Doddaballapura : ಅತ್ತಿಗೆ ಜೊತೆ ಅಕ್ರಮ ಸಂಬಂಧಕ್ಕೆ ಅಡ್ಡಿ ಅಂತ ಇಬ್ಬರು ಸೇರಿ ಒಡ ಹುಟ್ಟಿದ ಅಣ್ಣನನ್ನೇ ಕೊಲೆ ಮಾಡಿ ಪರಾರಿಯಾಗಿರುವ ಘಟನೆ ನಡೆದಿದೆ.

Doddaballapura : ಅತ್ತಿಗೆ ಮತ್ತು ಮೈದುನನ ಸಂಬಂಧ ತಾಯಿ ಮಗನ ಸಂಬಂಧ ಅಂತಾರೆ. ಆದ್ರೆ, ಅತ್ತಿಗೆ ಜೊತೆ ಅಕ್ರಮ ಸಂಬಂಧ ಹೊಂದಿದ್ದ ತಮ್ಮನೇ ಅಣ್ಣನ ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಮಂಕಲಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, 35 ವರ್ಷದ ಗಂಗರಾಜ್ ಮೃತ ದುರ್ದೈವಿಯಾಗಿದ್ದಾನೆ.
ಗುಡಿಸಲಿನಲ್ಲಿ ಕುಟುಂಬ ಸಮೇತ ಸುಖವಾಗಿ ಜೀವನ ಸಾಗಿಸುತ್ತಿದ್ದ ಗಂಗರಾಜ್ ಮತ್ತು ಪತ್ನಿ ಭಾಗ್ಯಮ್ಮ ದಾಂಪತ್ಯಕ್ಕೆ ಗಂಗರಾಜನ ಒಡಹುಟ್ಟಿದ ತಮ್ಮ ರವಿಯೇ ವಿಲನ್ ಆಗಿ ಬಿಟ್ಟಿದ್ದಾನೆ.
ಗಂಗರಾಜನ ಪತ್ನಿ ಭಾಗ್ಯಮ್ಮಳೊಂದಿಗೆ ರವಿ ಕಳೆದ ಮೂರು ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದನಂತೆ. ಅಲ್ಲದೇ ರವಿ ಅತ್ತಿಗೆಯನ್ನು ಕರೆದುಕೊಂಡು ಮನೆ ಬಿಟ್ಟು ಪರಾರಿಯಾಗಿದ್ದಾನೆ
15 ದಿನದ ಹಿಂದೆ ರವಿ ಮತ್ತೆ ಅಣ್ಣನ ಮನೆಗೆ ಬಂದಾಗ ಗಂಗರಾಜ್ ಮತ್ತು ರವಿ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಗಂಗರಾಜ್ ರವಿ ಹಾಗೂ ಪತ್ನಿ ಭಾಗ್ಯಮ್ಮಳಿಗೆ ಹೊಡೆದಿದ್ದಾನೆ.

ಇದನ್ನೂ ಓದಿ : ಖ್ಯಾತ ಜ್ಯೋತಿಷಿ ಜೊತೆ ಮಹಿಳೆ ಅಕ್ರಮ ಸಂಬಂಧಕ್ಕೆ ಓರ್ವನ ಕೊಲೆ.!
ಇದರಿಂದ ಕೋಪಗೊಂಡಿದ್ದ ರವಿ ಮತ್ತು ಭಾಗ್ಯಮ್ಮ ಮತ್ತೆ ಮನೆಗೆ ಬಂದು ಗಂಗರಾಜ್ಗೆ ಕುಡಿಸಿ, ನಂತರ ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಬಳಿಕ ಪರಾರಿಯಾಗಿದ್ದಾರೆ.
ಪತ್ನಿ ಹೋದ ಮೇಲೆ ಗಂಗರಾಜ್ ತನ್ನ ಮೂವರು ಮಕ್ಕಳನ್ನು ಸಾಕಲಾಗದೇ ಅನಾಥಾಶ್ರಮಕ್ಕೆ ಸೇರಿಸಿದ್ದನಂತೆ. ಇದೀಗ ತಂದೆ ಕೊಲೆಯಾದರೆ, ತಾಯಿ ಜೈಲು ಪಾಲಾಗ್ತಿದ್ದು, ಮೂವರು ಮಕ್ಕಳು ಅನಾಥರಾಗಿದ್ದಾರೆ.
ಇತ್ತ ಒಬ್ಬ ಕೊಲೆಯಾದ್ರೆ, ಮತ್ತೊಬ್ಬ ಜೈಲು ಪಾಲಾಗುತ್ತಿರುವುದನ್ನು ನೋಡಿ ಮೃತರ ತಾಯಿ ಸಂಕಟ ಪಡುತ್ತಿದ್ದಾರೆ. ಅಲ್ದೇ ಇನ್ನೊಬ್ಬ ಮಗ ಸಂತೋಷ್ ಗಂಗರಾಜನ 8 ವರ್ಷದ ಹೆಣ್ಣು ಮಗುವಿನ ಮೇಲೆ ಅತ್ಯಾಚಾರ ಮಾಡಲು ಹೋಗಿ ಈಗಾಗಲೇ ಜೈಲಿನಲ್ಲಿದ್ದಾನೆ.
ದೊಡ್ಡಬೆಳವಂಗಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೊಲೆ ಮಾಡಿ ಪರಾರಿಯಾಗಿರುವ ಆರೋಪಿಗಳ ಪತ್ತೆಗೆ ದೊಡ್ಡಬೆಳವಂಗಲ ಪೊಲೀಸರು ಬಲೆ ಬೀಸಿದ್ದು, ತನಿಖೆ ಮುಂದುವರಿದಿದೆ. ಒಟ್ನಲ್ಲಿ ಅಕ್ರಮ ಸಂಬಂಧದಿಂದ ಆರಂಭವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಇಡೀ ಕುಟುಂಬ ಛಿದ್ರಗೊಂಡಿದೆ.
MUST WATCH : ಜಿಲ್ಲಾಸ್ಪತ್ರೆಗೆ DC ದಿಢೀರ್ ಭೇಟಿ ಡಿಸ್ಟ್ರಿಕ್ಟ್ ಸರ್ಜನ್ ಗೆ ಫುಲ್ ಕ್ಲಾಸ್




