ಪಾಸ್ಟಿಕ್ ಗನ್ ತೋರಿಸಿ ಜ್ಯುವೆಲ್ಲರಿ ಅಂಗಡಿಯನ್ನು ದರೋಡೆ ಮಾಡಲು ಯತ್ನಿಸಿರುವ ಘಟನೆ Nelamangala ದಲ್ಲಿ ನಡೆದಿದೆ.

ಪಾಸ್ಟಿಕ್ ಗನ್ ತೋರಿಸಿ ಜ್ಯುವೆಲ್ಲರಿ ಅಂಗಡಿಯನ್ನುದರೋಡೆ ಮಾಡಲು ಯತ್ನಿಸಿರುವ ಘಟನೆ Nelamangala ತಾಲೂಕಿನ ದಾಸನಪುರದಲ್ಲಿ ನಡೆದಿದೆ. ಅಂಗಡಿ ಮಾಲೀಕ ತೀವ್ರ ಪ್ರತಿರೋಧ ಒಡ್ಡಿದ ಕಾರಣ, ದರೋಡೆಕೋರರು ಕೈಗೆ ಸಿಕ್ಕ ಚಿನ್ನಾಭರಣ ಹಾಗೂ ನಗದಿನೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾರೆ.

ಇದನ್ನು ಓದಿ : 25 ವರ್ಷ ಹಳೆ ದಾಖಲೆ ಮುರಿದ Dhurandhar – ಏನದು ದಾಖಲೆ?
ಪ್ಲಾಸ್ಟಿಕ್ ಗನ್ ತೋರಿಸಿ ದರೋಡೆ – Nelamangala
ದಾಸನಪುರದ ‘ರಾಮ್ ದೇವ್ ಜ್ಯುವೆಲ್ಲರಿ’ ಅಂಗಡಿಯಲ್ಲಿ ಈ ಕೃತ್ಯ ನಡೆದಿದೆ. ಬೈಕ್ನಲ್ಲಿ ಬಂದ ಇಬ್ಬರು ಅಪರಿಚಿತ ವ್ಯಕ್ತಿಗಳು ಏಕಾಏಕಿ ಒಡವೆ ಅಂಗಡಿಯೊಳಗೆ ನುಗ್ಗಿದ್ದಾರೆ. ತಾವು ತಂದಿದ್ದ ಪ್ಲಾಸ್ಟಿಕ್ ಗನ್ ತೋರಿಸಿ ಮಾಲೀಕರನ್ನು ಹೆದರಿಸಿ ದರೋಡೆಗೆ ಯತ್ನಿಸಿದ್ದಾರೆ. ದರೋಡೆಕೋರರು ಗನ್ ತೋರಿಸುತ್ತಿದ್ದಂತೆಯೇ ಎದೆಗುಂದದ ಅಂಗಡಿ ಮಾಲೀಕರು, ತಕ್ಷಣವೇ ಚೋರರ ವಿರುದ್ಧ ತಿರುಗಿ ಬಿದ್ದು ಪ್ರತಿರೋಧ ತೋರಿದ್ದಾರೆ.

ಸಿಕ್ಕಿದ್ದನ್ನು ಬಾಚಿಕೊಂಡು ಎಸ್ಕೇಪ್
ಮಾಲೀಕನ ಧೈರ್ಯ ಕಂಡು ಗಾಬರಿಗೊಂಡ ದರೋಡೆಕೋರರು ಹೆಚ್ಚು ಹೊತ್ತು ಅಲ್ಲಿ ನಿಲ್ಲಲಾಗದೆ, ಸಿಕ್ಕಿದ್ದನ್ನು ಬಾಚಿಕೊಂಡು ಪರಾರಿಯಾಗಿದ್ದಾರೆ. ಈ ವೇಳೆ ಅಂಗಡಿಯಲ್ಲಿದ್ದ ಸುಮಾರು 27 ಗ್ರಾಂ ತೂಕದ ಚಿನ್ನದ ಸರ ಹಾಗೂ 50 ಸಾವಿರ ರೂಪಾಯಿ ನಗದನ್ನು ಕಸಿದುಕೊಂಡು ಕಿದೀಮರು ಬೈಕ್ನಲ್ಲಿ ನಾಪತ್ತೆಯಾಗಿದ್ದಾರೆ.
ಇದನ್ನು ನೋಡಿ : ಬೆಂಗಳೂರು ಐಟಿ ಕಂಪನಿಗೆ 87 ಕೋಟಿ ರೂ. ವಂಚನೆ!




