Zee Kannada ಕನ್ನಡ ಕಿರುತೆರೆಯ ಮನರಂಜನೆಯ ಮಹಾರಾಜ ಎಂದೇ ಖ್ಯಾತಿ ಪಡೆದಿರುವ ಜೀ ಕನ್ನಡ ವಾಹಿನಿ ಮತ್ತೊಮ್ಮೆ ಪ್ರೇಕ್ಷಕರಿಗೆ ಗುಡ್ ನ್ಯೂಸ್ ನೀಡಿದೆ.

Zee Kannada : ಬಾಕ್ಸ್ ಆಫೀಸ್ನಲ್ಲಿ ಭಾರೀ ಯಶಸ್ಸು ಕಂಡ ‘ಕಾಂತಾರ: ಚಾಪ್ಟರ್ 1’ ಸಿನಿಮಾ ಇದೇ ಜನವರಿ 24 ರಂದು ಸಂಜೆ 7 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ಬಾಕ್ಸ್ ಆಫೀಸ್ ಸಕ್ಸಸ್ನಿಂದ ಟಿವಿ ಪರದೆಗೆ
ಧಾರಾವಾಹಿಗಳು, ರಿಯಾಲಿಟಿ ಶೋಗಳು ಮತ್ತು ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ಗಳ ಮೂಲಕ ಮನೆಮಂದಿಯ ಮನಗೆದ್ದಿರುವ ಜೀ ಕನ್ನಡ,
ಇದೀಗ ಭಾರತೀಯ ಚಿತ್ರರಂಗದಲ್ಲಿ ಮೈಲುಗಲ್ಲಾಗಿರುವ ಕಾಂತಾರ: ಚಾಪ್ಟರ್ 1 ಅನ್ನು ಕಿರುತೆರೆಗೆ ತರುತ್ತಿದೆ.
ಇದನ್ನು ಓದಿ : ವಿಜಯಲಕ್ಷ್ಮೀ ನಿಂದನೆ ಕೇಸ್ : `CCB’ ಸೈಬರ್ ಪೊಲೀಸರಿಂದ ನೋಟಿಸ್ ಜಾರಿ

‘ಕಾಂತಾರ: ಚಾಪ್ಟರ್ 1’ ಕಥೆ 4ನೇ ಶತಮಾನದ ಕದಂಬ ರಾಜವಂಶದ ಕಾಲಘಟ್ಟದಲ್ಲಿ ನಡೆಯುತ್ತದೆ.
ಕಾಂತಾರ ಪ್ರದೇಶದ ನಾಯಕ ಬೇರ್ಮೆ ಮತ್ತು ಬಾಂಗ್ರಾ ರಾಜ ಮನೆತನದ ನಡುವಿನ ಸಂಘರ್ಷವೇ ಚಿತ್ರದ ಕೇಂದ್ರಬಿಂದು.
ಈ ಚಿತ್ರ ಅದ್ಭುತ ಅರಣ್ಯಭೂಮಿ ಕಾಂತಾರ ಹುಟ್ಟಿನ ಕಥೆ, ಅದರ ಸಂಪ್ರದಾಯ, ನಂಬಿಕೆಗಳು ಮತ್ತು ಜನಪದ ಪರಂಪರೆಗಳನ್ನು ಅದ್ಭುತವಾಗಿ ಚಿತ್ರಿಸುತ್ತದೆ.
ಸಾಂಸ್ಕೃತಿಕ, ಭಾವನಾತ್ಮಕ ಹಾಗೂ ಜಾನಪದ ಅಂಶಗಳಿಂದ ಕೂಡಿರುವ ಈ ಸಿನಿಮಾ,
ಪ್ರೇಕ್ಷಕರನ್ನು ಆಳವಾಗಿ ಸ್ಪರ್ಶಿಸಿ ಭಾರತೀಯ ಚಿತ್ರರಂಗದಲ್ಲಿ ವಿಶೇಷ ಸ್ಥಾನ ಪಡೆದುಕೊಂಡಿದೆ.

ಜೀ ಕನ್ನಡದ ಅಧಿಕೃತ ಹೇಳಿಕೆ
“ಕಾಂತಾರ: ಚಾಪ್ಟರ್ 1 ಒಂದು ಸಿನಿಮಾ ಮಾತ್ರವಲ್ಲ, ಇದು ಕರ್ನಾಟಕದ ಸಂಸ್ಕೃತಿ ಮತ್ತು ಪರಂಪರೆಯ ಪ್ರತಿಬಿಂಬ. ಈ ಸಿನೆಮಾಟಿಕ್ ಮಾಸ್ಟರ್ಪೀಸ್ ಅನ್ನು ಜೀ ಕನ್ನಡದಲ್ಲಿ ಪ್ರಸಾರ ಮಾಡಲು ನಮಗೆ ಹೆಮ್ಮೆ ಇದೆ. ನಮ್ಮ ವಾಹಿನಿಯ ಮೂಲಕ ಮನೆಮಂದಿಯೆಲ್ಲ ಒಟ್ಟಾಗಿ ಈ ಚಿತ್ರವನ್ನು ವೀಕ್ಷಿಸಬಹುದು”
ಇದನ್ನು ನೋಡಿ : ಶಾಲಾ ಬಾಲಕಿ ಹಿಂಬಾಲಿಸಿದ ಕಿರಾತಕ ಮನೆ ಬಳಿ ಬಂದ ಬಾಲಕಿ ಏನ್ ಮಾಡಿದ್ಲು ಗೊತ್ತಾ




