
ಮಾರುಕಟ್ಟೆಯಲ್ಲಿ ಅನೇಕ ಬ್ಯೂಟಿ ಕ್ರೀಮ್ಗಳು ಲಭ್ಯವಿದ್ದರೂ, ನೈಸರ್ಗಿಕ ಸೌಂದರ್ಯಕ್ಕಾಗಿ ಆಯುರ್ವೇದಿಕ ಟಿಪ್ಸ್ಗಳು ಉತ್ತಮ ಆಯ್ಕೆಯಾಗುತ್ತವೆ. ಆಯುರ್ವೇದವು ಕೇವಲ ಬಾಹ್ಯ ಸೌಂದರ್ಯವನ್ನೇ ಹೆಚ್ಚಿಸುವುದಲ್ಲ, ದೇಹ-ಮನಸ್ಸಿನ ಆರೋಗ್ಯಕ್ಕೂ ಸಹಕಾರಿಯಾಗಿದೆ.

ಹರ್ಬಲ್ ಫೇಸ್ಮಾಸ್ಕ್: ಅರಿಶಿನ, ಚಂದನ, ಬೇವು, ರೋಸ್ ವಾಟರ್ ಅಥವಾ ಜೇನುತುಪ್ಪ ಬಳಸಿ ತಯಾರಿಸಿದ ಫೇಸ್ಪ್ಯಾಕ್ ಚರ್ಮದ ಬಣ್ಣವನ್ನು ಹೆಚ್ಚಿಸಿ, ಮೊಡವೆ ಹಾಗೂ ಸೋಂಕುಗಳನ್ನು ತಡೆಯುತ್ತದೆ.

ಅಭ್ಯಂಗ: ಉಗುರುಬೆಚ್ಚಗಿನ ಎಣ್ಣೆಯಿಂದ ದೇಹಕ್ಕೆ ಮಸಾಜ್ ಮಾಡುವುದರಿಂದ ರಕ್ತಸಂಚಾರ ಸುಧಾರಿಸುತ್ತದೆ, ಮಾಂಸಖಂಡಗಳು ರಿಲ್ಯಾಕ್ಸ್ ಆಗುತ್ತವೆ, ಚರ್ಮ ತಾಜಾ ಕಾಣಿಸುತ್ತದೆ.

ಉಸಿರಾಟ ವ್ಯಾಯಾಮ: ಮಾನಸಿಕ ಒತ್ತಡವು ಚರ್ಮದ ಮೇಲೆ ನೇರ ಪರಿಣಾಮ ಬೀರುತ್ತದೆ. ಪ್ರತಿದಿನ 5-20 ನಿಮಿಷ ಉಸಿರಾಟದ ವ್ಯಾಯಾಮ ಮಾಡಿದರೆ ಒತ್ತಡ ಕಡಿಮೆಯಾಗುತ್ತದೆ, ಮನಸ್ಸು ಶಾಂತಗೊಳ್ಳುತ್ತದೆ.

ಜಲನೇತಿ ಕ್ರಿಯೆ: ಮೂಗಿನ ಹೊಳ್ಳೆಗಳನ್ನು ಶುಚಿಗೊಳಿಸುವ ಈ ಪ್ರಕ್ರಿಯೆ ಉಸಿರಾಟ ಸುಲಭಗೊಳಿಸುತ್ತದೆ ಮತ್ತು ಮುಖದಲ್ಲಿ ಪ್ರಕಾಶವನ್ನು ಹೆಚ್ಚಿಸುತ್ತದೆ.

ನಾಲಗೆ ಶುದ್ಧಿ: ನಿಯಮಿತವಾಗಿ ನಾಲಗೆಯನ್ನು ಶುಚಿಗೊಳಿಸುವುದರಿಂದ ಆಂತರಿಕ ಆರೋಗ್ಯ ಉತ್ತಮವಾಗುತ್ತದೆ, ಜೀರ್ಣಕ್ರಿಯೆ ಬಲಪಡುತ್ತದೆ

ಸಕ್ಕರೆ ಮತ್ತು ಉಪ್ಪಿನ ನಿಯಂತ್ರಣ: ಹೆಚ್ಚು ಸಕ್ಕರೆ ಮತ್ತು ಉಪ್ಪು ಸೇವನೆಯು ರಕ್ತದೊತ್ತಡ, ಹೃದಯ ಸಮಸ್ಯೆಗಳು ಮತ್ತು ಮೊಡವೆಗಳಿಗೆ ಕಾರಣವಾಗಬಹುದು. ಆದ್ದರಿಂದ ಮಿತವಾದ ಸೇವನೆ ಅಗತ್ಯ.
ಆಯುರ್ವೇದಿಕ ಟಿಪ್ಸ್ಗಳನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಂಡರೆ ಚರ್ಮದ ಕಾಂತಿಯೊಂದಿಗೆ ದೇಹ-ಮನಸ್ಸಿನ ಆರೋಗ್ಯವೂ ಸುಧಾರಿಸುತ್ತದೆ.




