Sabarimala Theft Case : ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ‘ಕಾಂತಾರ’ ನಟ ಜಯರಾಮ್ ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆ ನಡೆಸಿದೆ.

Sabarimala Theft Case : ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ (‘Sabarimala Gold Theft Case’) ‘ಕಾಂತಾರ ಚಾಪ್ಟರ್ 1’ ಚಿತ್ರದ ನಟ ಜಯರಾಮ್ ಅವರನ್ನು ವಿಶೇಷ ತನಿಖಾ ತಂಡ (SIT) ವಿಚಾರಣೆಗೆ ಒಳಪಡಿಸಿದೆ.
ಕನ್ನಡ, ಮಲಯಾಳಂ, ತಮಿಳು ಹಾಗೂ ತೆಲುಗು ಚಿತ್ರರಂಗಗಳಲ್ಲಿ ಸಕ್ರಿಯರಾಗಿರುವ ಜಯರಾಮ್, ಶಬರಿಮಲೆ ಪ್ರಕರಣದ ಪ್ರಮುಖ ಆರೋಪಿ ಉನ್ನಿಕೃಷ್ಣನ್ ಪೊಟ್ಟಿಯೊಂದಿಗೆ ಸಂಪರ್ಕ ಹೊಂದಿರುವ ಅನುಮಾನ ಹಿನ್ನೆಲೆಯಲ್ಲಿ SIT ವಿಚಾರಣೆ ನಡೆಸಿದೆ ಎನ್ನಲಾಗ್ತಿದೆ.
4.5 ಕೆಜಿ ಚಿನ್ನ ನಾಪತ್ತೆ ಪ್ರಕರಣ
2019ರಲ್ಲಿ ಶಬರಿಮಲೆ ದ್ವಾರಪಾಲಕ ವಿಗ್ರಹಗಳಿಗೆ ಚಿನ್ನದ ಲೇಪನ ಮಾಡುವ ವೇಳೆ ಸುಮಾರು 4.5 ಕೆಜಿ ಚಿನ್ನ ನಾಪತ್ತೆಯಾಗಿತ್ತು. ಈ ಸಂಬಂಧ ಉನ್ನಿಕೃಷ್ಣನ್ ಪೊಟ್ಟಿ ಪ್ರಮುಖ ಆರೋಪಿ ಆಗಿದ್ದು, ಪ್ರಕರಣ ರಾಜ್ಯಮಟ್ಟದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು.
ಆರೋಪಿಯು 2019ರಲ್ಲಿ ಚೆನ್ನೈನಲ್ಲಿ ಆಯೋಜಿಸಿದ್ದ ಪೂಜಾ ಕಾರ್ಯಕ್ರಮದಲ್ಲಿ ಜಯರಾಮ್ ಭಾಗವಹಿಸಿದ್ದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ವಿಡಿಯೋ ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಈ ಹಿನ್ನೆಲೆ, ಜಯರಾಮ್ ಅವರನ್ನು ವಿಚಾರಣೆ ನಡೆಸಲಾಗಿದೆ.

ಇದನ್ನೂ ಓದಿ : GOVT ಬಸ್ಗಳಲ್ಲಿ ಇನ್ಮುಂದೆ ಜಾಹೀರಾತಿಗೆ ಸಂಪೂರ್ಣ ನಿಷೇಧ.!
ಉನ್ನಿಕೃಷ್ಣನ್ ಆಯೋಜಿಸಿದ್ದ ಪೂಜೆಗಳಲ್ಲಿ ಜಯರಾಮ್ ಎಷ್ಟು ಬಾರಿ ಭಾಗವಹಿಸಿದ್ದರು, ಇಬ್ಬರ ನಡುವೆ ವೈಯಕ್ತಿಕ ಅಥವಾ ಆರ್ಥಿಕ ಸಂಬಂಧವಿದೆಯೇ ಎಂಬುದರ ಬಗ್ಗೆ ಪ್ರಶ್ನೆ ಕೇಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚಿತ್ರರಂಗದಲ್ಲಿ ಜಯರಾಮ್ರ ಖ್ಯಾತಿ
ಜಯರಾಮ್ ಕನ್ನಡ ಚಿತ್ರರಂಗಕ್ಕೆ ಚಿರಪರಿಚಿತರಾಗಿದ್ದು, ಇತ್ತೀಚೆಗೆ ‘ಘೋಸ್ಟ್’ ಸಿನಿಮಾದಲ್ಲೂ ಅವರು ಕಾಣಿಸಿಕೊಂಡಿದ್ದರು. ಮೂಲತಃ ಮಲಯಾಳಂ ನಟರಾಗಿದ್ದರೂ, ಕನ್ನಡವನ್ನು ಶುದ್ಧವಾಗಿ ಮಾತನಾಡುತ್ತಾರೆ. ‘ಕಾಂತಾರ 1’ ಸಿನಿಮಾದಲ್ಲಿ ರಾಜಶೇಖರ ಪಾತ್ರದಲ್ಲಿ ಅಭಿನಯಿಸಿದ ಜಯರಾಮ್ ಅವರ ಪಾತ್ರಕ್ಕೂ ಸಾಕಷ್ಟು ಗಮನ ಸೆಳೆಯಲಾಗಿದೆ.

ಶಬರಿಮಲೆ ಚಿನ್ನ ಕಳವು ಪ್ರಕರಣದಲ್ಲಿ ತನಿಖೆ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಪ್ರಮುಖ ಮಾಹಿತಿ ಹೊರಬೀಳುವ ಸಾಧ್ಯತೆ ಇದೆ.
MUST WATCH : ಲೋಕಾ ಬಲೆಗೆ ಬಿದ್ದ ತುಮಕೂರಿನ PSI – ಲಂಚ ಪಡೆದು ತಗ್ಲಾಕೊಂಡ್ರಾ ಸಬ್ ಇನ್ಸ್ಪೆಕ್ಟರ್




