Dhanveer ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಹಯಗ್ರೀವ’ ಟೀಸರ್ ಬಿಡುಗಡೆ ಆಗಿದೆ.

ನಟ ಧನ್ವಿರ್ ಅವರು ಇತ್ತೀಚಿನ ಕೆಲ ವರ್ಷಗಳ ಹಿಂದಷ್ಟೇ ಸಿನಿಮಾರಂಗಕ್ಕೆ ಬಂದರೂ ಕೂಡ ದೊಡ್ಡ ದೊಡ್ಡ ನಟ ನಟಿಯರ ಒಡನಾಟ ಅವರಿಗೆ ಮೊದಲಿನಿಂದಲೂ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಯಾದ ಇವರು ಮೊದಲಿನಿಂದಲೂ ನಟ ದರ್ಶನ್ ಜೊತೆಗೆ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ದರ್ಶನ್ ಅವರು ರೇಣುಕಾಸ್ವಾಮಿ ಪ್ರಕರಣದಲ್ಲಿ ಅರೆಸ್ಟ್ ಆದ ಬಳಿಕ ದರ್ಶನ್ ಪರ ಹಾಗೂ ಅವರ ಅಭಿಮಾನಿಗಳ ಪರ ನಿಲ್ಲುವ ಮೂಲಕ ನಟ ಧನ್ವಿರ್ ಅವರು ಮತ್ತೆ ಮುನ್ನಲೆಗೆ ಬಂದಿದ್ದರು.
‘ಹಯಗ್ರೀವ’ಟೀಸರ್ ರಿಲೀಸ್
ಇದೀಗ Dhanveer ನಟನೆಯ ಬಹು ನಿರೀಕ್ಷಿತ ಸಿನಿಮಾ ‘ಹಯಗ್ರೀವ’ ಟೀಸರ್ ಬಿಡುಗಡೆ ಆಗಿದ್ದು, ಪೊಲೀಸ್ ಲುಕ್ನಲ್ಲಿ ನಟನ ಅಬ್ಬರ ಅಭಿಮಾನಿಗಳ ಗಮನ ಸೆಳೆದಿದೆ. ಟೀಸರ್ ಅನ್ನು ಆನಂದ್ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಈ ಸಿನಿಮಾಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಪತ್ನಿ ವಿಜಯಲಕ್ಷ್ಮೀ ದರ್ಶನ್ ಕೂಡ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡು ಸಾಥ್ ನೀಡಿದ್ದಾರೆ.
ಇದನ್ನು ಓದಿ : Tumakur ನಲ್ಲಿ Cult ಸಿನಿಮಾಗೆ ಭರ್ಜರಿ ರೆಸ್ಪಾನ್ಸ್..!!
ಫೆಬ್ರವರಿ 27ಕ್ಕೆ ಸಿನಿಮಾ ಬಿಡುಗಡೆ
‘ಹಯಗ್ರೀವ’ ಸಿನಿಮಾ ಫೆಬ್ರವರಿ 27ರಂದು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕೆ.ವೆ.ಸಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಸಮೃದ್ಧಿ ಮಂಜುನಾಥ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ರಘುಕುಮಾರ್ ಒ.ಆರ್ ನಿರ್ದೇಶನ ಮಾಡಿದ್ದಾರೆ.
ಧನ್ವೀರ್ಗೆ ಜೋಡಿಯಾದ ಸಂಜನಾ ಆನಂದ್
ಧನ್ವೀರ್ಗೆ ಜೋಡಿಯಾಗಿ ‘ಸಲಗ’ ಖ್ಯಾತಿಯ ಸಂಜನಾ ಆನಂದ್ ನಟಿಸಿದ್ದು, ರಂಗಾಯಣ ರಘು, ತಾರಾ, ಸಾಧು ಕೋಕಿಲ, ರವಿಶಂಕರ್ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಧನ್ವೀರ್ ಈ ಚಿತ್ರದಲ್ಲಿ ತುಂಬಾ ಶ್ರಮಪಟ್ಟು ನಟಿಸಿದ್ದು, ಇಡೀ ಸಿನಿಮಾ ಹೊಸ ವಿಷಯಾಧಾರಿತವಾಗಿ ಮೂಡಿಬಂದಿದೆ ಎನ್ನಲಾಗಿದೆ. ಕನ್ನಡ ಚಿತ್ರರಂಗದಲ್ಲೇ ಈ ರೀತಿಯ ಕಥಾಹಂದರ ಇದುವರೆಗೆ ಬಂದಿಲ್ಲ ಎಂಬ ಮಾತು ಕೂಡ ಕೇಳಿಬರುತ್ತಿದೆ.
ಇದನ್ನು ನೋಡಿ : HD KUMARASWAMY | ಕೆಲವೇ ಕ್ಷಣಗಳಲ್ಲಿ ತುಮಕೂರು ಗ್ರಾಮಾಂತರಕ್ಕೆ ಹೆಚ್ಡಿಕೆ ಎಂಟ್ರಿ




