Gold Rate Today : ಕಳೆದೊಂದು ತಿಂಗಳಿಂದ ದೇಶಾದ್ಯಂತ ಭಾರೀ ಏರಿಕೆಯಲ್ಲಿದ್ದ ಚಿನ್ನದ ದರದಲ್ಲಿ ಇದೀಗ ಭಾರೀ ಇಳಿಕೆ ಕಂಡು ಬಂದಿದೆ.

Gold Rate : ಕಳೆದೊಂದು ತಿಂಗಳಿಂದ ನಿರಂತರ ಏರಿಕೆಯಲ್ಲಿ ಇದ್ದ ಚಿನ್ನದ ದರದಲ್ಲಿ ಇದೀಗ ಭಾರೀ ಇಳಿಕೆ ಕಂಡುಬಂದಿದೆ. ಜನವರಿ 29, 2026ರಂದು ಚಿನ್ನದ ಬೆಲೆಯಲ್ಲಿ ದೊಡ್ಡ ಮಟ್ಟದ ಕುಸಿತ ದಾಖಲಾಗಿದ್ದು, ಗ್ರಾಹಕರಿಗೆ ಸ್ವಲ್ಪ ಮಟ್ಟಿನ ನಿಟ್ಟುಸಿರು ಸಿಕ್ಕಂತಾಗಿದೆ.
ಇಂದಿನ ದರದ ಪ್ರಕಾರ, 22 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 755 ರೂ. ಇಳಿಕೆಯಾಗಿದ್ದು, ಪ್ರತಿ ಗ್ರಾಂಗೆ 15,640 ರೂ. ಆಗಿದೆ. ಅದೇ ರೀತಿ 24 ಕ್ಯಾರಟ್ ಒಂದು ಗ್ರಾಂ ಚಿನ್ನದ ಬೆಲೆಯಲ್ಲಿ 823 ರೂ. ಇಳಿಕೆಯಾಗಿ, 17,062 ರೂ.ಗೆ ತಲುಪಿದೆ.
ಇದನ್ನೂ ಓದಿ : ಚಿನ್ನ, ಬೆಳ್ಳಿ ಪ್ರಿಯರಿಗೆ ಶಾಕ್ – ಬರೋಬ್ಬರಿ 9 ಲಕ್ಷ ಗಡಿ ದಾಟಿದ Gold

22 ಕ್ಯಾರಟ್ ಚಿನ್ನದ ಇಂದಿನ ದರ
- 1 ಗ್ರಾಂ: ₹15,640
- 8 ಗ್ರಾಂ: ₹1,25,120
- 10 ಗ್ರಾಂ: ₹1,56,400
- 100 ಗ್ರಾಂ: ₹15,64,000
24 ಕ್ಯಾರಟ್ ಚಿನ್ನದ ಇಂದಿನ ದರ
- 1 ಗ್ರಾಂ: ₹17,062
- 8 ಗ್ರಾಂ: ₹1,36,496
- 10 ಗ್ರಾಂ: ₹1,70,620
- 100 ಗ್ರಾಂ: ₹17,06,200

ಇತ್ತೀಚಿನ ದಿನಗಳಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಳವಣಿಗೆಗಳು ಹಾಗೂ ಆರ್ಥಿಕ ಅಂಶಗಳ ಪರಿಣಾಮವಾಗಿ ಚಿನ್ನದ ಬೆಲೆಯಲ್ಲಿ ಏರಿಳಿತ ಮುಂದುವರಿದಿದೆ. ಇಂದು ಕಂಡುಬಂದಿರುವ ಈ ದೊಡ್ಡ ಇಳಿಕೆಯಿಂದಾಗಿ ಚಿನ್ನ ಖರೀದಿಸಲು ಕಾಯುತ್ತಿದ್ದ ಗ್ರಾಹಕರಲ್ಲಿ ಸಂತಸ ವ್ಯಕ್ತವಾಗಿದೆ.
MUST WATCH : ಚಿನ್ನ ಅಲ್ಲ ಬೆಳ್ಳಿ ದರವೂ ಹೆಚ್ಚಳ ಇವತ್ತಿನ ರೇಟ್ ಕೇಳಿದ್ರೆ ಶಾಕ್ ಆಗ್ತಿರಾ




