
ಇಂದಿನ ವಿಶೇಷ ಅಡುಗೆ ವಿಭಾಗದಲ್ಲಿ ನಿಮ್ಮಿಗಾಗಿ ಒಂದು ಕ್ರಿಸ್ಪಿ, ಮಸಾಲೆಯುತ ಮತ್ತು ಎಲ್ಲರ ಬಾಯಲ್ಲಿ ನೀರೂರಿಸುವಂತಹ ತಿನಿಸು ಬೇಬಿ ಕಾರ್ನ್ ಫ್ರೈ. ಚಹಾ ಸಮಯಕ್ಕೆ ಅಥವಾ ಅತಿಥಿಗಳಿಗೆ ಸರ್ವ್ ಮಾಡಲು ಇದು ಸಕ್ಕತ್ ಸೂಕ್ತವಾದ ತಿಂಡಿ.
👉 ಬೇಕಾಗುವ ಪದಾರ್ಥಗಳು:
- ಬೇಬಿ ಕಾರ್ನ್ – 1 ಬಟ್ಟಲು
- ಕಡಲೆ ಹಿಟ್ಟು – 1 ಬಟ್ಟಲು
- ಅಕ್ಕಿ ಹಿಟ್ಟು – 1 ಚಮಚ
- ಬ್ರೆಡ್ ಪೌಡರ್ – 1 ಬಟ್ಟಲು
- ಈರುಳ್ಳಿ – 1 (ಸ್ಲೈಸ್ ಮಾಡಿದ್ದು)
- ಕ್ಯಾಪ್ಸಿಕಂ – 1 (ಸ್ಲೈಸ್ ಮಾಡಿದ್ದು)
- ಅಚ್ಚ ಖಾರದ ಪುಡಿ – 1 ಚಮಚ
- ಕಾಳು ಮೆಣಸು ಪುಡಿ – ½ ಚಮಚ
- ಉಪ್ಪು – ರುಚಿಗೆ ತಕ್ಕಷ್ಟು
- ಎಣ್ಣೆ – ಕರಿಯಲು ಬೇಕಾದಷ್ಟು
👉 ಮಾಡುವ ವಿಧಾನ:
ಮೊದಲು ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಅಕ್ಕಿ ಹಿಟ್ಟು, ಕಾಳು ಮೆಣಸು ಪುಡಿ, ಖಾರದ ಪುಡಿ ಹಾಗೂ ಉಪ್ಪು ಹಾಕಿ ಸ್ವಲ್ಪ ನೀರಿನಿಂದ ದಪ್ಪ ಮಿಶ್ರಣ ತಯಾರಿಸಿ.
ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಅದರಲ್ಲಿ ಈರುಳ್ಳಿ ಹಾಗೂ ಕ್ಯಾಪ್ಸಿಕಂ ಹಾಕಿ ಸ್ವಲ್ಪ ಫ್ರೈ ಮಾಡಿ, ಬದಿಗಿಡಿ.
ನಂತರ ಬೇಬಿ ಕಾರ್ನ್ ತುಂಡುಗಳನ್ನು ತಯಾರಿಸಿದ ಮಿಶ್ರಣದಲ್ಲಿ ಅದ್ದಿ, ಮೇಲೆ ಬ್ರೆಡ್ ಪೌಡರ್ ಹೊದ್ದುಕೊಂಡು ಬಿಸಿ ಎಣ್ಣೆಯಲ್ಲಿ ಬಿಟ್ಟು ಕರಿಯಿರಿ. ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬಂದ ತಕ್ಷಣ ತೆಗೆದು, ಕರಿದ ಈರುಳ್ಳಿ ಮತ್ತು ಕ್ಯಾಪ್ಸಿಕಂ ಮೇಲೆ ಉದುರಿಸಿ ಸವಿಯಿರಿ.
✨ ಬಿಸಿ ಬಿಸಿ ಬೇಬಿ ಕಾರ್ನ್ ಫ್ರೈ ಸವಿಯಲು ಸಿದ್ಧವಾಗಿದೆ! ಚಟ್ನಿ ಅಥವಾ ಟೊಮೇಟೊ ಸಾಸ್ ಜೊತೆಗೆ ತಿನ್ನಿದರೆ ಇನ್ನಷ್ಟು ರುಚಿ.




