
YUVRAJ SINGH : ಅಕ್ರಮ ಬೆಟ್ಟಿಂಗ್ ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೆಪ್ಟೆಂಬರ್ ಇಂದು ಎನ್ಫೋರ್ಸ್ಮೆಂಟ್ ಡೈರೆಕ್ಟರೇಟ್ (ಇಡಿ) ವಿಚಾರಣೆಗೆ ಹಾಜರಾಗಿದ್ದಾರೆ. ಇದು 1xBet ಆ್ಯಪ್ ಪ್ರಕರಣಕ್ಕೆ ಸಂಬಂಧಿಸಿದ್ದಾಗಿ ದ್ದು, ಸೆಪ್ಟೆಂಬರ್ 16ರಂದು ಇಡಿ ಅವರ ಬಳಿ ಸಮನ್ಸ್ ಜಾರಿ ಮಾಡಿದ್ದರಿಂದ ಯುವರಾಜ್ ಸಿಂಗ್ ಇಂದು ಒಂದು ಗಂಟೆ ತಡವಾಗಿ ವಿಚಾರಣೆಗೆ ಬಂದಿದ್ದಾರೆ.
ಈ ವೇಳೆ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿಯಲ್ಲಿ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿ ಉದ್ಯಮಿ ಅನ್ವೇಶ್ ಜೈನ್ ಕೂಡ ಇಡಿ ಮುಂದೆ ಹಾಜರಾಗಿದ್ದರು.
ಹಿಂದಿನ ದಿನಗಳಲ್ಲಿ, ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ (ಸೆಪ್ಟೆಂಬರ್ 22), ಹಾಗೂ ಸುರೇಶ್ ರೈನಾ, ಶಿಖರ್ ಧವನ್, ನಟಿ ಅಂಜಲಿ ಅರೋರಾ, ನಟಿ ಮಿಮಿ ಚಕ್ರವರ್ತಿ, ನಟ ಅಂಕುಶ್ ಹಜಾರ, ಪ್ರಕಾಶ್ ರಾಜ್, ವಿಜಯ ದೇವರಕೊಂಡ, ರಾಣಾ ದಗ್ಗುಬಾಟಿ, ಹರ್ಭಜನ್ ಸಿಂಗ್, ಊರ್ವಶಿ ರೌಟೇಲಾ ಸಹ ವಿಚಾರಣೆಗೆ ಹಾಜರಿದ್ದರು.
ಈ ಪ್ರಕರಣವು 1xBet ಅಕ್ರಮ ಬೆಟ್ಟಿಂಗ್ ಆ್ಯಪ್ ಗೆ ಸಂಬಂಧಿಸಿದಂತೆ ಗಂಭೀರ ತನಿಖೆಯಡಿಯಲ್ಲಿ ಮುಂದುವರಿಯುತ್ತಿದೆ.




