Cooking Oil Price Hike : ದಿನಬಳಕೆ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿರುವ ಜನಸಾಮಾನ್ಯರಿಗೆ ಈಗ ಮತ್ತೊಂದು ಆಘಾತ ಎದುರಾಗಿದೆ.

Cooking Oil Price Hike : ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ತತ್ತರದಿಂದ ಬಳಲುತ್ತಿರುವ ಜನರಿಗೆ ಮತ್ತೊಂದು ಆಘಾತವಾಗಿದೆ. ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯ ನಂತರ, ಈಗ ಅಡುಗೆ ಎಣ್ಣೆಯ ಬೆಲೆಯೂ ಗಗನಕ್ಕೇರಿದೆ. ಕಳೆದ ಒಂದು ವಾರದಲ್ಲಿ ವಿವಿಧ ಬ್ರ್ಯಾಂಡ್ಗಳ ಅಡುಗೆ ಎಣ್ಣೆ ದರದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ.
ಒಂದೇ ವಾರದಲ್ಲಿ ದರ ಹೈಕ್
ಅಡುಗೆ ಮನೆಯ ಅವಿಭಾಜ್ಯ ಅಂಗವಾಗಿರುವ ಎಣ್ಣೆಯ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ದರ ಏರಿಕೆಯ ಪ್ರಮುಖ ಕಾರಣವಾಗಿದೆ. ಏಳು ದಿನಗಳಲ್ಲಿ ಹತ್ತು ಲೀಟರ್ ಸೂರ್ಯಕಾಂತಿ ಎಣ್ಣೆಯ ದರ 1600 ರಿಂದ 1620 ರೂಪಾಯಿಗೆ ಏರಿಕೆಯಾಗಿದೆ. ಪಾಮ್ ಆಯಿಲ್ ದರದಲ್ಲೂ ಲೀಟರ್ಗೆ ಸುಮಾರು 20 ರೂಪಾಯಿ ಏರಿಕೆಯಾಗಿದೆ.
ಬೆಲೆ ಏರಿಕೆಯ ಕಾರಣಗಳು
- ಜಾಗತಿಕ ಮಾರುಕಟ್ಟೆ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಖಾದ್ಯ ತೈಲ ಬೆಲೆ ಏರಿಕೆಯಾಗಿದೆ.
- ಆಮದು ಸುಂಕ ಮತ್ತು ರೂಪಾಯಿ ಮೌಲ್ಯ: ಭಾರತವು ಅಡುಗೆ ಎಣ್ಣೆ ಅತಿದೊಡ್ಡ ಆಮದುದಾರ ರಾಷ್ಟ್ರವಾಗಿದ್ದು, ಡಾಲರ್ ಎದುರು ರೂಪಾಯಿ ಮೌಲ್ಯ ಕುಸಿಯುತ್ತಿರುವುದರಿಂದ ಆಮದು ದುಬಾರಾಗಿದೆ.
- ಪೂರೈಕೆ ಕೊರತೆ: ಮುಕ್ತ ಮಾರುಕಟ್ಟೆಯಲ್ಲಿ ಖಾದ್ಯ ತೈಲದ ಪೂರೈಕೆ ಕಡಿಮೆಯಾಗಿದ್ದು, ಬೇಡಿಕೆ ಹೆಚ್ಚಿರುವುದು ದರ ಏರಿಕೆಗೆ ಕಾರಣವಾಗಿದೆ.
ಇದನ್ನು ಓದಿ : ತಿಪಟೂರಿನಲ್ಲಿ Deadly Accident – ಬೈಕ್ ಸವಾರ ಸಾವು

ವಿವಿಧ ಎಣ್ಣೆಗಳ ಇಂದಿನ ದರ ಪಟ್ಟಿ (ಲೀಟರ್ ಪ್ರತಿ)
| ಎಣ್ಣೆ ವಿಧ | ಹಿಂದಿನ ದರ | ಇವತ್ತಿನ ದರ |
| ಸೂರ್ಯಕಾಂತಿ ಎಣ್ಣೆ | 140 | 160 |
| ಕಡಲೆಕಾಯಿ ಎಣ್ಣೆ | 210 | 220 |
| ಪಾಮ್ ಆಯಿಲ್ | 116 | 122 |
| ಸೋಯಾ ಎಣ್ಣೆ | 130 | 140 |
| ರೈಸ್ ಬ್ರಾನ್ ಆಯಿಲ್ | 136 | 140 |
| ಸಾಸುವೆ ಎಣ್ಣೆ | 175 | 180 |
| ದೀಪದ ಎಣ್ಣೆ | 126 | 130 |
ಗೃಹಿಣಿಯರ ಆತಂಕ
ಬೆಲೆ ಏರಿಕೆಯಿಂದಾಗಿ ಅಡುಗೆ ಮನೆಯ ಬಜೆಟ್ ನಿರ್ವಹಿಸುವುದು ಕಷ್ಟವಾಗುತ್ತಿದೆ. ತರಕಾರಿ ಬೆಲೆ ಏರಿಕೆಯ ನಡುವೆ ಈಗ ಅಡುಗೆ ಎಣ್ಣೆಯೂ ದುಬಾರಿಯಾಗಿರುವುದು ಒಗ್ಗರಣೆ ಹಾಕುವ ಮುನ್ನವೂ ಯೋಚನೆ ಮಾಡುವಂತೆ ಮಾಡಿದೆ” ಎಂದು ಗೃಹಿಣಿಯರು ಅಳಲು ತೋಡಿಕೊಳ್ಳುತ್ತಿದ್ದಾರೆ. ಮುಂಬರುವ ದಿನಗಳಲ್ಲಿ ಬೆಲೆ ಇಳಿಕೆಯಾಗುತ್ತದೆಯೇ ಅಥವಾ ಮತ್ತಷ್ಟು ಏರಿಕೆಯಾಗುತ್ತದೆಯೇ ಕಾದು ನೋಡಬೇಕಿದೆ.
ಇದನ್ನು ನೋಡಿ : ಗಣರಾಜ್ಯೋತ್ಸವದಂದು ರಾಜ್ಯಪಾಲರ ಭಾಷಣ – ನಾವೇ ಭಾಷಣ ಬರೆದು ಕೊಡ್ತೀವಿ ಎಂದ ಸಿಎಂ




