Price Hike : ಬಜೆಟ್ ಬೆನ್ನಲ್ಲೇ ಜನ ಸಾಮಾನ್ಯರಿಗೆ ಬಿಗ್ ಶಾಕ್! ಅಕ್ಕಿ-ಬೇಳೆ ಸೇರಿದಂತೆ ಹಲವು ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆ.

ಬಜೆಟ್ ನಂತರ ಜನಸಾಮಾನ್ಯರ ಬದುಕಿಗೆ ಮತ್ತೊಂದು ಬರೆ ಬಿದ್ದಿದೆ. ಈಗಾಗಲೇ ಹಾಲು–ಮೊಸರು, ವಿದ್ಯುತ್, ಪೆಟ್ರೋಲ್–ಡೀಸೆಲ್, ಬಸ್–ಮೆಟ್ರೋ ದರ, ಮಕ್ಕಳ ಶಾಲಾ ಶುಲ್ಕ ಏರಿಕೆಯಿಂದ ತತ್ತರಿಸಿರುವ ಜನರಿಗೆ, ಇದೀಗ ದಿನನಿತ್ಯ ಬಳಕೆಯ ದಿನಸಿ ಸಾಮಾಗ್ರಿಗಳ Price Hike ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜನ ಸಾಮಾನ್ಯರಿಗೆ ಬಿಗ್ ಶಾಕ್!
ಅಕ್ಕಿ, ತೊಗರಿ ಬೇಳೆ, ಒಣಮೆಣಸು, ಕಡಲೆಕಾಯಿ ಸೇರಿದಂತೆ ಹಲವು ಅಗತ್ಯ ವಸ್ತುಗಳ ದರದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಜನರ ಜೇಬಿಗೆ ಕತ್ತರಿ ಬಿದ್ದಂತಾಗಿದೆ. ಸಗಟು ವ್ಯಾಪಾರದ ದರದಲ್ಲೇ ದೊಡ್ಡ ಪ್ರಮಾಣದ ಏರಿಕೆ ಕಂಡುಬಂದಿರುವುದರಿಂದ ಚಿಲ್ಲರೆ ಮಾರುಕಟ್ಟೆಯಲ್ಲೂ ದರ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ.

ಇದನ್ನು ಓದಿ : ಅತ್ತಿಗೆ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಅಣ್ಣನಿಗೆ ಚಟ್ಟ ಕಟ್ಟಿದ ತಮ್ಮ.!
ಸಗಟು ವ್ಯಾಪಾರದಲ್ಲೇ ಭಾರೀ ಏರಿಕೆ
ಸಗಟು ಮಾರುಕಟ್ಟೆಯಲ್ಲಿ ಅಕ್ಕಿಯ ದರ ಕೆಜಿಗೆ 20 ರೂಪಾಯಿ ವರೆಗೆ ಏರಿಕೆಯಾಗಿದ್ದು, ಬಾಸ್ಮತಿ ಅಕ್ಕಿಯ ಬೆಲೆಯಲ್ಲಿ 25ರಿಂದ 30 ರೂಪಾಯಿ ವರೆಗೆ ಹೆಚ್ಚಳವಾಗಿದೆ. ಸಗಟು ದರದ ಮೇಲೆ ಚಿಲ್ಲರೆ ವ್ಯಾಪಾರದಲ್ಲಿ ಸುಮಾರು 20 ಶೇಕಡಾ ಹೆಚ್ಚುವರಿ ದರ ವಿಧಿಸಲಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಯಾವ ಪದಾರ್ಥಕ್ಕೆ ಎಷ್ಟು ಏರಿಕೆ?
- ಅಕ್ಕಿ: 5 ರಿಂದ 30 ರೂ.ವರೆಗೆ ಏರಿಕೆ
- ಒಣಮೆಣಸು: 150 ರೂ.ವರೆಗೆ ಏರಿಕೆ
- ತೊಗರಿ ಬೇಳೆ: 15 ರಿಂದ 20 ರೂ.ವರೆಗೆ ಏರಿಕೆ
- ಕಡಲೆಕಾಯಿ: 20 ರೂ.ವರೆಗೆ ಏರಿಕೆ
- ಉದ್ದಿನ ಬೇಳೆ: 15 ರೂ.ವರೆಗೆ ಏರಿಕೆ
- ಕಡಲೆಬೇಳೆ: 10 ರೂ.ವರೆಗೆ ಏರಿಕೆ
ಒಟ್ಟಾರೆ ಹೊಸ ಬೆಳೆ ಬರುವವರೆಗೂ ಈ ಬೆಲೆ ಏರಿಕೆ ಮುಂದುವರೆಯಲ್ಲಿದ್ದು, ಜನಸಾಮಾನ್ಯರ ಜೇಬು ಸುಡಲಿದೆ.

ಇದನ್ನು ನೋಡಿ : TUMAKURU | ಅಮಾನಿಕೆರೆಯ ಗಾಜಿನ ಮನೆಯ NEW LOOKಗೆ ಭರ್ಜರಿ ತಯಾರಿ




