
ತುಮಕೂರು ನಗರದ ಹೊರವಲಯದ ಕುಣಿಗಲ್ ಸರ್ಕಲ್ ಬಳಿ ಮರಳೂರು ಕೆರೆಯನ್ನು ಒತ್ತುವರಿ ಮಾಡಿಕೊಂಡು ಬಫರ್ ಜೋನ್ನಲ್ಲಿ ಪಾರ್ಟಿ ಹಾಲ್ ಮಾಲೀಕರು ಕಟ್ಟಡ ನಿರ್ಮಾಣ ಮಾಡಿದ್ರು. ಪಾರ್ಟಿ ಹಾಲ್ ಉದ್ಘಾಟನೆ ಆಗುವ ಮುನ್ನಚೇ ಸುದ್ದಿ ಮಾಡುವ ಮೂಲಕ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವನ್ನು ಮಾಡಿತ್ತು. ಆಗಿದ್ರು ಕೂಡ ಉದ್ಘಟತನ ತೋರಿದ ಮಾಲೀಕರು ಪಾರ್ಟಿ ಹಾಲ್ನನ್ನು ಉದ್ಘಾಟನೆ ಮಾಡಿ, ವ್ಯವಹಾರ ಚಟುವಟಿಕೆ ಶುರುಮಾಡಿದ್ರು. ಈ ಬೆನ್ನಲ್ಲೇ ಮರಳೂರು ಕೆರೆಯನ್ನು ಪಾರ್ಟಿ ಹಾಲ್ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಾರ್ವಜನಿಕರು ಗಂಭೀರ ಆರೋಪ ಮಾಡಿದ್ದು ಸತತ ಎರಡು ಬಾರಿ ಪ್ರಜಾಶಕ್ತಿ ಟಿವಿ ಸುದ್ದಿ ಮಾಡಿತ್ತು.
ಇನ್ನು ಪ್ರಜಾಶಕ್ತಿ ಟಿವಿ ವರದಿ ಬೆನ್ನಲ್ಲೇ ಸಣ್ಣ ನೀರಾವರಿ ಇಲಾಖೆಯ ಸಹಾಯಕ ಇಂಜಿನಿಯರ್ ತಿಪ್ಪೇಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದ್ರು. ಪರಿಶೀಲನೆ ವೇಳೆ ಮರಳೂರು ಕೆರೆಯ ಜಾಗವನ್ನು ಉಡುಪಿ ಗ್ರ್ಯಾಂಡ್ ಎಂಬ ಹೊಟೇಲ್ ಒತ್ತುವರಿ ಮಾಡಿಕೊಂಡಿರೋದು ತಿಳಿದು ಬಂದಿದೆ. ಅಲ್ದೇ ಪಾರ್ಟಿ ಹಾಲ್ನಿಂದ ತ್ಯಾಜ್ಯ ನೀರನ್ನು ಕೆರೆಗೆ ಬಿಡ್ತಾ ಇರೋದು ಸಾಬೀತಾಗಿದ್ದು, ಕೂಡಲೇ ಕ್ರಮ ಕೈಗೊಳ್ಳುವಂತೆ ಪಾಲಿಕೆಗೆ ಪತ್ರ ಬರೆದಿದ್ರು. ಅಲ್ದೇ ಮರಳೂರು ಕೆರೆಯನ್ನು ಉಡುಪಿ ಗ್ರ್ಯಾಂಡ್ ಹೊಟೇಲ್ ಒತ್ತುವರಿ ಮಾಡಿಕೊಂಡಿರೋದಿ ಕಣ್ಣಾರೆ ಕಂಡ ಸಣ್ಣ ನೀರಾವರಿ ಇಲಾಖೆಯ ಇಂಜಿನಿಯರ್, ಒತ್ತುವರಿಯಾದ ಜಾಗವನ್ನು ತೆರವುಗೊಳಿಸುವಂತೆ ಕೆ.ಎನ್ ರಾಘವೇಂದ್ರ, ಹಾಗೂ ಸುಜಾತ ರಾಘವೇಂದ್ರ ಎಂಬುವವರಿಗೆ ನೋಟಿಸ್ ನೀಡಲಾಗಿದೆ.
ನೋಟಿಸ್ ನೀಡಿದ ಬಳಿಕವೂ ಕೆರೆ ಒತ್ತುವರಿ ಜಾಗವನ್ನು ತೆರವುಗೊಳಿಸದಿದ್ದರೆ ಮುಂದಿನ ದಿನಗಳಲ್ಲಿ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಲಾಗಿದೆ. ಈ ಮೂಲಕ ಪ್ರಜಾಶಕ್ತಿ ಟಿವಿ ವರದಿಗೆ ಮೊದಲ ಜನ ಸಿಕ್ಕಂತಾಗಿದೆ. ಉಡುಪಿ ಗ್ರ್ಯಾಂಡ್ ಹೊಟೇಲ್ ಮಾಲೀಕರು ನೋಟಿಸ್ ಸಿಕ್ಕ ಬಳಿಕ ಎಚ್ಚೆತ್ತು ಕೆರೆ ಒತ್ತುವರಿ ಜಾಗವನ್ನು ತೆರವು ಮಾಡುತ್ತಾರಾ ಎಂದು ಕಾದುನೋಡಬೇಕಿದೆ




