Haveri : 21 ನೇ ಶತಮಾನದಲ್ಲಿ ಇದ್ರು ಕೂಡ ಸಮಾಜದಲ್ಲಿ ವರದಕ್ಷಿಣೆ ದಾಹ ಮಾತ್ರ ತೀರುತ್ತಿಲ್ಲ.

21 ನೇ ಶತಮಾನದಲ್ಲಿ ಇದ್ರು ಕೂಡ ಸಮಾಜದಲ್ಲಿ ವರದಕ್ಷಿಣೆ ದಾಹ ಮಾತ್ರ ತೀರುತ್ತಿಲ್ಲ. ಗಂಡ ಮಕ್ಕಳ ವ್ಯಾವೋಹಕ್ಕೆ ಹೆಣ್ಣುಗಳೇ ಸಿಗದಂತಾಗಿದಂತಹ ಪರಿಸ್ಥಿತಿ ಇದ್ರು ಕೂಡ, ಹೆಣ್ಣು ಮಕ್ಕಳಿಗೆ ವರದಕ್ಷಿಣೆ ಕಿರುಕುಳ ಕೊಡೊದು ಮಾತ್ರ ತಪ್ಪುತ್ತಿಲ್ಲ.
ಇದೀಗ ಮದುವೆ ಆಗಿ ಮಗು ಆಗಿದ್ರು ಕೂಡ ಪಾಪಿ ಗಂಡನಿಗೆ ವರದಕ್ಷಿಣೆ ದಾಹ ಮಾತ್ರ ಕಡಿಮೆ ಆಗಿಲ್ಲ. ಹೆಂಡ್ತಿಗೆ ವರದಕ್ಷಿಣೆ ಕಿರುಕುಳ ಕೊಟ್ಟಿದ್ದು ಮಾತ್ರವಲ್ಲದೇ, ಹೆಂಡ್ತಿ ಮನೆಗೆ ಮುಗ್ಗಿ ಹಲ್ಲೆ ಮಾಡಿರೋ ಘಟನೆ Haveri ಜಿಲ್ಲೆಯ ಹಾನಗಲ್ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.
ಇದನ್ನು ಓದಿ : Kalaburagi ಯಲ್ಲಿ ಹೃದಯವಿದ್ರಾವಕ ಘಟನೆ- ಸಾವಿನಲ್ಲೂ ಒಂದಾದ ಸಹೋದರರು!
ಹಲ್ಲೆ ನಡೆಸಿ ಜೀವ ಬೆದರಿಕೆ
ಮದುವೆಯಾಗಿ ಒಂದು ಮಗು ಆದ ನಂತರವೂ ಕೂಡ ವರದಕ್ಷಣೆ ತಂದು ಕೊಡು ಅಂತಾ ಪದೇ ಪದೇ ಕಿರುಕುಳ ನೀಡುವುದಲ್ಲದೆ, ತವರು ಮನೆಯಲ್ಲಿದ್ದ ಹೆಂಡತಿ ಹಾಗೂ ಆಕೆಯ ಮನೆಯವರ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ನಂತೆ. ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಮಂತಗಿ ಗ್ರಾಮದ ನಿವಾಸಿ ಅಬೂಬಕ್ಕರ್ ಅದೇ ಗ್ರಾಮದ ಶಹನಾಜಬಾನು ಎಂಬಾತಳನ್ನು ಮೂರು ವರ್ಷದ ಹಿಂದೆ ಮದುವೆ ಆಗಿದ್ದ. ಮದುವೆ ಆಗಿ ಕೇವಲ ಒಂದೆರಡು ತಿಂಗಳು ಮಾತ್ರ ಇವರು ಚೆನ್ನಾಗಿಯೇ ಇದ್ದು, ಬಳಿ ಶಹನಾಜ ಬಾನುಗೆ ಗಂಡ ಅಬೂಬಕ್ಕರ್ ಮನೆಯವರು ದಿನ ವರದಕ್ಷಿಣೆ ತಗೊಂಡು ಬಾ ಅಂತಾ ಪೀಡಿಸ್ತಾ ಇದ್ರಂತೆ.
ಅವಾಚ್ಯವಾಗಿ ನಿಂದಿಸಿ ಹಲ್ಲೆ
ಇಬ್ಬರ ದಂಪತ್ಯಕ್ಕೆ ಸಾಕ್ಷಿಯಾಗಿ ಒಂದೂವರೆ ವರ್ಷದ ಮಗು ಆದರೂ ಕೂಡ ಗಂಡನ ಮನೆಯಲ್ಲಿ ವರದಕ್ಷಣೆ ದಾಹ ತಗ್ಗಿಲ್ಲ. ಒಂದು ವಾರದ ಹಿಂದೆ ಅನಾರೋಗ್ಯದ ಕಾರಣ ಶಹನಾಜಬಾನು ತವರು ಮನೆಗೆ ಹೋದಾಗ, ಗಂಡ ಅಬೂಬಕ್ಕರ್ ಹಾಗೂ ಆತನ ಮನೆಯವರು ಶಹನಾಜಬಾನು ಹಾಗೂ ಆತನ ಮನೆಯವರಿಗೆ ಅವಾಚ್ಯವಾಗಿ ನಿಂದಿಸಿ, ಹಲ್ಲೆ ಮಾಡಿದ್ದಾನೆ. ಇನ್ನು ಹಲ್ಲೆಯಿಂದ ಶಹನಾಜ ಬಾನುವಿನ ಕೈ ಮುರಿದಿದೆ ಎಂದು ಶಹನಾಜಬಾನು ಸಹೋದರರು ಆರೋಪ ಮಾಡಿದ್ದಾರೆ.
ಪ್ರಕರಣ ದಾಖಲು
ಇನ್ನು ಹಲ್ಲೆಯಿಂದ ಗಾಯಗೊಂಡ ಶಹನಾಜ ಬಾನು ಕೈ ಮುರಿದಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಈ ಸಂಬಂಧ ಹಾನಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
ಇದನ್ನು ನೋಡಿ : ದಕ್ಷ IAS ಅಧಿಕಾರಿ MAHANTHESH BILAGI ಕುಟುಂಬಕ್ಕೆ ಅನುಕಂಪದ ಕೆಲಸ




