Kitchen Recipe : ಬೆಳಗಿನ ಉಪಾಹಾರಕ್ಕೆ ಅಥವಾ ಮಧ್ಯಾಹ್ನದ ಊಟಕ್ಕೆ ಸುಲಭವಾಗಿ ಮಾಡಬಹುದಾದ, ರುಚಿಕರ ಮತ್ತು ಆರೋಗ್ಯಕರ ಅನ್ನದ ಪದಾರ್ಥವೇ ಕ್ಯಾರೆಟ್ ಬಾತ್. ಕಡಿಮೆ ಸಮಯದಲ್ಲಿ ತಯಾರಾಗುವ ಈ ರೆಸಿಪಿ ಮಕ್ಕಳಿಗೂ, ದೊಡ್ಡವರಿಗೂ ಇಷ್ಟವಾಗುತ್ತದೆ.

Kitchen Recipe : ಬೇಕಾಗುವ ಪದಾರ್ಥಗಳು
- ಬೇಯಿಸಿದ ಅನ್ನ – 1 ಬಟ್ಟಲು
- ಕ್ಯಾರೆಟ್ – 2 (ತುರಿದದ್ದು)
- ಈರುಳ್ಳಿ – 1 (ಸಣ್ಣಗೆ ಹೆಚ್ಚಿದದ್ದು)
- ಹಸಿ ಮೆಣಸಿನಕಾಯಿ – 4
- ಶುಂಠಿ – ಸ್ವಲ್ಪ (ತುರಿದದ್ದು)
- ಕರಿಬೇವು – ಸ್ವಲ್ಪ
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ಲಿಂಬೆಹಣ್ಣಿನ ರಸ – ಸ್ವಲ್ಪ
- ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು
- ಉದ್ದಿನ ಬೇಳೆ – ಸ್ವಲ್ಪ
- ಸಾಸಿವೆ – ಸ್ವಲ್ಪ
- ಕಡಲೆಬೀಜ – ಸ್ವಲ್ಪ
- ಅರಿಶಿಣ – ಸ್ವಲ್ಪ
- ಉಪ್ಪು – ರುಚಿಗೆ ತಕ್ಕಷ್ಟು
ಇದನ್ನು ಓದಿ : ತುಮಕೂರಿನಲ್ಲಿ ದಳಪತಿ ಅಬ್ಬರ – ಮುಂದಿನ ಸಿಎಂ HDK ನೇ ಅಂದ್ರು
ಕ್ಯಾರೆಟ್ ಬಾತ್ ಮಾಡುವ ವಿಧಾನ
ಮೊದಲು ಕ್ಯಾರೆಟ್ನ ಸಿಪ್ಪೆ ತೆಗೆದು ಚೆನ್ನಾಗಿ ತುರಿದುಕೊಳ್ಳಿ.
ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ಸಾಸಿವೆ, ಉದ್ದಿನ ಬೇಳೆ ಮತ್ತು ಕಡಲೆಬೀಜ ಹಾಕಿ ಸಿಡಿದ ನಂತರ ಹಸಿ ಮೆಣಸಿನಕಾಯಿ, ಶುಂಠಿ ಹಾಗೂ ಕರಿಬೇವು ಸೇರಿಸಿ ಒಗ್ಗರಣೆ ಸಿದ್ಧಪಡಿಸಿ.
ಈಗ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಗೋಲ್ಡನ್ ಬ್ರೌನ್ ಆಗುವವರೆಗೆ ಹುರಿಯಿರಿ.
ನಂತರ ತುರಿದ ಕ್ಯಾರೆಟ್ ಮತ್ತು ಅರಿಶಿಣ ಹಾಕಿ ಚೆನ್ನಾಗಿ ಕಲಸಿ, ಕ್ಯಾರೆಟ್ ಸೊಪ್ಪಾಗುವವರೆಗೆ ಹುರಿಯಿರಿ.
ಕ್ಯಾರೆಟ್ ಚೆನ್ನಾಗಿ ಬೇಯಿದ ಬಳಿಕ, ಬೇಯಿಸಿದ ಅನ್ನ, ಉಪ್ಪು ಮತ್ತು ಲಿಂಬೆಹಣ್ಣಿನ ರಸ ಸೇರಿಸಿ ನಿಧಾನವಾಗಿ ಕಲಸಿ. ಕೊನೆಯಲ್ಲಿ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಿ.
ಸವಿಯಲು ಸಿದ್ಧ
ಇಷ್ಟೇ! ಈಗ ರುಚಿಕರವಾದ ಕ್ಯಾರೆಟ್ ಬಾತ್ ಸವಿಯಲು ಸಿದ್ಧ. ಇದನ್ನು ಮೊಸರು, ಪಪ್ಪಡ ಅಥವಾ ಉಪ್ಪಿನಕಾಯಿಯ ಜೊತೆಗೆ ಸರ್ವ್ ಮಾಡಿದರೆ ಇನ್ನೂ ರುಚಿಯಾಗಿರುತ್ತದೆ.
ಇದನ್ನು ನೋಡಿ : ಕಾಂಗ್ರೆಸ್ ಸರ್ಕಾರ ಇದ್ರೆ ಎಷ್ಟು, ಸತ್ತರೆ ಎಷ್ಟು- ಕೈ ನಾಯಕರ ವಿರುದ್ಧ SURESH GOWDA ಆಕ್ರೋಶ




