Crime news : ಬಾವಿಯೊಂದರಲ್ಲಿ ವ್ಯಕ್ತಿಯ ಶವದ ತುಂಡಾದ ಅಂಗಾಂಗಗಳು ಸಿಕ್ಕಿದ್ದು, ಸುತ್ತಮುತ್ತಲಿನ ಜನತೆ ಬೆಚ್ಚಿ ಬಿದ್ದಿರುವ ಘಟನೆ ನಡೆದಿದೆ.

Crime news : ಇತ್ತೀಚಿನ ದಿನಗಳಲ್ಲಿ ದಿನೇ ದಿನೇ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದ್ದು, ಚಿಕ್ಕ ಚಿಕ್ಕ ವಿಷಯಗಳಿಗೆ ಗಲಾಟೆ, ಕೊಲೆಗಳು ನಡೆಯುತ್ತಿದ್ದು, ನಮ್ಮ ಸಮಾಜ ಎತ್ತ ಸಾಗುತ್ತಿದೆ ಎಂಬ ಪ್ರಶ್ನೆ ಮೂಡ್ತಿದೆ.
ತೆಲಂಗಾಣದಲ್ಲಿ ಭೀಕರ ಕೊಲೆ ಪ್ರಕರಣ
ಇತ್ತ ಬಾವಿಯೊಂದರಲ್ಲಿ ಅಪರಿಚಿತ ವ್ಯಕ್ತಿಯ ದೇಹದ ಭಾಗಗಳು ಕತ್ತರಿಸಿದ ರೀತಿಯಲ್ಲಿ ಬಾವಿಯೊಂದರಲ್ಲಿ ಸಿಕ್ಕಿದ್ದು, ಶವ ಕಂಡು ಜನತೆ ಬೆಚ್ಚಿಬಿದ್ದಿದ್ದಾರೆ. ಇಂತಹದೊಂದು ಭೀಕರ ಘಟನೆ ತೆಲಂಗಾಣದ ಕಾಮರೆಡ್ಡಿ ಜಿಲ್ಲೆಯಲ್ಲಿ ಕಂಡು ಬಂದಿದೆ.
ಇಂದು ಬೆಳಿಗ್ಗೆ ಬಾವಿಯೊಳಗೆ ಸುಮಾರು 35 ವರ್ಷದ ಅಪರಿಚಿತ ವ್ಯಕ್ತಿಯ ಕತ್ತರಿಸಿದ ದೇಹದ ಭಾಗಗಳನ್ನು ಪತ್ತೆಮಾಡಿದ್ದಾರೆ. ನೀರಿಲ್ಲದ ಬಾವಿಗೆ ತ್ಯಾಜ್ಯ ಸಂಗ್ರಹಿಸಲು ಬಂದ ವ್ಯಕ್ತಿಯೊಬ್ಬರು ಕಸದ ಮಧ್ಯೆ ಪ್ಲಾಸ್ಟಿಕ್ ಚೀಲವನ್ನು ಗಮನಿಸಿದ್ದರು.
ಇದನ್ನೂ ಓದಿ : ಬಾಲ್ಯ ವಿವಾಹವಾಗಿದ್ದಕ್ಕೆ Pocso ಕೇಸ್- ಯುವಕ ಆತ್ಮಹತ್ಯೆ.!

ಚೀಲವನ್ನ ಆ ವ್ಯಕ್ತಿ ತೆರೆದ ನಂತರ, ವ್ಯಕ್ತಿಯೋರ್ವನ ದೇಹದ ಕೆಳಗಿನ ಭಾಗಗಳು ಕಂಡುಬಂದಿದೆ. ಆದರೆ ದೇಹದ ತಲೆ ಮತ್ತು ಕೈಗಳು ಕಾಣದಾಗಿದ್ದು, ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿಗಳ ಪರಿಶೀಲನೆ
ಯಾರೋ ದುಷ್ಕರ್ಮಿಗಳು ವ್ಯಕ್ತಿಯನ್ನ ಕೊಲೆಗೈದು, ಗುರುತನ್ನು ಮರೆಮಾಚಲು ಆತನ ದೇಹವನ್ನ ಪೀಸ್ ಪೀಸ್ ಮಾಡಿ ದೇಹದ ಭಾಗಗಳನ್ನು ಬಾವಿಗೆ ಎಸೆಯಲಾಗಿದೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಕಾಮರೆಡ್ಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನು ಕೃತ್ಯ ನಡೆದ ಸ್ಥಳದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಳವಡಿಸಲಾದ ಕಣ್ಗಾವಲು ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದು, ಇದರಿಂದ ಪ್ಲಾಸ್ಟಿಕ್ ಚೀಲವನ್ನು ಬಾವಿಗೆ ಎಸೆದ ವ್ಯಕ್ತಿಗಳನ್ನು ಪತ್ತೆಹಚ್ಚಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
MUST WATCH : ವರನ ಮೇಲೆ ಚಾಕು ಇರಿತ ಕೇಸ್ – ತನಿಖೆಯ ವೇಳೆ ಪೊಲೀಸರೇ ಶಾಕ್




