Tumakur ಗಾಯತ್ರಿ ಥಿಯೇಟರ್ನಲ್ಲಿ ಕಲ್ಟ್ ಸಿನಿಮಾ ಇಂದು ತೆರೆಗೆ ಬಂದಿದ್ದು ಅಭಿಮಾನಿಗಳು ಹಾರ ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ..!

Tumakur : ಸಚಿವ ಜಮೀರ್ ಅಹಮದ್ ಖಾನ್ ಅವರ ಪುತ್ರ ಝೈದ್ ಖಾನ್ ಅವರ ಸಿನಿಮಾ ಇಂದು ತೆರೆಗೆ ಬಂದಿದ್ದು, ಅಭಿಮಾನಿಗಳಿಂದ ಭರ್ಜರಿ ರೆಸ್ಪಾನ್ಸ್ ಸಿಗ್ತಿದೆ. ಹೌದು ಇಂದು ರಾಜ್ಯಾದ್ಯಂತ ಝೈದ್ ಖಾನ್ ಅವರ ಕಲ್ಟ್ ಸಿನಿಮಾ ಇಂದು ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿದ್ದು, ಸಿನಿಮಾ ನೋಡಲು ಫ್ಯಾನ್ಸ್ ಥಿಯೇಟರ್ನತ್ತ ಆಗಮಿಸ್ತಾ ಇದ್ದಾರೆ.

ತುಮಕೂರಿನಲ್ಲೂ ಝೈದ್ ಖಾನ್ ಅಭಿನಯದ ಕಲ್ಟ್ ಸಿನಿಮಾ ರಿಲೀಸ್ ಆಗಿದ್ದು, ಅಭಿಮಾನಿಗಳಲ್ಲಿ ಸಂಭ್ರಮ ಮನೆ ಮಾಡಿತ್ತು. ನಗರದ ಗಾಯತ್ರಿ ಥಿಯೇಟರ್ ನಲ್ಲಿ ಕಲ್ಟ್ ಸಿನಿಮಾ ರಿಲೀಸ್ ಆಗಿದ್ದು, ಮೊದಲ ದಿನದ ಸಿನಿಮಾ ನೋಡಲು ಅಭಿಮಾನಿಗಳು ಮುಗಿಬಿದ್ದರು. ಥಿಯೇಟರ್ ಮುಂದೆ ನಟ ಝೈದ್ ಖಾನ್ ನ ಕಟೌಟ್, ಬ್ಯಾನರ್ ಹಾಕಲಾಗಿದ್ದು, ಕಟೌಟ್ಗಳಿಗೆ ಅಭಿಮಾನಿಗಳು ಹಾರವನ್ನು ಹಾಕಿ, ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.

ಸಚಿವ ಜಮೀರ್ ಪುತ್ರ ಝೈದ್ ಖಾನ್ ಅವರ ಕಲ್ಟ್ ಸಿನಿಮಾಗೆ ಅಭಿಮಾನಿಗಳ,ವಿದ್ಯಾರ್ಥಿಗಳು, ಹಾಗೂ ಸಿನಿಮಾ ಪ್ರೇಕ್ಷಕರು ಸಿನಿಮಾವನ್ನು ವೀಕ್ಷಣೆ ಮಾಡಿದ್ದು, ಮೊದಲ ದಿನವೇ ಸಿನಿಮಾಗೆ ಫ್ಯಾನ್ಸ್ ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ. ಗಾಯತ್ರಿ ಥಿಯೇಟರ್ ಮುಂಭಾಗ ತಮಟೆ ಏಟಿಗೆ ಅಭಿಮಾನಿಗಳು ಕುಣಿದು ಕೊಪ್ಪಳಿಸಿ, ಸಿನಿಮಾ 100 ದಿನಗಳ ಕಾಲ ಯಶಸ್ವಿ ಪ್ರದರ್ಶನ ಕಾಣಲಿ ಎಂದು ಶುಭ ಹಾರೈಸಿದ್ರು.

ಇನ್ನು ಸಿನಿಮಾ ವೀಕ್ಷಿಸಿದ ಅಭಿಮಾನಿಗಳು ಸಿನಿಮಾದ ಸಾಂಗ್, ಸಾಹಿತ್ಯ, ಡೈಲಾಗ್ ಚೆನ್ನಾಗಿದೆ ಎಂದು ಸಿನಿಮಾ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು.
ಇನ್ನು ಸ್ಯಾಂಡಲ್ವುಡ್ಗೆ ರೈಸಿಂಗ್ ಸ್ಟಾರ್ ಹುಟ್ಟಿಕೊಂಡಿದ್ದು, ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಬೆಳೆಸ್ತಾರೆ ಎಂದು ಅಭಿಪ್ರಾಯ ಹಂಚಿಕೊಂಡರು.

ಕಲ್ಟ್ ಸಿನಿಮಾ ರಿಲೀಸ್ ಆದ ಮೊದಲ ದಿನವೇ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ನೂರು ದಿನ ಪೂರೈಸಲಿ ಎಂದು ಹಾರೈಸಿದ್ರು. ಸ್ಯಾಂಡಲ್ವುಡ್ನಲ್ಲಿ ಕಲ್ಟ್ ಮೂವಿ ಹೊಸ ದಾಖಲೆ ಬರೆಯುತ್ತಾ ಎಂದು ಕಾದುನೋಡಬೇಕಿದೆ.




