Suicide : ಗಂಡನ ಧನದಾಹಕ್ಕೆ ಬೇಸತ್ತು ಪ್ರಾಣ ಕಳೆದುಕೊಂಡ ಮಹಿಳೆ.

ಹಾವೇರಿ ಜಿಲ್ಲೆ, ಹಿರೇಕೆರೂರು ತಾಲ್ಲೂಕಿನ ಹಾದ್ರಿಹಳ್ಳಿ ಗ್ರಾಮದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ನೇಣು ಬಿಗಿದುಕೊಂಡು Suicide ಮಾಡಿಕೊಂಡ ದುರ್ಘಟನೆ ಶುಕ್ರವಾರ ನಡೆದಿದೆ.
ಕುಟುಂಬದ ವಿರೋಧದ ನಡುವೆಯೂ ಪ್ರೀತಿಸಿ ಮದುವೆ
ಮೃತ ಮಹಿಳೆಯನ್ನು ಶಿಲ್ಪಾ (ಅನುಷಾ) ಪ್ರದೀಪ ಸ್ವಾಮಿ ಹಿರೇಮಠ (27) ಎಂದು ಗುರುತಿಸಲಾಗಿದೆ. ಶಿಲ್ಪಾ ಹಿರೇಕೆರೂರು ಪಟ್ಟಣದ ಶಿವಯೋಗೆಪ್ಪ ಕಾಯಕದ ಅವರ ಪುತ್ರಿಯಾಗಿದ್ದು, 2021ರಲ್ಲಿ ಹಾದ್ರಿಹಳ್ಳಿ ಗ್ರಾಮದ ಪ್ರದೀಪ ಸ್ವಾಮಿ ಹಿರೇಮಠ ಅವರನ್ನು ಕುಟುಂಬದ ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ್ದಳು.
ಪದೇ ಪದೇ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ
ಆರಂಭದಲ್ಲಿ ಮುನಿಸಿಕೊಂಡಿದ್ದ ತವರು ಮನೆಯವರು ನಂತರ ಮಗಳೊಂದಿಗೆ ಚೆನ್ನಾಗಿದ್ದರು. ಕೆಲದಿನ ಕಳೆದ ನಂತರ ಪತಿ ಪ್ರದೀಪಸ್ವಾಮಿ ಪದೇ ಪದೇ ವರದಕ್ಷಿಣೆ ತರುವಂತೆ ಪತ್ನಿಗೆ ಕಿರುಕುಳ ನೀಡುತ್ತಿದ್ದ. ಕೊನೆಗೆ ಶಿಲ್ಪಾಳ ತವರು ಮನೆಯವರು 7 ತೊಲೆ ಬಂಗಾರ ಮತ್ತು ಹಣ ನೀಡಿದ್ದರು.

READ THIS : ಹರಿಹರ ಪಂಚಮಸಾಲಿ ಪೀಠದಿಂದ ವಚನಾನಂದ ಸ್ವಾಮೀಜಿ ಉಚ್ಚಾಟನೆ!
ಇಡೀ ಸಂಬಳವೂ ಗಂಡನಿಗೆ ಕೊಡ್ತಿದ್ದ ಶಿಲ್ಪಾ
ಆದರೂ ಕಿರುಕುಳ ನಿಲ್ಲದೆ, ಮದ್ಯಪಾನಕ್ಕೆ ಒಳಗಾಗಿದ್ದ ಪ್ರದೀಪಸ್ವಾಮಿ ಮತ್ತಷ್ಟು ಹಣ ತರಲು ಪತ್ನಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದನೆಂದು ಕುಟುಂಬದವರು ಆರೋಪಿಸಿದ್ದಾರೆ. ಪತಿಯ ಒತ್ತಡದ ಹಿನ್ನೆಲೆಯಲ್ಲಿ ಶಿಲ್ಪಾ ಖಾಸಗಿ ಬ್ಯಾಂಕ್ನಲ್ಲಿ ಉದ್ಯೋಗ ಪಡೆದು ತನ್ನ ಸಂಬಳವನ್ನೂ ಪತಿಗೆ ನೀಡುತ್ತಿದ್ದಳು.
ನೇಣು ಬಿಗಿದುಕೊಂಡು Suicide
ಇದರಿಂದಲೂ ತೃಪ್ತಿಯಾಗದ ಪತಿ ಇನ್ನಷ್ಟು ಹಣಕ್ಕಾಗಿ ನಿರಂತರವಾಗಿ ಹಿಂಸೆ ನೀಡುತ್ತಿದ್ದ ಹಿನ್ನೆಲೆ, ಬೇಸತ್ತ ಶಿಲ್ಪಾ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
ಸಾವಿನ ಬಗ್ಗೆ ಸಂಶಯ
ಮಗಳ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ತಂದೆ ಶಿವಯೋಗೆಪ್ಪ ಕಾಯಕದ ಅವರು ಮಗಳ ಪತಿ ಪ್ರದೀಪ ಸ್ವಾಮಿ ಹಾಗೂ ಅತ್ತೆ ಲತಾ ಹಿರೇಮಠ ವಿರುದ್ಧ ಹಿರೇಕೆರೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

MUST WATCH : PARAM ಹೋಗೋ ಕಡೆಗಳೆಲ್ಲಾ ಪ್ರತಿಭಟನೆಯ ಬಿಸಿ – ಸಚಿವರಿಗೆ KRS ಪಕ್ಷದಿಂದ ಎಚ್ಚರಿಕೆ




