾಗೂ ಇಚ್ಛಾಶಕ್ತಿ ಕೊರತೆಯನ್ನು ಸ್ಪಷ್ಟಪಡಿಸುತ್ತದೆ ಎಂದು ವೈದ್ಯಾಧಿಕಾರಿಗಳು ಹೇಳಿದ್ದಾರೆ.

ಬಡವರಲ್ಲಿ ನಂಬಿಕೆ ಕುಸಿತ
ಸರ್ಕಾರಿ ಆಸ್ಪತ್ರೆಗಳಲ್ಲಿನ ಇಂತಹ ಅವ್ಯವಸ್ಥೆಗಳು ಬಡವರಲ್ಲಿ ಇದ್ದ ಭರವಸೆಯನ್ನೇ ಕಸಿದುಕೊಳ್ಳುತ್ತಿವೆ. ಪರಿಣಾಮವಾಗಿ, ಸಾಲ ಮಾಡಿಕೊಂಡಾದರೂ ಜೀವ ಉಳಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳತ್ತ ಹೋಗುವ ಸ್ಥಿತಿ ನಿರ್ಮಾಣವಾಗಿದೆ. ಇದು ಸಾಮಾನ್ಯ ಜನರಿಗೆ ಇನ್ನಷ್ಟು ಆರ್ಥಿಕ ಸಂಕಷ್ಟವನ್ನು ತಂದೊಡ್ಡುತ್ತಿದೆ.
ಸರ್ಕಾರಕ್ಕೆ ಮನವಿ ಈಗಾಗಲೇ ಆರೋಗ್ಯ ವ್ಯವಸ್ಥೆಯಲ್ಲಿ ಮತ್ತೊಂದು ಗಂಭೀರ ಸಮಸ್ಯೆ ತಲೆದೋರಿದ್ದು, ಆರೋಗ್ಯ ಸಚಿವರು ಈ ವಿಷಯವನ್ನು ತಕ್ಷಣವೇ ಗಂಭೀರವಾಗಿ ಪರಿಗಣಿಸಿ, ಔಷಧಿ ಕೊರತೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ವೈದ್ಯಾಧಿಕಾರಿಗಳ ಸಂಘ ಒತ್ತಾಯಿಸಿದೆ.
MUST WATCH : ರಿಜಿಸ್ಟ್ರಾರ್ ಆಗದ ನಕಲಿ ಕ್ಲಿನಿಕ್ಗಳು- ಇವರಿಗೆ ಅಧಿಕಾರಿಗಳೇ ಸಾಥ್ ಕೊಡ್ತಿದ್ದೀರಾ..?




