
TUMAKURU NEWS : ಕಲ್ಪತರು ನಾಡು ಶೈಕ್ಷಣಿಕ ನಗರಿ ಸ್ಮಾರ್ಟ್ ಸಿಟಿ ಅಂತಾ ಹೆಗ್ಗಳಿಕೆ ಪಡೆದಿರೋ ನಮ್ಮ ತುಮಕೂರು ನಗರ ಇತ್ತೀಚಿನ ದಿನಗಳಲ್ಲಿ ಗಾರ್ಬೇಜ್ ಸಿಟಿ ಎಂಬ ಹಣೆಪಟ್ಟಿಯನ್ನು ಕೂಡ ಕಟ್ಟಿಕೊಂಡಿತ್ತು. ತುಮಕೂರು ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಕಸದ ಸಮಸ್ಯೆ ನಗರದಲ್ಲಿ ಹೆಚ್ಚಾಗಿದ್ದು, ಕಸದ ಸಮಸ್ಯೆ ಪಾಲಿಕೆಗೆ ದೊ ಡ್ಡ ತಲೆನೋವಾಗಿ ಪರಿಣಮಿಸಿತ್ತು. ಹೇಗಾದ್ರು ಕಸದ ಸಮಸ್ಯೆ ಮುಕ್ತಿಗೆ ಮುಕ್ತಿ ನೀಡಲೇ ಬೇಕು ಎಂದು ಪಾಲಿಕೆ ಕಸ ಹಾಕುವ ಸೂಕ್ಷ್ಮ ಜಾಗಗಳನ್ನು ಗುರುತಿಸಿ ಪಾಲಿಕೆ ಕಸ ಹಾಕುವವರಿಗೆ ದಂಡ ಹಾಕುವ ಅಸ್ತ್ರ ಪ್ರಯೋಗ ಮಾಡಿತ್ತು.
ತುಮಕೂರು ನಗರದಲ್ಲಿ ದಿನದಿಂದ ದಿನಕ್ಕೆ ಕಸದ ಸಮಸ್ಯೆ ಹೆಚ್ಚಾಗ್ತಾ ಇದ್ದು, ಮನೆ ಬಳಿ ಕಸದ ಗಾಡಿ ಬಂದ್ರು ಕೂಡ ಜನರು ಕಸವನ್ನು ಕಸದ ಗಾಡಿಗೆ ಹಾಕುದೇ, ಖಾಲಿ ಸೈಟ್, ರಸ್ತೆಯ ಅಕ್ಕಪಕ್ಕದಲ್ಲಿ ರಾತ್ರಿ ವೇಳೆ ಕಸವನ್ನು ತಂದು ಜನರು ಸುರಿದು ಹೋಗ್ತಾ ಇದ್ರು. ಇದ್ರಿಂದ ಕಸದ ಸಮಸ್ಯೆ ಹೆಚ್ಚಾಗ್ತಾನೆ ಇದ್ದು, ಪಾಲಿಕೆ ಕಸದ ಹಾಕುವವರಿಗೆ ಪಾಠ ಕಲಿಸಲೇ ಬೇಕು ಎಂದು ನಗರದ ಸುಮಾರು 30ಕ್ಕೂ ಹೆಚ್ಚು ಸೂಕ್ಷ್ಮ ಪ್ರದೇಶಗಳನ್ನು ಗುರುತಿಸಿ, ಸಿಸಿ ಕ್ಯಾಮೆರಾಗಳನ್ನು ಅಳವಡಿಸಿದ್ದು, ಈವರೆಗೂ ಸುಮಾರು ಕಸ ಹಾಕುವ ಜನರಿಂದ ಸುಮಾರು 10 ಲಕ್ಷ ದಂಡವನ್ನು ಕೂಡ ಕಲೆಕ್ಟ್ ಮಾಡಿದ್ದು, ಕಸದ ಸಮಸ್ಯೆ ಕೊಂಚ ಕಡಿಮೆ ಆಗಿದೆ, ಅಲ್ದೇ ಸ್ವಚ್ಛ ತುಮಕೂರಿಗೆ ಪಾಲಿಕೆ ಮಾತ್ರ ಕ್ರಮ ಕೈಗೊಂಡ್ರೆ ಸಾಲದು ಜೊತೆಗೆ ಜನರು ಕೂಡ ಕೈ ಜೋಡಿಸಬೇಕು ಎಂದು ಪಾಲಿಕೆ ಕಮಿಷನರ್ ಅಶ್ವಿಜಾ ಹೇಳಿದ್ರು.
ಇನ್ನು ಕೆಲ ಜನರು ಕ್ಯಾಮೆರಾ ಅಳವಡಿಸಿದ್ರು ಕೂಡ ಡೋಂಟ್ ಕೇರ್ ಅಂದು ಕಸವನ್ನು ಸುರಿದು ಹೋ ಗ್ತಾ ಇರೋದು ಕಂಡು ಬಂದಿದೆ. ನಗರವನ್ನು ಕಸದಿಂದ ಮುಕ್ತಿ ಕೊಡಿಸಬೇಕು ಎಂದು ಪಾಲಿಕೆ ಎಷ್ಟೇ ಕ್ರಮ ಕೈಗೊಂಡ್ರು ಕೂಡ ಜನರು ಡೋಂಟ್ ಕೇರ್ ಅಂತಿರೋದು ಕಂಡು ಬರ್ತಾನೆ ಇದ್ದು, ಕಸದ ಸಮಸ್ಯೆಯಿಂ ದಾಗಿ ಜನರಲ್ಲಿ ರೋಗದ ಭೀತಿ ಶುರುವಾಗಿದೆ.





