ಕಂಠಪೂರ್ತಿ ಕುಡಿದು ಕಾರು ಚಲಾಯಿಸಿ ವಾಹನಗಳಿಗೆ ಸರಣಿ ಅಪಘಾತ: ನಟ Mayur Patel ವಿರುದ್ಧ ಎಫ್ ಐಆರ್ ದಾಖಲು.

ಮದ್ಯದ ಅಮಲಿನಲ್ಲಿ ಸರಣಿ ಅಪಘಾತ ಎಸಗಿದ ಆರೋಪದ ಮೇಲೆ Sandalwood ನಟ ಮಯೂರ್ ಪಟೇಲ್ ವಿರುದ್ಧ ಈಗ ಅಧಿಕೃತವಾಗಿ ಎಫ್ಐಆರ್ ದಾಖಲಾಗಿದೆ.
ಕಳೆದ ರಾತ್ರಿ ಬೆಂಗಳೂರಿನ ಹಲಸೂರಿನಲ್ಲಿ ನಡೆದ ಈ ಭೀಕರ ಅಪಘಾತ ಪ್ರಕರಣ ಈಗ ಕಾನೂನು ಸಂಕಷ್ಟಕ್ಕೆ ತಿರುಗಿದ್ದು, ನಟನ ವಿರುದ್ಧ ಕಠಿಣ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಸರಣಿ ಅಪಘಾತ
ಓಲ್ಡ್ ಏರ್ಪೋರ್ಟ್ ರಸ್ತೆಯ ಕಮಾಂಡೊ ಆಸ್ಪತ್ರೆ ಸಿಗ್ನಲ್ ಬಳಿ ಕಳೆದ ರಾತ್ರಿ ಸುಮಾರು 10 ಗಂಟೆ ವೇಳೆಗೆ ಘಟನೆ ನಡೆದಿದೆ. ಸಿಗ್ನಲ್ನಲ್ಲಿ ನಿಂತಿದ್ದ ಕಾರುಗಳಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ಒಂದಕ್ಕೊಂದು ಕಾರುಗಳು ಡಿಕ್ಕಿಯಾಗಿ ಸರಣಿ ಅಪಘಾತ ಸಂಭವಿಸಿದೆ.

ನಾಲ್ಕು ಕಾರುಗಳು ಜಖಂ
ಪಾರ್ಚೂನರ್ ಕಾರಿನಲ್ಲಿ ಮಯೂರ್ ಪಟೇಲ್ ಬರುತ್ತಿದ್ದರು. ತಾನೇ ಕಾರು ಚಲಾಯಿಸುತ್ತಿದ್ದರು. ವೇಗ ಮತ್ತು ಅಜಾಗರೂಕ ಚಾಲನೆಯಿಂದ ಅಪಘಾತವಾಗಿದೆ. ಘಟನೆಯಲ್ಲಿ ನಾಲ್ಕು ಕಾರುಗಳು ಜಖಂಗೊಂಡಿವೆ. ಎರಡು ಸ್ವಿಫ್ಟ್ ಡಿಜೈರ್ ಕಾರುಗಳು ಹಾಗೂ ಒಂದು ಸರ್ಕಾರಿ ಕಾರು ಸೇರಿದಂತೆ ಹಲವು ವಾಹನಗಳಿಗೆ ಹಾನಿಯಾಗಿದೆ.

ಪೊಲೀಸರು ಭೇಟಿ, ಪರಿಶೀಲನೆ
ಇನ್ನು ಘಟನಾ ಸ್ಥಳಕ್ಕೆ ಹಲಸೂರು ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ . ಮಯೂರ್ ಪಟೇಲ್ ಕರೆತಂದು ಡ್ರಂಕ್ & ಡ್ರೈವ್ ಪರೀಕ್ಷೆ ನಡೆಸಲಾಯಿತು. ಡಿಡಿ ತಪಾಸಣೆ ವೇಳೆ Positive ಬಂದಿದೆ.
Mayur Patel ವಿರುದ್ಧ ಎಫ್ ಐಆರ್
ಈ ಅಪಘಾತದಲ್ಲಿ ಶ್ರೀನಿವಾಸ್ ಎಂಬುವರ ಕಾರು ತುಂಬ ಜಖಂಗೊಂಡಿದೆ. ಅವರೇ ಮಯೂರ್ ಪಟೇಲ್ ವಿರುದ್ಧ ದೂರು ನೀಡಿದ್ದಾರೆ.
ನನ್ನ ಪತ್ನಿಯ ಒಡವೆ ಅಡವಿಟ್ಟು ಕಾರು ಖರೀದಿ ಮಾಡಿದ್ದೆ. ಇನ್ನೂ ಮೊದಲ EMI ಕಟ್ಟಿಲ್ಲ. ಅಷ್ಟರಲ್ಲಿ ಹೀಗಾಯಿತು ಎಂದು ನೊಂದುಕೊಂಡಿದ್ದಾರೆ.

ಇನ್ನು ಮಯೂರ್ ಪಟೇಲ್ ಅಪಘಾತದ ವಿಡಿಯೊ Viral ಆಗುತ್ತಿದ್ದು, ಅದರಲ್ಲಿ ಅವರು ʼಏನೇ ಇದ್ದರೂ. ನಾನು ಸೆಟ್ಲ್ ಮಾಡಿಕೊಡುತ್ತೇನೆ. ಬೆಳಗ್ಗೆ ಎಲ್ಲವೂ ಸರಿ ಮಾಡುತ್ತೇನೆʼ ಎಂದು ಹೇಳಿದ್ದಾರೆ.
ಆದರೆ ಅಲ್ಲಿದ್ದವರು ಅದನ್ನ ಒಪ್ಪದೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಸದ್ಯ ಮಯೂರ್ ಪಟೇಲ್ ವಿರುದ್ಧ FIR ದಾಖಲಾಗಿದೆ.





