Tumakuru : ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ DC – ತಾಯಿ ಮತ್ತು ಮಕ್ಕಳ ಆಸ್ಪತ್ರೆ ನ್ಯೂನ್ಯತೆಯ ಬಗ್ಗೆ ಆಕ್ರೋಶ.

ಜಿಲ್ಲಾಸ್ಪತ್ರೆಯಲ್ಲಿರುವ ಕೆಲವೊಂದು ನ್ಯೂನ್ಯತೆಯ ಕುರಿತು ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರವು ಡಿಸಿಯವರಿಗೆ ಪರಿಶೀಲನೆ ನಡೆಸುಂತೆ ಪತ್ರವನ್ನು ಕಳುಹಿಸಿತ್ತು. ಪತ್ರವನ್ನು ಗಮನಿಸಿದ ಡಿಸಿ ಶುಭ ಕಲ್ಯಾಣ್ ಅವರು ಜಿಲ್ಲಾಸ್ಪತ್ರೆಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ, ಕೆಲವು ನ್ಯೂನ್ಯತೆ ಕಂಡು ಅಧಿಕಾರಿಗಳ ವಿರುದ್ಧ ಫುಲ್ ಗರಂ ಆದರು.

ತಾಯಿ ಮತ್ತು ಮಕ್ಕಳ ಆಸ್ಪತ್ರೆ ನ್ಯೂನ್ಯತೆಯ ಬಗ್ಗೆ ಆಕ್ರೋಶ
ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ನ್ಯೂನ್ಯತೆ ಹಾಗೂ ರಕ್ತ ಪರೀಕ್ಷೆ ಕೇಂದ್ರದಲ್ಲಿ ಸಿಬಿಸಿ(CBC), Thyroid(ತೈರಾಯ್ಡ್), ವಿಟಮಿನ್ ಡಿ, ಸಿ ಕೆಲವು ಸೌಲಭ್ಯ ಸಿಗದೆ ಸಾವಿರಾರು ರೂ ಗಳನ್ನು ಹೊರ ಲ್ಯಾಬ್ ಗಳಲ್ಲಿ ಕಟ್ಟಿ ರೋಗಿಗಳು ವಂಚಿತವಾಗಿದ್ದಾರೆ ಎನ್ನುವ ಕುರಿತಾಗಿ ವಿಶ್ವ ಮಾನವ ಹಕ್ಕುಗಳ ಸೇವಾ ಕೇಂದ್ರದ ಸಂಸ್ಥಾಪನ ಅಧ್ಯಕ್ಷರಾದ ಸಿದ್ಧಲಿಂಗೇಗೌಡರು DC ಯವರಿಗೆ ಪತ್ರವನ್ನು ಬರೆದಿದ್ದರು. ಈ ಕುರಿತು ಜಿಲ್ಲಾಸ್ಪತ್ರೆಗೆ ಡಿಸಿ ಶುಭ ಕಲ್ಯಾಣ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನು ಓದಿ : Hubballi|ಕತ್ತು ಸೀಳಿ ಹೆಂಡತಿಯನ್ನೇ ಹತ್ಯೆಗೈದ ಪಾಪಿ ಪತಿ..!

ಅಸ್ಘರ್ ಬೇಗ್ಗೆ ತರಾಟೆ
ಇನ್ನು ಪರಿಶೀಲನೆ ವೇಳೆ ಕೆಲವು ನ್ಯೂನ್ಯತೆಗಳನ್ನು ಗಮನಿಸಿದ ಡಿಸಿ ಅವರು, ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡ್ರು. ಜೊತೆಗೆ ಡಿಸ್ಟಿಕ್ ಸರ್ಜನ್ ಅಸ್ಘರ್ ಬೇಗ್ ಅವರಿಗೆ ತರಾಟೆಗೆ ತೆಗೆದುಕೊಂಡ ಘಟನೆ ಕೂಡ ನಡೆದಿದೆ. ಜೊತೆಗೆ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಓ.ಪಿ.ಡಿ ಪ್ರಾರಂಭಿಸಲು ಸೂಚನೆ ಹಾಗೂ ಸಿಬಿಸಿ(CBC), Thyroid(ತೈರಾಯ್ಡ್) ಗೆ ತುರ್ತಾಗಿ ಮಾಡುವಂತೆ ಸೂಕ್ತ ನಿರ್ದೇಶನ ನೀಡಿದರು.

ಇದನ್ನು ನೋಡಿ : ಅಶ್ಲೀಲ ಆರ್ಕೆಸ್ಟ್ರಾಗಳನ್ನು ಮಾಡಿದ್ರೆ ಶಿಕ್ಷೆಗೆ ಗುರಿಯಾಗೋದು ಫಿಕ್ಸ್..!




