Gold Rate : ಚಿನ್ನ, ಬೆಳ್ಳಿ ಪ್ರಿಯರಿಗೆ ಶಾಕ್ ದರ ಏರಿಕೆಯ ಶಾಕ್.

ಚಿನ್ನ, ಬೆಳ್ಳಿ ರೇಟ್ ಇವತ್ತು ಮತ್ತೆ ಏರಿಕೆಯಾಗಿದ್ದು, ಬಡವರು, ಜನ ಸಾಮಾನ್ಯರು ಚಿನ್ನ ಇರ್ಲಿ, ಬೆಳ್ಳಿಯನ್ನು ಕೊಳ್ಳಲು ಆಗ್ತಾದಂತಾಗಿದೆ. Gold Rate ದಿನೇ ದಿನೆ ಹೆಚ್ಚಾಗ್ತಾ ಇದ್ದು, ಚಿನ್ನ ಹೋಗ್ಲಿ ಬೆಳ್ಳಿಯನ್ನಾದ್ರು ಕೊಂಡುಕೊಳ್ಳೋಣ ಅಂದ್ರೆ, ಬೆಳ್ಳಿಯ ರೇಟ್ ಕೂಡ ಗಗನಕ್ಕೇರುತ್ತಿದ್ದು ಜನರಿಗೆ ಶಾಕ್ ಮೇಲೆ ಶಾಕ್ ಆಗಿದೆ. ಹೌದು ಇಂದು ಚಿನ್ನದ ಜೊತೆ ಬೆಳ್ಳಿಯ ರೇಟ್ ಕೂಡ ಹೆಚ್ಚಾಗಿದ್ದು, ಇಂದಿನ ರೇಟ್ ಕೇಳಿ ಬೆಚ್ಚಿಬೀಳುವಂತಾಗಿದೆ.

ಬೆಳ್ಳಿಯ ರೇಟ್ ಕೇಳಿದ್ರೆ ನೀವು ಶಾಕ್ ಆಗ್ತಿರಾ..?
ಇತ್ತೀಚಿನ ಕೆಲ ದಿನಗಳಲ್ಲಿ ಬೆಳ್ಳಿಯ ದರ ಸತತವಾಗಿ ಏರಿಕೆ ಕಂಡಿದ್ದು, ಇದೇ ಮೊದಲ ಬಾರಿಗೆ ಬೆಳ್ಳಿಯ ಬೆಲೆ ಕೆ.ಜಿಗೆ 4 ಲಕ್ಷದ 10 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ಇತ್ತ ಚಿನ್ನದ ಬೆಲೆಯೂ ಏರಿಕೆ ಕಂಡಿದ್ದು 10 ಗ್ರಾಂ ಚಿನ್ನಕ್ಕೆ 10 ಸಾವಿರ ರೂಪಾಯಿ ಏರಿಕೆಯಾಗಿದ್ದು ಆಭರಣ ಪ್ರಿಯರು ಚಿನ್ನ, ಬೆಳ್ಳಿಯ ಸಹವಾಸವೇ ಬೇಡ ಅನ್ನುವಂತಾಗಿದೆ. 24 ಕ್ಯಾರೇಟ್ ಚಿನ್ನದ ಬೆಲೆ ಒಂದು ಗ್ರಾಂಗೆ 1 ಸಾವಿರ ರೂಪಾಯಿ ಏರಿಕೆ ಆಗಿದ್ದು, 16 ಸಾವಿರದ 800 ರೂಪಾಯಿಗೆ ಏರಿಕೆ ಆಗಿದೆ. ಇನ್ನು 22 ಕ್ಯಾರೇಟ್ ಒಂದು ಚಿನ್ನದ ಬೆಲೆ 16 ಸಾವಿರದ 400 ರೂಪಾಯಿಗೆ ಏರಿಕೆ ಆಗಿದೆ.

