
TUMKUR:
ಸ್ಮಾರ್ಟ್ ಸಿಟಿ ಅಂತ ಕರೆಸಿಕೊಳ್ಳುವ ತುಮಕೂರು ಇದೀಗ ಗಾರ್ಬೇಜ್ ಸಿಟಿಯಾಗಿ ಮಾರ್ಪಾಡುತ್ತಿದೆ. ನಗರದಾದ್ಯಂತ ಎಲ್ಲೆಂದರಲ್ಲಿ ಕಸದ ರಾಶಿ ರಾಶಿ ಬೀಳುತ್ತಿದೆ. ಕಸದ ಸಮಸ್ಯೆ, ವಿಂಗಡಣೆಯ ಬಗ್ಗೆ ಅಧಿಕಾರಿಗಳು ಜನರಿಗೆ ಎಷ್ಟೇ ತಿಳುವಳಿಕೆ ನೀಡ್ತಾ ಇದ್ರು ಜನ ತಲೆ ಕೆಡಿಸಿಕೊಳ್ಳುತ್ತಿಲ್ಲ. ಇತ್ತ ಅಧಿಕಾರಿಗಳು ಸಹ ಸಮಸ್ಯೆಗಳ ಬಗ್ಗೆ ಆಲಸ್ಯ ತೋರುತ್ತಿದ್ದಾರೆ. ತುಮಕೂರಿನ ಕಸದ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ. ನಗರದ 26ನೇ ವಾರ್ಡ್ ಅಶೋಕನಗರದಲ್ಲಿ ರಾಶಿ ರಾಶಿಯಾಗಿ ಕಸ ಬಿದ್ದಿದ್ದು, ಅಧಿಕಾರಿಗಳಿಗೆ ಎಷ್ಟೇ ಬಾರಿ ಮನವಿ ಮಾಡಿದ್ರು ಕ್ಯಾರೆ ಎನ್ನುತ್ತಿಲ್ಲ ಎಂದು ಸಾರ್ವಜನಿಕರ ಪಾಲಿಕೆ ವಿರುದ್ಧ ಇಡೀ ಶಾಪವಾಗುತ್ತಿದ್ದಾರೆ. ದಿನದಿಂದ ದಿನಕ್ಕೆ ಈ ಪ್ರದೇಶವು ನಾಯಿ–ಹಂದಿಗಳ ವಾಸಸ್ಥಾನವಾಗಿ ಮಾರ್ಪಟ್ಟಿದ್ದು, ಸ್ಥಳೀಯರು ಭೀತಿಯಲ್ಲಿ ಓಡಾಡುವಂತಾಗಿದೆ. ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಶೋಕನಗರದ ರಸ್ತೆಗಳು “ಸ್ಮಾರ್ಟ್ ಸಿಟಿ” ಬದಲಿಗೆ “ಕಸದ ಸಿಟಿ” ಆಗುತ್ತಿದೆ ಎಂದು ಜನತೆ ಅಸಮಾಧಾನ ಹೊರಹಾಕುತ್ತಿದ್ದಾರೆ.
ಅಶೋಕನಗರದ ನಿವಾಸಿಗಳು ಹಲವು ಬಾರಿ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಸಮಸ್ಯೆಯನ್ನು ತಂದ್ರು ಕೂಡ, ಪ್ರತಿಕ್ರಿಯೆ ಸಿಗದೆ ಭರವಸೆ ಮಾತ್ರ ದೊರೆಯುತ್ತಿದೆ. ಕಸದ ರಾಶಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಮಕ್ಕಳಿಂದ ಹಿಡಿದು ವೃದ್ಧರ ತನಕ ಆರೋಗ್ಯದ ಭೀತಿ ಎದುರಾಗಿದೆ. ಸ್ಥಳೀಯರು ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸಾರ್ವಜನಿಕರ ಮಾತು ಕೇಳದ ಅಧಿಕಾರಿಗಳ ಧೋರಣೆಯಿಂದ ಬೇಸರಗೊಂಡಿದ್ದಾರೆ. ಮತ್ತೊಂದೆಡೆ ಸಾರ್ವಜನಿಕರು ಕೂಡ ಅರ್ಥ ಮಾಡಿಕೊಂಡು ಪಾಲಿಕೆಯಿಂದ ಗಾಡಿ ಬಂದ ಸಂದರ್ಭದಲ್ಲಿ ಕಸವನ್ನು ಕೊಡಬೇಕು ಎಂದು ಕೂಡ ಮನವಿ ಮಾಡಿದ್ದಾರೆ .
ನಗರದ ಪ್ರಮುಖ ಪ್ರದೇಶದಲ್ಲಿಯೇ ಇಂತಹ ನಿರ್ಲಕ್ಷ್ಯ ಕಂಡುಬರುತ್ತಿದೆ. ಈ ಸ್ಮಾರ್ಟ್ ಸಿಟಿ ಯೋಜನೆಯ ಹೆಸರಿನಲ್ಲಿ ನಡೆಯುತ್ತಿರುವ ಕೆಲಸಗಳ ಗುಣಮಟ್ಟಕ್ಕೂ ಪ್ರಶ್ನೆ ಹುಟ್ಟಿಸಿದೆ. ಇನ್ನಾದರೂ ಪಾಲಿಕೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಮುಂದಾಗುತ್ತಾ .. ಕಸದ ಸಮಸ್ಯೆಗೆ ಮುಕ್ತಿ ನೀಡುತ್ತಾ ಕಾದುನೋಡಬೇಕಿದೆ




