KSRTC Bus : ಸರ್ಕಾರಿ ಬಸ್ಗಳಲ್ಲಿ ಪಾನ್ ಮಸಾಲ, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಹಾಕಿರುತ್ತಾರೆ. ಆದರೆ ಇಂತಹ ಜಾಹೀರಾತಿಗಳಿಗೆ ಇನ್ಮುಂದೆ ಕಡಿವಾಣ ಬೀಳಲಿದೆ.

KSRTC Bus : ಬಸ್ಗಳು ಹಾಗೂ ಬಸ್ ನಿಲ್ದಾಣಗಳಲ್ಲಿ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ಯಾವುದೇ ನೇರ ಅಥವಾ ಪರೋಕ್ಷ ಜಾಹೀರಾತುಗಳನ್ನು ಇನ್ಮುಂದೆ ಹಾಕಬಾರದು ಎಂದು ಸಾರಿಗೆ ಸಚಿವರು ಆದೇಶ ಹೊರಡಿಸಿದ್ದಾರೆ.
ಸಾರ್ವಜನಿಕರ ಹಿತದೃಷ್ಟಿಯಿಂದ ಈ ಆದೇಶವನ್ನು ತಕ್ಷಣ ಜಾರಿಗೆ ತರಲಾಗಿದ್ದು, ಪಾನ್ ಮಸಾಲಾ, ಗುಟ್ಕಾ ಸೇರಿದಂತೆ ತಂಬಾಕು ಉತ್ಪನ್ನಗಳ ಸೇವನೆಗೆ ಪ್ರಚೋದಿಸುವ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಈಗಾಗಲೇ ಬಸ್ಗಳು ಅಥವಾ ಬಸ್ ನಿಲ್ದಾಣಗಳಲ್ಲಿ ಇಂತಹ ಜಾಹೀರಾತುಗಳನ್ನು ಅಳವಡಿಸಿದ್ದಲ್ಲಿ, ಅವುಗಳನ್ನ ತೆರವುಗೊಳಿಸಲು ನಿರ್ದಿಷ್ಟ ಕಾಲಾವಕಾಶ ನಿಗದಿಪಡಿಸಿ, ಆ ಅವಧಿಯೊಳಗೆ ಕಡ್ಡಾಯವಾಗಿ ತೆಗೆದು ಹಾಕುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
ವಿವಾದಕ್ಕೆ ಕಾರಣವಾಗಿದ್ದ ತಂಬಾಕು ಜಾಹೀರಾತುಗಳು
KSRTC, NWKRTC ಹಾಗೂ BMTC ಬಸ್ಗಳಲ್ಲಿ ಜಾಹೀರಾತುಗಳು ಕಾಣಿಸಿಕೊಂಡಿದ್ದು,ಈ ವಿಷಯ ಹಲವು ಬಾರಿ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯದಲ್ಲಿ ಗುಟ್ಕಾ ನಿಷೇಧ ಇದ್ದರೂ, ತಂಬಾಕು ಉತ್ಪನ್ನಗಳನ್ನು ಪರೋಕ್ಷವಾಗಿ ಪ್ರಚಾರ ಮಾಡಲಾಗುತ್ತಿತ್ತು ಎನ್ನಲಾಗಿತ್ತು.
ಹಲವು ಪ್ರಮುಖ ಬ್ರಾಂಡ್ಗಳು ಬಸ್ಗಳ ಮೇಲೆ ಪೂರ್ಣ ವ್ರ್ಯಾಪ್ ಅಥವಾ ಬ್ಯಾನರ್ಗಳ ಮೂಲಕ ಜಾಹೀರಾತು ಮಾಡುತ್ತಿದ್ದು, ಬಾಲಿವುಡ್ ಸೆಲೆಬ್ರಿಟಿಗಳನ್ನು ಬಳಸಿಕೊಂಡು ಯುವಕರನ್ನು ಆಕರ್ಷಿಸಲಾಗುತ್ತಿದೆ ಎಂಬ ಆಕ್ಷೇಪ ವ್ಯಕ್ತವಾಗಿತ್ತು.
ಇದನ್ನೂ ಓದಿ : ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾ ಬಲೆಗೆ ಬಿದ್ದ ತುಮಕೂರು PSI.!

COTPA ಕಾಯ್ದೆ ಉಲ್ಲಂಘನೆ ಆರೋಪ
ತಂಬಾಕು ಉತ್ಪನ್ನಗಳ ಜಾಹೀರಾತುಗಳು COTPA ಕಾಯ್ದೆಯ ಉಲ್ಲಂಘನೆಯಾಗಿದ್ದು. ತಂಬಾಕು ಬಳಕೆಗೆ ದಂಡ ವಿಧಿಸುವ NWKRTCಯಂತಹ ಸಂಸ್ಥೆಗಳೇ ಇಂತಹ ಜಾಹೀರಾತುಗಳಿಗೆ ಅವಕಾಶ ನೀಡಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ವೀಡಿಯೊಗಳಲ್ಲಿ ಯುವಕರು ಬಸ್ಗಳ ಮೇಲಿನ ಗುಟ್ಕಾ ಹಾಗೂ ಪಾನ್ ಮಸಾಲಾ ಜಾಹೀರಾತುಗಳನ್ನು ಹರಿದು ಹಾಕುತ್ತಿರುವ ದೃಶ್ಯಗಳು ಕಾಣಿಸಿಕೊಂಡಿವೆ.
ಸಾರಿಗೆ ಸಚಿವರ ಈ ಆದೇಶದಿಂದ ಸಾರ್ವಜನಿಕ ಸಾರಿಗೆಯಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರಕ್ಕೆ ಬ್ರೇಕ್ ಬೀಳುವ ನಿರೀಕ್ಷೆ ವ್ಯಕ್ತವಾಗಿದೆ.
MUST WATCH : CJ ROY SUCIDE|ಕಾನ್ಫಿಡೆಂಟ್ ಗ್ರೂಪ್ ಮಾಲೀಕನ ಜೀವನದಲ್ಲಿ ಇದೇನ್ ಆಯ್ತು- ದಾಳಿವೇಳೆ ಶೂಟ್ ಮಾಡಿಕೊಂಡಿದ್ದು ಯಾಕೆ?




