Bengaluru : 17ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಉದ್ಘಾಟನೆಗೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದರು.

Bengaluru : ಕಾರ್ಯಕ್ರಮವನ್ನು ವಿಧಾನಸೌಧದಲ್ಲಿ ದೀಪ ಬೆಳಗುವ ಮೂಲಕ ಸಾಂಪ್ರದಾಯಿಕವಾಗಿ ಉದ್ಘಾಟಿಸಲಾಗಿದೆ.
ಥೀಮ್ ಬಿಡುಗಡೆ ಮತ್ತು ಧ್ಯೇಯ ವಾಕ್ಯ
ಈ ಸಂದರ್ಭದಲ್ಲಿ ಚಲನಚಿತ್ರೋತ್ಸವದ ರಾಯಭಾರಿ ಪ್ರಕಾಶ್ ರಾಜ್ ಥೀಮ್ ಬಿಡುಗಡೆ ಮಾಡಿದರು.
ಚಿತ್ರೋತ್ಸವವು ‘ಸ್ತ್ರೀ ಎಂದರೆ ಅಷ್ಟೇ ಸಾಕೇ’ ಎಂಬ ಧ್ಯೇಯ ವಾಕ್ಯದೊಂದಿಗೆ ಪ್ರಾರಂಭವಾಗಿದೆ.
ಇದನ್ನು ಓದಿ : Belagavi|ಸಮಸ್ಯೆ ಹೇಳಲು ಬಂದವನಿಗೆ ಕಚ್ಚಿದ ಗ್ರಾಮ ಪಂಚಾಯತ್ ಅಧ್ಯಕ್ಷ?
ಚಲನಚಿತ್ರ ಪ್ರದರ್ಶನ ನಾಳೆಯಿಂದ ಪ್ರಾರಂಭವಾಗುತ್ತಿದ್ದು, ಫೆಬ್ರವರಿ 6ರವರೆಗೆ 65 ದೇಶಗಳ 225 ಚಿತ್ರಗಳು ಪ್ರದರ್ಶನಕ್ಕೆ ಸಿದ್ಧವಾಗಿವೆ.
ಇದೇ ವೇಳೆ ಸಿಎಂ ಸಿದ್ದರಾಮಯ್ಯ ಚಿತ್ರೋತ್ಸವದ ಕೈಪಿಡಿ ಬಿಡುಗಡೆ ಮಾಡಿದ್ದಾರೆ.
ಗಣ್ಯರು ಮತ್ತು ವಿಶೇಷ ಅತಿಥಿಗಳು
ಉದ್ಘಾಟನಾ ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ್ ಹೊರಟ್ಟಿ, ನಟಿ ರುಕ್ಮಿಣಿ ವಸಂತ್, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸಾಧು ಕೋಕಿಲಾ, ಶಾಸಕ ರಿಜ್ವಾನ್ ಅರ್ಶದ್, ಸಿಎಸ್ ಶಾಲಿನಿ ರಜನೀಶ್ ಮತ್ತು ಚಿತ್ರರಂಗದ ಇತರ ಗಣ್ಯರು ಭಾಗವಹಿಸಿದ್ದರು.
ಇದನ್ನು ನೋಡಿ : GOLD RATE | ಚಿನ್ನ ಅಲ್ಲ ಬೆಳ್ಳಿ ದರವೂ ಹೆಚ್ಚಳ ಇವತ್ತಿನ ರೇಟ್ ಕೇಳಿದ್ರೆ ಶಾಕ್ ಆಗ್ತಿರಾ




