ಸಾಲ ಭಾದೆ ತಾಳಲಾರದೇ ರೈತರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ Haveri ಯಲ್ಲಿ ನಡೆದಿದೆ.

ಸಾಲ ಭಾದೆ ತಾಳಲಾರದೇ ರೈತರೊಬ್ಬರು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ Haveri ಜಿಲ್ಲೆಯ ಹಾನಗಲ್ ತಾಲೂಕಿನ ಹೇರೂರು ಗ್ರಾಮದಲ್ಲಿ ನಡೆದಿದೆ. ಮೃತರನ್ನು ಹೇರೂರು ಗ್ರಾಮದ ನಿವಾಸಿ ಮಲ್ಲಪ್ಪ ಮಹದೇವಪ್ಪ ಮಾದರ್ ಎಂದು ಗುರುತಿಸಲಾಗಿದೆ.

READ THIS : ಇನ್ನೂ 5 ದಿನ ಬಿಟ್ಟೂ ಬಿಡದೇ ಸುರಿಯಲಿದೆ ಮಳೆ-ನಿಮ್ಮೂರಿಗೂ ಬರುತ್ತಾ ವರ್ಷಧಾರೆ?
ಸಾಲದ ಒತ್ತಡಕ್ಕೆ ಮನನೊಂದು ಆತ್ಮಹತ್ಯೆ – Haveri
ಇನ್ನು ರೈತರ ಮಲ್ಲಪ್ಪ ಅವರು ಕೃಷಿ ಚಟುವಟಿಕೆ ಸಲುವಾಗಿ ಸುಮಾರು ಐದು ವರ್ಷಗಳ ಹಿಂದೆ ಹಾನಗಲ್ ಪಟ್ಟಣದ ಚೈತನ್ಯ ಇಂಡಿಯಾ ಫೈನಾನ್ಸ್ ಕಂಪನಿಯಲ್ಲಿ ಐವತ್ತು ಸಾವಿರ ರೂಪಾಯಿ ಬೆಳೆ ಸಾಲ ಹಾಗೂ ಹಾವೇರಿಯ ಬಿ.ಎಸ್.ಎಸ್. ಫೈನಾನ್ಸ್ ಕಂಪನಿಯಲ್ಲಿ 1 ಲಕ್ಷ ರೂಪಾಯಿ ಸಾಲ ಪಡೆದಿದ್ದರಂತೆ, ಇತ್ತ ಕಳೆದ ಎರಡು ವರ್ಷಗಳಿಂದ ಬೆಳೆದ ಬೆಳೆಗಳು ಸರಿಯಾಗಿ ಫಲ ನೀಡದೇ ಕೃಷಿಯಲ್ಲಿ ನಷ್ಟ ಅನುಭವಿಸಿದ್ರಿಂದ, ಸಾಲದ ಒತ್ತಡ ಮತ್ತು ಕೃಷಿ ನಷ್ಟದಿಂದ ಮನನೊಂದು ಹೇರೂರು ಗ್ರಾಮದ ದೊಡ್ಡ ಕೆರೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪ್ರಕರಣ ದಾಖಲು
ಸದ್ಯ ಈ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
MUST WATCH : GAS CYLINDER ಸಮಸ್ಯೆ ಇಲ್ವೇ ಇಲ್ಲ – ಕೃತಕ ಅಭಾವ ಸೃಷ್ಟಿಸಿದ್ರೆ ಕಾನೂನು ಕ್ರಮ




