Gold Rate : ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ದಿಢೀರ್ ಕುಸಿತ ಕಂಡುಬಂದಿದೆ. ದಾಖಲೆಯ ಎತ್ತರಕ್ಕೆ ಜಿಗಿದಿದ್ದ ಚಿನ್ನ ಬೆಳ್ಳಿ ಬೆಲೆ ಇಳಿದಿದ್ದು, ಆಭರಣ ಪ್ರಿಯರಲ್ಲಿ ಮತ್ತು ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ.

Gold Rate : ಕಳೆದ ಕೆಲವು ದಿನಗಳಿಂದ ಗಗನಕ್ಕೇರುತ್ತಿದ್ದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ದಿಢೀರ್ ಕುಸಿತ ಕಂಡು ಬಂದಿದೆ. ಇದೀಗ ಗೋಲ್ಡ್ ಸಿಲ್ವರ್ ಇಳಿಕೆಯ ಹಾದಿ ಹಿಡಿದಿದ್ದು, ಆಭರಣ ಪ್ರಿಯರಲ್ಲಿ ಸಂತಸ ಮೂಡಿಸಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾದ ಬದಲಾವಣೆಗಳು, ಅಮೆರಿಕನ್ ಡಾಲರ್ ಮೌಲ್ಯದ ಏರಿಳಿತ ಹಾಗೂ ಅಂತಾರಾಷ್ಟ್ರೀಯ ಹೂಡಿಕೆದಾರರು ಲಾಭಾಂಶ ಪಡೆಯಲು ಮುಂದಾಗಿರುವುದು ಈ ಬೆಲೆ ಕುಸಿತಕ್ಕೆ ಪ್ರಮುಖ ಕಾರಣಗಳಾಗಿವೆ. ಕಳೆದ ವಾರ ದಾಖಲೆ ಬರೆದಿದ್ದ ದರಕ್ಕೆ ಹೋಲಿಸಿದರೆ ಈಗ ಚಿನ್ನದ ಬೆಲೆಯಲ್ಲಿ ಗಣನೀಯ ವ್ಯತ್ಯಾಸ ಕಂಡುಬಂದಿದೆ.
ಬೆಂಗಳೂರಿನಲ್ಲಿ ಚಿನ್ನದ ದರ ಭಾರಿ ಇಳಿಕೆ
ಒಂದು ತಿಂಗಳಿಂದ ನಿರಂತರ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇಂದು ಭರ್ಜರಿ ಕುಸಿತ ಕಂಡುಬಂದಿದೆ. ಶನಿವಾರ ಬೆಂಗಳೂರಿನಲ್ಲಿ 22 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆಯಲ್ಲಿ 790 ರೂ. ಇಳಿಕೆಯಾಗಿದ್ದು, ದರ 14,720 ರೂ. ಆಗಿದೆ. ಇನ್ನು 24 ಕ್ಯಾರಟ್ 1 ಗ್ರಾಂ ಚಿನ್ನದ ಬೆಲೆ 862 ರೂ. ಕಡಿಮೆಯಾಗಿ 16,058 ರೂ.ಗೆ ತಲುಪಿದೆ.

- 22 ಕ್ಯಾರಟ್ ಚಿನ್ನ:
- 8 ಗ್ರಾಂ – ₹1,17,760
- 10 ಗ್ರಾಂ – ₹1,47,200
- 100 ಗ್ರಾಂ – ₹14,72,000
- 24 ಕ್ಯಾರಟ್ ಚಿನ್ನ:
- 8 ಗ್ರಾಂ – ₹1,28,464
- 10 ಗ್ರಾಂ – ₹1,60,580
- 100 ಗ್ರಾಂ – ₹16,05,800
ಇದನ್ನೂ ಓದಿ : ಒಂದೇ ದಿನಕ್ಕೆ ಚಿನ್ನದ ದರದಲ್ಲಿ ಭಾರೀ ಇಳಿಕೆ.!
ಬೆಳ್ಳಿ ದರದಲ್ಲೂ ಭಾರಿ ಇಳಿಕೆ
ಚಿನ್ನದ ಜೊತೆಗೆ ಬೆಳ್ಳಿ ದರದಲ್ಲಿಯೂ ಇಂದು ದೊಡ್ಡ ಮಟ್ಟದ ಕುಸಿತ ಕಂಡುಬಂದಿದೆ. ಬೆಂಗಳೂರಿನಲ್ಲಿ 1 ಗ್ರಾಂ ಬೆಳ್ಳಿಯ ಬೆಲೆಯಲ್ಲಿ 45 ರೂ. ಇಳಿಕೆಯಾಗಿದ್ದು, ದರ 350 ರೂ.ಗೆ ತಲುಪಿದೆ.
- 10 ಗ್ರಾಂ ಬೆಳ್ಳಿ – ₹3,500
- 1 ಕೆಜಿ ಬೆಳ್ಳಿ – ₹3,50,000

ಚಿನ್ನ–ಬೆಳ್ಳಿ ದರದ ಈ ಇಳಿಕೆಯಿಂದ ಆಭರಣ ಖರೀದಿಗೆ ಗ್ರಾಹಕರು ಮುಂದಾಗುವ ಸಾಧ್ಯತೆ ಹೆಚ್ಚಿದ್ದು, ಮಾರುಕಟ್ಟೆಯಲ್ಲಿ ಚಟುವಟಿಕೆ ಹೆಚ್ಚಾಗಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
MUST WATCH : ಲೋಕಾ ಬಲೆಗೆ ಬಿದ್ದ ತುಮಕೂರಿನ PSI – ಲಂಚ ಪಡೆದು ತಗ್ಲಾಕೊಂಡ್ರಾ ಸಬ್ ಇನ್ಸ್ಪೆಕ್ಟರ್




