ಹೊಸದಾಗಿ ಮದುವೆಯಾದ ಯುವಕ ಆತ್ಮಹತ್ಯೆಗೆ ಶರಣಾದ ಪ್ರಕರಣ ತಿರುವು ಪಡೆದುಕೊಂಡಿದೆ. ಪತ್ನಿ Lover ಜೊತೆ ಪರಾರಿಯಾಗಿದ್ದ ಹಿನ್ನೆಲೆ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮದುವೆಯಾಗಿ ಹೊಸ ಬದುಕಿಗೆ ಕಾಲಿಟ್ಟಿದ್ದ ನವವಿವಾಹಿತನ ಆತ್ಮಹತ್ಯೆ ಪ್ರಕರಣಕ್ಕೆ ಇದೀಗ ಮಹತ್ವದ ತಿರುವು ಸಿಕ್ಕಿದೆ. ಪತ್ನಿ Lover ನೊಂದಿಗೆ ಪರಾರಿಯಾದ ಹಿನ್ನೆಲೆ ಅವಮಾನ ಹಾಗೂ ಮನನೊಂದಿನಿಂದ ಗಂಡ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಯುವತಿಯನ್ನು ಪೊಲೀಸರು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಗುಮ್ಮನೂರು ಗ್ರಾಮದ ಹರೀಶ್ ಕುಟುಂಬದವರು ತೋರಿಸಿದ ಯುವತಿಯನ್ನು ಮದುವೆಯಾಗಿದ್ದು ಕೇವಲ ಎರಡು ತಿಂಗಳು ಕಳೆದಿತ್ತು.
ಆದರೆ ಮದುವೆಯಾದರೂ ಪ್ರಿಯಕರನನ್ನು ಬಿಡಲು ಸಿದ್ಧಳಾಗಿರದ ಸರಸ್ವತಿ, ಗಂಡ ಹಾಗೂ ಮನೆಯವರನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದಾಳೆ ಎನ್ನಲಾಗಿದೆ.

ಅವಮಾನ ತಾಳಲಾರದೇ ಗಂಡ ಆತ್ಮಹತ್ಯೆ
ಪತ್ನಿಯ ನಡೆಗೆ ತೀವ್ರವಾಗಿ ಮನನೊಂದ ಹರೀಶ್, ಅವಮಾನ ತಾಳಲಾರದೆ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ದುರ್ಘಟನೆ ಇಡೀ ಗ್ರಾಮವನ್ನು ಬೆಚ್ಚಿಬೀಳಿಸಿದೆ.

ಮದುವೆ ಮಾಡಿಸಿದ ತಪ್ಪಿಗೆ ಸೋದರ ಮಾವ ಅಂತ್ಯ
ಹರೀಶ್ ಸಾವಿನ ಬೆನ್ನಲ್ಲೇ, ಹರೀಶ್–ಸರಸ್ವತಿಗೆ ಮದುವೆ ಮಾಡಿಸಿದ್ದ ಸರಸ್ವತಿಯ ಸೋದರ ಮಾವ ರುದ್ರೇಶ್ ಕೂಡ ಮನನೊಂದಿನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಒಂದೇ ಪ್ರಕರಣದಲ್ಲಿ ಎರಡು ಸಾವುಗಳು ಕುಟುಂಬವನ್ನು ಶೋಕಸಾಗರದಲ್ಲಿ ಮುಳುಗಿಸಿವೆ.

ಸರಸ್ವತಿ ಪ್ರಿಯಕರ ಕುಮಾರ್/ಶಿವಕುಮಾರ್ ಜೊತೆ ಕಾರಿನಲ್ಲಿ ಪರಾರಿಯಾಗಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳ ಆಧಾರದಲ್ಲಿ ತನಿಖೆ ನಡೆಸಿದ ಪೊಲೀಸರು, ಎಲೆಬೇತೂರು (ದಾವಣಗೆರೆ)ಯಲ್ಲಿದ್ದ ಸಂಬಂಧಿಕರ ಮನೆಯಲ್ಲಿ ಸರಸ್ವತಿಯನ್ನು ಬಂಧಿಸಿದ್ದಾರೆ.

ಆರೋಪಿಗಳು ಪರಾರಿ, ಹುಡುಕಾಟ ಮುಂದುವರಿಕೆ
ಪ್ರಕರಣದಲ್ಲಿ ಸರಸ್ವತಿಯ ಪ್ರಿಯಕರ ಶಿವಕುಮಾರ್, ಪರಾರಿಯಾಗಲು ಸಹಾಯ ಮಾಡಿದ ಸೋದರ ಮಾವ ಗಣೇಶ್, ಚಿಕ್ಕಮ್ಮ ಅಂಜಿನಮ್ಮ ಪರಾರಿಯಾಗಿದ್ದು, ದಾವಣಗೆರೆ ಪೊಲೀಸರು ಹುಡುಕಾಟ ಮುಂದುವರಿಸಿದ್ದಾರೆ.

ಈ ನಡುವೆ ಪ್ರಿಯಕರ ಶಿವಕುಮಾರ್ ಎರಡು ಪ್ರತ್ಯೇಕ ಅಟ್ರಾಸಿಟಿ ಕೇಸ್ಗಳನ್ನು ದಾಖಲಿಸಿದ್ದಾನೆ. ಮತ್ತೊಂದೆಡೆ, ಹರೀಶ್ ತಂದೆ ಮಹಾರುದ್ರಪ್ಪ ಹಾಗೂ ಮೃತ ಸೋದರ ಮಾವನ ಪತ್ನಿ ಪೂರ್ಣಿಮಾ ಅವರಿಂದಲೂ ಅಟ್ರಾಸಿಟಿ ಪ್ರಕರಣ ದಾಖಲಾಗಿದೆ.
ತನಿಖೆ ಮುಂದುವರಿಕೆ
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ DySP ಬಸವರಾಜ್ ನೇತೃತ್ವದಲ್ಲಿ ಸರಸ್ವತಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ಶಿವಮೊಗ್ಗ ಅಥವಾ ಚಿತ್ರದುರ್ಗ ಮಹಿಳಾ ಕಾರಾಗೃಹಕ್ಕೆ ಕರೆದೊಯ್ಯುವ ಸಾಧ್ಯತೆ ಇದೆ

ಹೊಸ ಜೀವನ ಕಟ್ಟಿಕೊಳ್ಳುವ ಹಂತದಲ್ಲೇ ಆತುರದ ನಿರ್ಧಾರಗಳು ಹಲವು ಜೀವಗಳನ್ನು ಕಿತ್ತುಕೊಂಡಿವೆ. ಈ ಘಟನೆ ಕುಟುಂಬ, ಸಮಾಜ ಹಾಗೂ ಯುವಜನತೆಗೆ ಗಂಭೀರ ಎಚ್ಚರಿಕೆಯಾಗಿ ಉಳಿದಿದೆ.




