
CRICKETER DINESH KARTHIK : ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ 2025ರ ಹಾಂಗ್ ಕಾಂಗ್ ಸಿಕ್ಸರ್ ಟೂರ್ಮೆಂಟ್ನಲ್ಲಿ ಭಾರತ ತಂಡವನ್ನು ಮುನ್ನಡೆಸಲು ಸಜ್ಜಾಗಿದ್ದಾರೆ. 2024ರಲ್ಲಿ ಅಂತ ರಾಷ್ಟ್ರೀಯ ಹಾಗೂ ಎಲ್ಲಾ ಸ್ವರೂಪದ ಕ್ರಿಕೆಟ್ಗೆ ವಿದಾಯ ಹೇಳಿದ್ದ ಕಾರ್ತಿಕ್, ಇದೀಗ ಆರ್ಸಿಬಿಯ ಬ್ಯಾಟಿಂಗ್ ಕೋಚ್ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆದರೆ ಇದೀಗ ಅವರು ಮತ್ತೆ ಮೈದಾನಕ್ಕಿಳಿಯಲಿದ್ದು, ನವೆಂಬರ್ 7ರಿಂದ 9ರವರೆಗೆ ನಡೆಯಲಿರುವ ಟೂರ್ನಮೆಂಟ್ನಲ್ಲಿ ಭಾರತ ತಂಡದ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಹಾಂಗ್ ಕಾಂಗ್ ಕ್ರಿಕೆಟ್ ಸಂಸ್ಥೆಯು ತಮ್ಮ ಅಧಿಕೃತ X ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
“ದಿನೇಶ್ ಕಾರ್ತಿಕ್ ಅವರನ್ನು ಟೀಮ್ ಇಂಡಿಯಾ ನಾಯಕನಾಗಿ ಸ್ವಾಗತಿಸಲು ಹೆಮ್ಮೆಪಡುತ್ತೇವೆ. ಅವರ ಅಂತರರಾಷ್ಟ್ರೀಯ ಅನುಭವ, ತೀಕ್ಷ್ಣ ನಾಯಕತ್ವ ಹಾಗೂ ಸ್ಫೋಟಕ ಆಟ, ಪಂದ್ಯಾವಳಿಗೆ ವಿಶೇಷ ಚೈತನ್ಯ ತರುತ್ತದೆ,” ಎಂದು ಪ್ರಕಟಣೆಯಲ್ಲಿ ತಿಳಿಸಿದೆ.




