Doddaballapura : 3 ಮದುವೆಯಾದ ಐನಾತಿ; ಲಕ್ಷ, ಲಕ್ಷ ಲೂಟಿ ಮಾಡಿ ಕೈ ಕೊಡ್ತಿದ್ದಳು ಈ ಖತರ್ನಾಕ್ ಬ್ಯೂಟಿ! ಗಂಡಂದಿರ ಕಣ್ಣೀರು.

Doddaballapura ದಲ್ಲಿ ಪ್ರೀತಿ ಮತ್ತು ಮದುವೆಯ ಹೆಸರಿನಲ್ಲಿ ಪುರುಷರನ್ನು ನಂಬಿಸಿ ಲಕ್ಷಾಂತರ ರೂಪಾಯಿ ವಂಚನೆ ನಡೆಸಿರುವ ಮಹಿಳೆಯೊಬ್ಬಳ ಅಸಲಿ ಮುಖ ಬೆಳಕಿಗೆ ಬಂದಿದೆ. ಅಣಬೆ ಗ್ರಾಮದ ಸುಧಾರಾಣಿ ವಿರುದ್ಧ ಮೊದಲ ಹಾಗೂ ಎರಡನೇ ಪತಿಯರಿಂದ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ದೂರು ಸಲ್ಲಿಸಲಾಗಿದೆ.
ಪತಿಯರಿಂದ ಲಕ್ಷಾಂತರ ರೂಪಾಯಿ ವಂಚನೆ
ಅಣಬೆ ಗ್ರಾಮದ ಸುಧಾರಾಣಿ ವಿರುದ್ಧ ಮೊದಲ ಮತ್ತು ಎರಡನೇ ಪತಿಯರಿಂದ ದೂರು ಸಲ್ಲಿಸಲಾಗಿದೆ. ಸಂತ್ರಸ್ತರು ಹೇಳುವಂತೆ, ಸುಧಾರಾಣಿ ಹಣವಿರುವ ಪುರುಷರನ್ನು ಗುರಿಯಾಗಿಸಿಕೊಂಡು ವಂಚಿಸುತ್ತಿದ್ದಾಳೆ.
ಈಗಾಗಲೇ ಮೂವರೊಂದಿಗೆ ಮದುವೆ ಗೊಂಡಿರುವ ಈ ಮಹಿಳೆ, ಇಬ್ಬರು ಪತಿಯರಿಂದ ಲಕ್ಷಾಂತರ ರೂಪಾಯಿ ವಂಚನೆ ನಡೆಸಿದಂತೆ ಆರೋಪಿಸಲಾಗಿದೆ.

“ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ
ಮಹಿಳೆ ಮೊದಲ ಪತಿ ವೀರೆಗೌಡನೊಂದಿಗೆ ಇಬ್ಬರು ಮಕ್ಕಳನ್ನು ಹುಟ್ಟಿಸಿಕೊಂಡಿದ್ದರೂ, “ಕಾರು ಮತ್ತು ಬುಲೆಟ್ ಓಡಿಸಲು ಬರಲ್ಲ” ಎಂಬ ಕಾರಣ ಹೇಳಿ, ಪತಿಯನ್ನೂ ಮಕ್ಕಳನ್ನೂ ತೊರೆದು ಹೋಗಿದ್ದಾಳೆ.
ನಂತರ, ಡೆಲಿವರಿ ಬಾಯ್ ಅನಂತಮೂರ್ತಿಯನ್ನು ನಂಬಿಸಿ ದೇವಸ್ಥಾನದಲ್ಲಿ ಮದುವೆಯಾಗಿದ್ದು, ಸುಮಾರು 1 ವರ್ಷದಿಂದ 15-20 ಲಕ್ಷ ರೂಪಾಯಿ ವಂಚನೆ ನಡೆಸಿದಂತೆ ದಾಖಲೆಗಳಿವೆ.
ನ್ಯಾಯಕ್ಕಾಗಿ ಆಗ್ರಹ
ಮಹಿಳೆ ಅನಂತಮೂರ್ತಿಯಿಂದ ಹಣ ಪಡೆದ ನಂತರ ಮೂರನೇ ಮದುವೆ ಮಾಡಿಕೊಂಡಿರುವ ಮಾಹಿತಿ ಬಂದಿದೆ. ಇದೀಗ ಮೊದಲ ಮತ್ತು ಎರಡನೇ ಪತಿಗಳು ಒಟ್ಟಾಗಿ ದೊಡ್ಡಬಳ್ಳಾಪುರ ಪೊಲೀಸ್ ಠಾಣೆಗೆ ತೆರಳಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
ಇದನ್ನು ಓದಿ : OTT ಗೆ ‘ಧುರಂಧರ್’ – ನೆಟ್ಫ್ಲಿಕ್ಸ್ ವಿರುದ್ಧ ಫ್ಯಾನ್ಸ್ ಆಕ್ರೋಶ

ಪ್ರಕರಣ ದಾಖಲು
ಸಂತ್ರಸ್ತರು, ಸುಧಾರಾಣಿ ಶ್ರೀಮಂತರನ್ನು ಮತ್ತು ಅಮಾಯಕರನ್ನು ಗುರಿಯಾಗಿಸಿಕೊಂಡು ಹಣಕ್ಕಾಗಿ ಮದುವೆ ಮತ್ತು ಪ್ರೀತಿ ಎಂಬ ನಾಟಕವಾಡುತ್ತಿದ್ದಾಳೆ ಎಂದು ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ದೊಡ್ಡಬಳ್ಳಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ಮಹಿಳೆಯ ಮೂರೂ ಮದುವೆಗಳು, ಹಣ ವಂಚನೆಯ ವಿವರಗಳು ಹಾಗೂ ಹಳೆಯ ಪತಿಯರ ಮೇಲಿನ ಆರೋಪಗಳ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನು ನೋಡಿ : ಮದುವೆಗೆ ಹೋಗುತ್ತಿದ್ದ ವರ – ಏಕಾಏಕಿ ಬಂದ್ರು ಚಾಕು ಹಾಕಿದ್ರು




