Sudeep ಅವರು ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಸರಿಯಾಗಿ ಮೂರು ದಶಕಗಳು ಸಂದಿವೆ.

ಸ್ಯಾಂಡಲ್ವುಡ್ನ ‘ಅಭಿನಯ ಚಕ್ರವರ್ತಿ’ Kiccha Sudeep ಅವರು ಚಿತ್ರರಂಗಕ್ಕೆ ಕಾಲಿಟ್ಟು ಇಂದಿಗೆ ಸರಿಯಾಗಿ ಮೂರು ದಶಕಗಳು ಸಂದಿವೆ. 30 ವರ್ಷಗಳ ಈ ಅದ್ಭುತ ಸಿನಿ ಪಯಣದ ಸಂಭ್ರಮವನ್ನು ಸುದೀಪ್ ಅವರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆಚರಿಸಿದ್ದಾರೆ.
ಪ್ರೀತಿಯೇ ನನಗೆ ಮುಂದೆ ಸಾಗುವ ಧೈರ್ಯ
ಸುದೀಪ್ ತಮ್ಮ ಸಂದೇಶದಲ್ಲಿ, “ಕನಸುಗಳೊಂದಿಗೆ ಆರಂಭಿಸಿದ ನನ್ನ ಪಯಣ ಇಷ್ಟು ದೊಡ್ಡದಾಗಲಿದೆ ಎಂದು ನಾನು ಊಹಿಸಿರಲಿಲ್ಲ. ಇದಕ್ಕೆ ಕಾರಣ ನೀವು,” ಎಂದು ಅಭಿಮಾನಿಗಳಿಗೆ ತಮ್ಮ ಶ್ರೇಯಸ್ಸನ್ನು ಅರ್ಪಿಸಿದ್ದಾರೆ. ಅವರು ತಮ್ಮ “ಅಭಿಮಾನಿಗಳು ನನ್ನ ಶಕ್ತಿ. ನಿಮ್ಮ ಪ್ರೀತಿಯೇ ನನಗೆ ಮುಂದೆ ಸಾಗುವ ಧೈರ್ಯ ಕೊಡುತ್ತದೆ” ಎಂದಿದ್ದಾರೆ.
ಇದನ್ನು ಓದಿ : ಪುಟ್ಟ ಬಾಲಕನ ಮೇಲೆ ಅಂಗನವಾಡಿ ಆಯಾ ಸಹಾಯಕಿಯಿಂದ ಇದೆಂಥಾ ಕ್ರೌರ್ಯ

ಅಭಿಮಾನಿಗಳೇ ನನ್ನ ಶಕ್ತಿ
ಸುದೀಪ್ ಅಭಿನಯಕ್ಕೆ ನೆರವಾಗಿದ ನಿರ್ದೇಶಕರು, ಬರಹಗಾರರು, ನಿರ್ಮಾಪಕರು, ಸಹನಟರು ಹಾಗೂ ತಾಂತ್ರಿಕ ವರ್ಗದವರ ಪರಿಶ್ರಮವನ್ನು ಮೆಚ್ಚಿಕೊಂಡು ಧನ್ಯವಾದಗಳು ತಿಳಿಸಿದ್ದಾರೆ. ಅವರು, “ಸಿನೆಮಾ ಒಬ್ಬರ ಕೆಲಸವಲ್ಲ, ಅದು ಒಟ್ಟು ತಂಡದ ಸಾಧನೆ” ಎಂದಿದ್ದಾರೆ.
ವಿನಯ ಕಲಿಸಿದ 30 ವರ್ಷ
ಕನ್ನಡ ಚಿತ್ರರಂಗವು ತಮ್ಮ ಗುರುತಿನ ಸಂಕೇತ ಮತ್ತು ಹೆಮ್ಮೆ ಎಂದು ಹೇಳಿದ ಸುದೀಪ್, ಈ 30 ವರ್ಷಗಳು ಅವರನ್ನು ವಿನಯಮಯ ವ್ಯಕ್ತಿಯಾಗಿ ಬೆಳೆಸಿದವು ಎಂದು ಒಪ್ಪಿಕೊಂಡಿ ದ್ದಾರೆ. ಅವರು ತಮ್ಮ ಅಭಿಮಾನಿಗಳಿಗೆ, “ನಾನು ಇನ್ನೂ ಹೆಚ್ಚು ಶ್ರಮಿಸುತ್ತೇನೆ, ಕಲೆಗೆ ಸದಾ ಗೌರವ ಕೊಡುತ್ತಾ ಮುಂದುವರೆಯುತ್ತೇನೆ” ಎಂದು ಭರವಸೆ ನೀಡಿದ್ದಾರೆ.
1996ರಲ್ಲಿ ಆರಂಭವಾದ ಸುದೀಪ್ ಅವರ ಈ ಪಯಣ ಇಂದು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಾಡಿದೆ. ಅವರ ಈ ಸಾಧನೆಗೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ.

ಇದನ್ನು ನೋಡಿ : ಹೋಂ ಸ್ಟೇನಲ್ಲಿ ಮಹಿಳೆಯೊಂದಿಗೆ ತಗ್ಲಾಕೊಂಡ್ರಾ ಬಿಜೆಪಿ ಮುಖಂಡ




