ತಿರುಪತಿ ಲಡ್ಡುಗೆ ನಕಲಿ ತುಪ್ಪ ಬಳಕೆ – ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ CBI.

ತಿರುಮಲ ತಿರುಪತಿ ದೇವಸ್ಥಾನಂ ಲಡ್ಡು ತುಪ್ಪ ಕಲಬೆರಕೆ ಪ್ರಕರಣದಲ್ಲಿ ಕೇಂದ್ರ ತನಿಖಾ ದಳ (CBI) ನೇತೃತ್ವದ ವಿಶೇಷ ತನಿಖಾ ತಂಡ ತನ್ನ ಅಂತಿಮ ಚಾರ್ಜ್ಶೀಟ್ ಅನ್ನು ಸಲ್ಲಿಸಿದ್ದು, ಪವಿತ್ರ ಪ್ರಸಾದವನ್ನು ಕಳಂಕಗೊಳಿಸಿದ ಭಾರೀ ಭ್ರಷ್ಟಾಚಾರದ ಜಾಲವನ್ನು ಬಹಿರಂಗಪಡಿಸಿದೆ.
ನೆಲ್ಲೂರು ಕೋರ್ಟ್ಗೆ ಚಾರ್ಜ್ಶೀಟ್ ಸಲ್ಲಿಸಿದ CBI
ನೆಲ್ಲೂರು CBI ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ಶೀಟ್ನಲ್ಲಿ ಒಟ್ಟು 36 ಮಂದಿ ಪ್ರಮುಖ ಆರೋಪಿಗಳ ಹೆಸರುಗಳು ಉಲ್ಲೇಖವಾಗಿವೆ. ಇವರಲ್ಲಿ ಡೈರಿ ಮಾಲೀಕರು, ವ್ಯಾಪಾರಿಗಳು ಹಾಗೂ ಮಾಜಿ ಟಿಟಿಡಿ ಅಧಿಕಾರಿಗಳು ಸೇರಿದ್ದಾರೆ. ಸುಮಾರು 15 ತಿಂಗಳುಗಳ ಕಾಲ 12 ರಾಜ್ಯಗಳಲ್ಲಿ ನಡೆಸಿದ ತೀವ್ರ ತನಿಖೆಯ ಬಳಿಕ ಈ ಚಾರ್ಜ್ಶೀಟ್ ಸಲ್ಲಿಸಲಾಗಿದೆ.
ಇದನ್ನು ಓದಿ : ತುಮಕೂರಿನಲ್ಲಿ ದಳಪತಿ ಅಬ್ಬರ – ಮುಂದಿನ ಸಿಎಂ HDK ನೇ ಅಂದ್ರು

ನಕಲಿ ತುಪ್ಪ ತಯಾರಿಸಿ, ಶುದ್ಧ ತುಪ್ಪದಂತೆ ತೋರಿಸಲಾಗಿತ್ತು
ಸಿಬಿಐ ತನಿಖೆ ಪ್ರಕಾರ, 2019 ರಿಂದ 2024ರ ಅವಧಿಯಲ್ಲಿ ಟಿಟಿಡಿಗೆ ಸರಬರಾಜು ಮಾಡಲಾದ ಸುಮಾರು 68 ಲಕ್ಷ ಕಿಲೋಗ್ರಾಂ ನಕಲಿ ತುಪ್ಪ, ಅಂದಾಜು 250 ಕೋಟಿ ರೂಪಾಯಿ ಮೌಲ್ಯದದ್ದು. ಶುದ್ಧ ಹಾಲಿನ ತುಪ್ಪದ ಬದಲಾಗಿ ಪಾಮ್ ಆಯಿಲ್, ಕರ್ನಲ್ ಆಯಿಲ್, ರಾಸಾಯನಿಕ ಮಿಶ್ರಣಗಳು, ಪ್ರಾಣಿ ಕೊಬ್ಬು ಸೇರಿದಂತೆ ಕಡಿಮೆ ದರದ ಪದಾರ್ಥಗಳನ್ನು ಬಳಸಿ ನಕಲಿ ತುಪ್ಪ ತಯಾರಿಸಿ, ಶುದ್ಧ ತುಪ್ಪದಂತೆ ತೋರಿಸಲಾಗಿತ್ತು ಎಂದು ಸಿಬಿಐ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಮುಖ ಆರೋಪಿಗಳು
ಉತ್ತರಾಖಂಡದ ಭೋಲೆ ಬಾಬಾ ಆರ್ಗಾನಿಕ್ ಡೈರಿ (ನಿರ್ದೇಶಕರು ಪೊಮಿಲ್ ಜೈನ್ ಮತ್ತು ವಿಪಿನ್ ಜೈನ್) ಈ ನಕಲಿ ತುಪ್ಪದ ರಾಕೇಟ್ನ ಮುಖ್ಯ ಕೇಂದ್ರ ಎಂದು ತನಿಖೆ ಗುರುತಿಸಿದೆ. ವೈಷ್ಣವಿ ಡೈರಿ (ಸಿಇಒ ಅಪೂರ್ವ ವಿನಾಯಕಾಂತ್ ಚಾವ್ಡಾ), ಎಆರ್ ಡೈರಿ (ಎಂಡಿ ಆರ್ ರಾಜಶೇಖರನ್), ದೆಹಲಿಯ ವ್ಯಾಪಾರಿ ಅಜಯ್ ಕುಮಾರ್ ಸುಗಂಧ್ (ರಾಸಾಯನಿಕ ಸರಬರಾಜುದಾರ), ಮಾಜಿ ಟಿಟಿಡಿ ಅಧಿಕಾರಿಗಳಾದ ಪ್ರಳಯ ಕಾವೇರಿ ಮುರಳಿ ಕೃಷ್ಣ, ಆರ್ಎಸ್ಎಸ್ವಿಆರ್ ಸುಬ್ರಹ್ಮಣ್ಯಂ ಮತ್ತು ಇತರರು ಪ್ರಮುಖ ಆರೋಪಿಗಳು ಎಂದು ತನಿಖೆ ಗುರುತಿಸಿದೆ.

ಇದನ್ನು ನೋಡಿ : ಕಾಂಗ್ರೆಸ್ ಸರ್ಕಾರ ಇದ್ರೆ ಎಷ್ಟು, ಸತ್ತರೆ ಎಷ್ಟು- ಕೈ ನಾಯಕರ ವಿರುದ್ಧ SURESH GOWDA ಆಕ್ರೋಶ




