Kitchen Recipe : ಸಾಮಾನ್ಯವಾಗಿ ನಾವು ಚಿತ್ರಾನ್ನ, ಮೊಸರನ್ನ, ಪುಳಿಯೋಗರೆ, ಪಾಲಕ್ ರೈಸ್ ಅಥವಾ ಪುದೀನಾ ರೈಸ್ ತಿನ್ನುತ್ತೇವೆ.

Kitchen Recipe : ಆದರೆ ಈ ಎಲ್ಲ ರೈಸ್ ರೆಸಿಪಿಗಳ ಪೈಕಿ ಕರಿಬೇವಿನ ರೈಸ್ ಒಂದು ವಿಭಿನ್ನ ರುಚಿಯ, ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವ ಅನ್ನವಾಗಿದೆ.
ನೀವು ಇನ್ನೂ ಕರಿಬೇವಿನ ರೈಸ್ ಟ್ರೈ ಮಾಡಿಲ್ಲ ಅಂದ್ರೆ, ಈ ಬಾರಿ ತಪ್ಪದೇ ಮಾಡಿ ನೋಡಿ.
ಕರಿಬೇವಿನ ರೈಸ್ ವಿಶೇಷತೆ
ಕರಿಬೇವಿನ ಸುಗಂಧ, ಮಸಾಲೆಗಳ ರುಚಿ ಮತ್ತು ಅನ್ನದ ಸಾಫ್ಟ್ ಟೆಕ್ಸ್ಚರ್ ಒಂದಾಗಿ ಈ ರೈಸ್ ಬಾಯಲ್ಲಿ ನೀರೂರಿಸುವಷ್ಟು ರುಚಿಕರವಾಗಿರುತ್ತದೆ.
ಲಂಚ್ ಬಾಕ್ಸ್, ಮನೆ ಊಟ ಅಥವಾ ವಿಶೇಷ ದಿನಗಳಿಗೆ ಸೂಕ್ತ ಆಯ್ಕೆ.
ಬೇಕಾಗುವ ಸಾಮಗ್ರಿಗಳು
- ಅಕ್ಕಿ – 1 ಕಪ್
- ಎಣ್ಣೆ – 2 ಚಮಚ
- ಶೇಂಗಾ – 2 ಚಮಚ
- ಗೋಡಂಬಿ – 2 ಚಮಚ
- ಪುಟಾಣಿ (ಬೇಳೆ) – ಮುಕ್ಕಾಲು ಕಪ್
- ತೆಂಗಿನಕಾಯಿ ತುರಿ – 1 ಚಮಚ
- ಕೆಂಪು ಮೆಣಸಿನಕಾಯಿ – 6
- ಕರಿಬೇವು – 1 ಕಪ್
- ಜೀರಿಗೆ – 1 ಚಮಚ
- ಬೆಳ್ಳುಳ್ಳಿ – 6 ಎಸಳು
- ಉಪ್ಪು – ರುಚಿಗೆ ತಕ್ಕಷ್ಟು
- ಕೊತ್ತಂಬರಿ ಸೊಪ್ಪು – ಸ್ವಲ್ಪ
- ತುಪ್ಪ – 1 ಚಮಚ
ಕರಿಬೇವಿನ ರೈಸ್ ಮಾಡುವ ವಿಧಾನ
1: ಮೊದಲಿಗೆ ಒಂದು ಕಪ್ ಕರಿಬೇವಿನ ಎಲೆಗಳನ್ನು ಚೆನ್ನಾಗಿ ತೊಳೆದು ಒಣಗಿಸಿಕೊಳ್ಳಿ.
2: ಕುಕ್ಕರ್ನಲ್ಲಿ 1 ಕಪ್ ಅಕ್ಕಿಗೆ 2 ಕಪ್ ನೀರು ಹಾಕಿ ಅನ್ನವನ್ನು ಸಡಿಲವಾಗಿ ಬೇಯಿಸಿ.
3: ಬಾಣಲೆಯಲ್ಲಿ 2 ಚಮಚ ಎಣ್ಣೆ ಬಿಸಿ ಮಾಡಿ.
➡️ ಶೇಂಗಾ ಮತ್ತು ಗೋಡಂಬಿಯನ್ನು ಕಡಿಮೆ ಉರಿಯಲ್ಲಿ ಹುರಿದು ಬೇರೆ ತಟ್ಟೆಯಲ್ಲಿ ಇಡಿ.
4: ಅದೇ ಬಾಣಲೆಯಲ್ಲಿ ಒಣ ಮೆಣಸಿನಕಾಯಿ, ಕರಿಬೇವು ಮತ್ತು ಜೀರಿಗೆಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ.
➡️ ನಂತರ ಗ್ಯಾಸ್ ಆಫ್ ಮಾಡಿ, ಬೆಳ್ಳುಳ್ಳಿ ಎಸಳು ಹಾಗೂ ಬೇಳೆ ಸೇರಿಸಿ ತಣ್ಣಗಾಗಲು ಬಿಡಿ.
5: ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸರ್ ಜಾರ್ಗೆ ಹಾಕಿ.
➡️ ತೆಂಗಿನಕಾಯಿ ತುಂಡುಗಳು ಮತ್ತು ಉಪ್ಪು ಸೇರಿಸಿ ಒರಟಾಗಿ ರುಬ್ಬಿಕೊಳ್ಳಿ.
6:ಬೇಯಿಸಿದ ಅನ್ನಕ್ಕೆ ಈ ಕರಿಬೇವಿನ ಮಸಾಲೆ, ಹುರಿದ ಶೇಂಗಾ ಹಾಗೂ ಗೋಡಂಬಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
7: ಕೊನೆಗೆ ಸ್ವಲ್ಪ ಹುರಿದ ಕರಿಬೇವು, 1 ಚಮಚ ತುಪ್ಪ ಮತ್ತು ಕೊತ್ತಂಬರಿ ಸೊಪ್ಪು ಹಾಕಿ.
ಸವಿಯಲು ಸಿದ್ಧ
ಈಗ ಬಾಯಲ್ಲಿ ನೀರೂರಿಸುವ ಕರಿಬೇವಿನ ರೈಸ್ ಸವಿಯಲು ಸಿದ್ಧವಾಗಿದೆ.
ಈ ಅನ್ನವನ್ನು ಉಪ್ಪಿನಕಾಯಿ ಅಥವಾ ಮೊಸರಿನ ಜೊತೆಗೆ ತಿಂದರೆ ರುಚಿ ಇನ್ನಷ್ಟು ಸೂಪರ್ ಆಗಿರುತ್ತದೆ.