9 ಲಕ್ಷ ಗಡಿ ದಾಟಿದ ಚಿನ್ನ
ಇನ್ನು ಒಂದು ಗ್ರಾಂ ಚಿನ್ನ ಅಂತೂ ಕೊಳ್ಳಲು ಆಗ್ತಾ ಇಲ್ಲ, ಅಟ್ ಲೀಸ್ಟ್ ಬೆಳ್ಳಿಯನ್ನಾದ್ರು ಕೊಳ್ಳೋಣ ಅಂತಾ ಇದ್ದ ಜನರಿಗೆ ಬೆಳ್ಳಿ ರೇಟ್ ಕೂಡ ಹೆಚ್ಚಾಗ್ತಾ ಇದ್ದು, ರೇಟ್ ಕೇಳಿಯೇ ಜನರ ತಲೆ ಸುತ್ತುವಂತಾಗಿದೆ. ಬೆಳ್ಳಿ ದರ ಇಂದು ಸರ್ವಕಾಲಿಕ ಏರಿಕೆ ಕಂಡಿದ್ದು, ಒಂದೇ ದಿನಕ್ಕೆ ಕೆ.ಜಿ ಬೆಳ್ಳಿ ದರ 30 ಸಾವಿರ ರೂಪಾಯಿ ಏರಿಕೆ ಆಗಿದೆ. ಇದೇ ಮೊದಲ ಬಾರಿಗೆ ಕೆ.ಜಿ ಬೆಳ್ಳಿ ಬೆಲೆ 4 ಲಕ್ಷ ರೂಪಾಯಿ ಗಡಿ ದಾಟಿದೆ. ಮಾರುಕಟ್ಟೆಯಲ್ಲಿ ಇಂದು ಕೆ.ಜಿ ಬೆಳ್ಳಿ ಬೆಲೆ 4 ಲಕ್ಷದ 10 ಸಾವಿರ ರೂಪಾಯಿಗೆ ಏರಿಕೆ ಆಗಿದೆ.
ನಿನ್ನೆ ಬೆಳ್ಳಿ ಬೆಲೆ ಪ್ರತಿ ಕೆ.ಜಿಗೆ 3 ಲಕ್ಷದ 80 ಸಾವಿರ ರೂಪಾಯಿ ಇದ್ದು, ಕೇವಲ ಒಂದೇ ದಿನದಲ್ಲಿ ಕೆ.ಜಿ ಬೆಳ್ಳಿಗೆ 30 ಸಾವಿರ ರೂಪಾಯಿ ಏರಿಕೆ ಆಗಿದ್ದು ಜನರು ಚಿನ್ನ, ಬೆಳ್ಳಿಯ ಸಹವಾಸವೇ ಬೇಡ ಅನ್ನುತ್ತಿದ್ದಾರೆ.
ಇದನ್ನು ಓದಿ : ಮಾಜಿ ಸಚಿವರ ಮನೆಗೆ ಭೇಟಿ ನೀಡಿದ Gilli Nata

ಷೇರು ಮಾರ್ಕೆಟ್ನಲ್ಲಿ ಕುಸಿತದಿಂದಾಗಿ ಬೆಲೆ ಏರಿಕೆ
ಇನ್ನು, ಜಾಗತಿಕ ರಾಜಕೀಯ ಅನಿಶ್ಚಿತತೆ ಹಾಗೂ ಷೇರು ಮಾರ್ಕೆಟ್ನಲ್ಲಿ ಕುಸಿತದ ಪರಿಣಾಮ ಸುರಕ್ಷಿತ ಹೂಡಿಕೆಯಾದ ಚಿನ್ನ ಮತ್ತು ಬೆಳ್ಳಿ ಮೇಲೆ ಜನರ ಹೂಡಿಕೆಯಿಂದಾಗಿ ಚಿನ್ನ ಹಾಗೂ ಬೆಳ್ಳಿಯ ಬೆಲೆ ಏರಿಕೆಯಾಗಿದೆ ಎಂದು ಹೇಳಲಾಗ್ತಿದೆ. ಮುಂದಿನ ದಿನಗಳಲ್ಲಿ ಬೆಳ್ಳಿಯ ಕೆಜಿ ಬೆಳ್ಳಿಯ ಬೆಲೆ 5 ಲಕ್ಷ ಗಡಿ ದಾಟುವ ನಿರೀಕ್ಷೆ ಇದೆ ಎಂದು ಹೇಳಲಾಗ್ತಿದ್ದು, ಜನರನ್ನು ಚಿಂತೆಗೀಡಾಗುವಂತೆ ಮಾಡಿದೆ.

ಇದನ್ನು ನೋಡಿ : MUDA CASE | ಮುಡಾ ಪ್ರಕರಣದಿಂದ ಸಿಎಂ ಸಿದ್ದರಾಮಯ್ಯಗೆ ಸಿಕ್ತು ಬಿಗ್ ರಿಲೀಫ್




